ಬೆಂಗಳೂರು: ಅಕೌಂಟೆಂಟ್ ಜನರಲ್ ಆಫೀಸ್ ರಿಕ್ರಿಯೇಷನ್ ಕ್ಲಬ್ ತಂಡವು ಇಲ್ಲಿ ನಡೆಯುತ್ತಿರುವ ಏಳನೇ ಆವೃತ್ತಿಯ ಹಾಕಿ ಕರ್ನಾಟಕ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಪೋಸ್ಟಲ್ ತಂಡವನ್ನು 12–4ರಿಂದ ಮಣಿಸಿತು.
ಸೋಮವಾರ ನಡೆದ ಪಂದ್ಯದಲ್ಲಿ ಅಕೌಂಟೆಂಟ್ ತಂಡದ ತ್ರಿಶೂಲ್ ಗಣಪತಿ (29, 37, 51 ನಿ) ಮೂರು ಗೋಲು ತಂದಿತ್ತರೆ, ನಿತಿನ್ ತಿಮ್ಮಯ್ಯ (6, 18 ನಿ), ಮಹಮ್ಮದ್ ನಯೀಮ್ (19, 38 ನಿ), ಹರೀಶ್ ಮುತ್ಗಾರ್ (53, 55ನಿ) ಮತ್ತು ಮಹಮ್ಮದ್ ರಾಹೀಲ್ (56, 58 ನಿ) ತಲಾ ಎರಡು ಗೋಲು ದಾಖಲಿಸಿದರು. ಆಭರಣ್ ಸುದೇವ್ (13 ನಿ) ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು.
ಪೋಸ್ಟಲ್ ತಂಡದ ಪರವಾಗಿ ಆರ್.ಬಿ. ವಿಜಯ್ ಕುಮಾರ್ (14 ನಿ), ನವಜ್ಯೋತ್ ಸಿಂಗ್ (27, 44 ನಿ), ನವೀನ್ ಕುಮಾರ್ (36 ನಿ) ಗೋಲು ಗಳಿಸಿದರು.
ಮತ್ತೊಂದು ಪಂದ್ಯದಲ್ಲಿ ಬಾಯ್ಸ್ ಸ್ಪೋರ್ಟ್ಸ್ ಕಂಪನಿ ಎಂಇಜಿ ತಂಡವು ಕರ್ನಾಟಕ ರಾಜ್ಯ ಪೊಲೀಸ್ ತಂಡವನ್ನು 6–1ರಿಂದ ಪರಾಭವಗೊಳಿಸಿತು. ಎಂಇಜಿ ತಂಡದ ಹರ್ಪಾಲ್ (22 ನಿ), ಅರ್ಶ್ ಅಲಿ (39 ನಿ), ಸಚಿನ್ ಕುಮಾರ್ (41, 53, 59 ನಿ), ಮನೋರಂಜನ್ (60 ನಿ) ಗೋಲು ಗಳಿಸಿದರು. ಕೆಎಸ್‌ಪಿ ಪರವಾಗಿ ಏಕೈಕ ಗೋಲು ಸಿ.ಕೆ. ಪ್ರಜ್ವಲ್ (23 ನಿ) ದಾಖಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.