ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾಜ್‌ಬಾಲ್‌: ರಾಜ್ಯ ತಂಡಕ್ಕೆ ಭರತ್‌, ದಿಪ್ಷಿಕಾ ನೇತೃತ್ವ

Published : 26 ಸೆಪ್ಟೆಂಬರ್ 2024, 16:33 IST
Last Updated : 26 ಸೆಪ್ಟೆಂಬರ್ 2024, 16:33 IST
ಫಾಲೋ ಮಾಡಿ
Comments

 ಬೆಂಗಳೂರು: ಭರತ್ ವಿ.ಬಿ. ಮತ್ತು ದಿಪ್ಸಿಖಾ ಗದ್ದಮ್ ಅವರು ಇದೇ 27ರಿಂದ 29ರವರೆಗೆ ಪಾಂಡಿಚೇರಿಯಲ್ಲಿ ನಡೆಯುವ 3ನೇ ಸಬ್ ಜೂನಿಯರ್ ರಾಷ್ಟ್ರೀಯ ಡಾಜ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಕರ್ನಾಟಕದ ಬಾಲಕರ ಮತ್ತು ಬಾಲಕಿಯರ ತಂಡವನ್ನು ಮುನ್ನಡೆಸಲಿದ್ದಾರೆ.

‌ಎಚ್‌ಎಎಲ್ ಪಬ್ಲಿಕ್ ಶಾಲೆಯ ದಿಪ್ಸಿಖಾ ಮತ್ತು ಬಾಲಕರ ತಂಡವನ್ನು ಸುರಾನ ಸ್ವತಂತ್ರ ಪಿಯು ಕಾಲೇಜಿನ ಭರತ್ ಅವರ ನಾಯಕತ್ವದಲ್ಲಿ ತಲಾ 12 ಸದಸ್ಯರನ್ನು ಒಳಗೊಂಡ ರಾಜ್ಯ ತಂಡವನ್ನು ಕರ್ನಾಟಕ ರಾಜ್ಯ ಡಾಡ್ಜ್‌ಬಾಲ್ ಸಂಸ್ಥೆ ಆಯ್ಕೆ ಮಾಡಿದೆ. ಟೂರ್ನಿಯಲ್ಲಿ 20ಕ್ಕೂ ಅಧಿಕ ರಾಜ್ಯಗಳ ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ. 

ಬಾಲಕಿಯರ ತಂಡ: ದಿಪ್ಸಿಖಾ ಗದ್ದಮ್, ಲೀಶಾ ಡಿ. ಚೌಹಾಣ್‌, ವರ್ಷಿತಾ ಎನ್, ವರ್ಷರಾಜ್, ಆಧ್ಯಾಶ್ರೀ, ಪಾವನಿ ಸಿ.ಎಚ್, ಧ್ರುವಿ ಎಸ್, ಪೂರ್ವಿ ಶೆಣೈ, ಆಶ್ರಿತಾ, ತನುಶ್ರೀ ಕೆ, ಲೌಕ್ಯಾ ಆರ್. ಮತ್ತು ಅಮೃತಾ ಆರ್; ರಾಘವೇಂದ್ರ (ಕೋಚ್‌). ಗೀತಾ (ಮ್ಯಾನೇಜರ್‌).

ಬಾಲಕರ ತಂಡ: ಭರತ್ ವಿ.ಬಿ, ವಿಶ್ವ ಐ.ಎಂ, ರಣವೀರ್ ರಾಣಾ, ಗೋಕುಲ್ ಟಿ. ರಾಜ್, ಸಂಜಯ್ ಆರ್, ದೇವಾಂಶ್ ಜೆ.ಎಸ್. ಭಂಡಾರಿ, ರಣವಿಜಯ್ ಸಿಂಗ್, ಶುಭ್ ಮಿತ್ತಲ್, ಮೇಘರಾಜ್ ಹೆಚ್, ಗಣೇಶ್ ಬಿ.ಆರ್, ವರುಣ್ ಬಿ. ಮತ್ತು ಧನ್ವಿತ್ ಯಾದವ್ ಎಚ್; ಸಂಪತ್ ಕುಮಾರ್ (ಕೋಚ್‌) ಮತ್ತು ರಾಘವೇಂದ್ರ (ಮ್ಯಾನೇಜರ್).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT