ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಕ್ರಾಸ್‌ಕಂಟ್ರಿ: ಶಿವಾಜಿಗೆ ಚಿನ್ನದ ಪದಕ

Published 16 ಜನವರಿ 2024, 16:24 IST
Last Updated 16 ಜನವರಿ 2024, 16:24 IST
ಅಕ್ಷರ ಗಾತ್ರ

ಬೆಂಗಳೂರು: ಶಿವಾಜಿ ಪಿ.ಎಂ ಅವರು ಬಿಹಾರದ ಗಯಾದಲ್ಲಿ ಸೋಮವಾರ ನಡೆದ 58ನೇ ರಾಷ್ಟ್ರೀಯ ಕ್ರಾಸ್‌ಕಂಟ್ರಿ ಓಟದ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದರು. 

ಇಲ್ಲಿನ ಸೌಂದರ್ಯ ನಿರ್ವಹಣಾಶಾಸ್ತ್ರ ಮತ್ತು ವಿಜ್ಞಾನ ಕಾಲೇಜಿನಲ್ಲಿ  ಬಿ.ಎ  ಪದವಿಯ ತೃತೀಯ ಸೆಮಿಸ್ಟರ್‌ನಲ್ಲಿ ವಿದ್ಯಾರ್ಥಿಯಾಗಿರುವ ಶಿವಾಜಿ ಎಂಟು ಕಿಲೋಮೀಟರ್ ದೂರದ ಓಟವನ್ನು 23 ನಿಮಿಷ 40 ಸೆಕೆಂಡುಗಳಲ್ಲಿ ಪೂರೈಸಿ ಗುರಿ ಮುಟ್ಟಿದರು.

ವಿದ್ಯಾರ್ಥಿ ಈ ಸಾಧನೆಗೆ ಕೋಚ್‌ಗಳಾದ ಮಂಟೂರ್‌ ಮತ್ತು ವಿಶ್ವನಾಥ್‌, ದೈಹಿಕ ಶಿಕ್ಷಣ ನಿರ್ದೇಶಕರಾದ ಹರೀಶ್‌ ಪಿ.ಎಂ, ಸುರೇಶ್‌ ರೆಡ್ಡಿ ಎಂ.ಎಸ್‌. ಮಾರ್ಗದರ್ಶನ ನೀಡಿದ್ದಾರೆ ಎಂದು ಕಾಲೇಜಿನ ಸಿಇಒ ಕೀರ್ತನ್ ಕುಮಾರ್ ಎಂ‌ ಮತ್ತು ಪ್ರಾಚಾರ್ಯ ಬಿ.ಎ. ವಾಸು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT