ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಏಷ್ಯನ್ ಜೂನಿಯರ್ ಸ್ಕ್ವಾಷ್ ಗೆ 11 ಮಂದಿ ತಂಡ

Published 24 ಜೂನ್ 2024, 16:26 IST
Last Updated 24 ಜೂನ್ 2024, 16:26 IST
ಅಕ್ಷರ ಗಾತ್ರ

ನವದೆಹಲಿ: ಇಸ್ಲಾಮಾಬಾದ್‌ನಲ್ಲಿ ಮಂಗಳವಾರದಿಂದ ಆರಂಭವಾಗಲಿರುವ 31ನೇ ಏಷ್ಯನ್ ಜೂನಿಯರ್ ವೈಯಕ್ತಿಕ ಸ್ಕ್ವಾಷ್ ಚಾಂಪಿಯನ್‌ಷಿಪ್‌ನಲ್ಲಿ 11 ಆಟಗಾರರ ತಂಡ ಭಾರತವನ್ನು ಪ್ರತಿನಿಧಿಸಲಿದೆ.

ಐದು ದಿನಗಳ ಕೂಟದಲ್ಲಿ ಒಂಬತ್ತು ಆಟಗಾರರು ಆಯಾ ವಯೋಮಾನದ ವಿಭಾಗಗಳಲ್ಲಿ ಅಗ್ರ 10 ರಲ್ಲಿ ಸ್ಥಾನ ಪಡೆದಿದ್ದಾರೆ.

ಶಿವೇನ್ ಅಗರವಾಲ್ ಮತ್ತು ಆದ್ಯಾ ಬುಧಿಯಾ ಕ್ರಮವಾಗಿ ಬಾಲಕರ 15 ಮತ್ತು 13 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಎರಡನೇ ಶ್ರೇಯಾಂಕ ಪಡೆದಿದ್ದಾರೆ.

 ಭಾರತ ತಂಡ: 17 ವರ್ಷದೊಳಗಿನ ಬಾಲಕರು: ಯುಷಾ ನಫೀಸ್, ಶಿವೇನ್ ಅಗರವಾಲ್, ಲೋಕೇಶ್ ಸುಬ್ರಮಣಿ, ಧ್ರುವ್ ಬೋಪನಾ.

19 ವರ್ಷದೊಳಗಿನ ಬಾಲಕಿಯರು: ನಿರುಪಮಾ ದುಬೆ, ಶಮಿನಾ ರಿಯಾಜ್, ಉನ್ನತಿ ತ್ರಿಪಾಠಿ; ಅನಿಕಾ ದುಬೆ, ದಿವಾ ಶಾ (9),   ಅದ್ಯಾ ಬುಧಿಯಾ, ಗೌಸಿಕಾ ಎಂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT