ಚೆನ್ನೈ: ಬೆಂಗಳೂರಿನ ಅಭಯ್ ಮೋಹನ್ ಅವರು ಫಾರ್ಮುಲಾ 1600 ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಜಯಿಸಿದರು. ಇದರೊಂದಿಗೆ ತಮ್ಮ ಮೊದಲ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದರು.
ಭಾನುವಾರ ಇಲ್ಲಿ ನಡೆದ ಭಾರತ ರಾಷ್ಟ್ರೀಯ ಕಾರ್ ರೇಸಿಂಗ್ ಚಾಂಪಿಯನ್‌ಷಿಪ್ ನ ನಾಲ್ಕು ಮತ್ತು ನಿರ್ಣಾಯಕ ಸುತ್ತಿನಲ್ಲಿ ಅವರು ಜಯಿಸಿದರು.
2022ರಲ್ಲಿ ಜೂನಿಯರ್ ರಾಷ್ಟ್ರೀಯ ಕಾರ್ಟಿಂಗ್ ಚಾಂಪಿಯನ್ ಆಗಿದ್ದರು. ಅವರು ಶಕ್ತಿಯುತವಾದ ಫಾರ್ಮುಲಾ ಕಾರ್ ಚಲಾಯಿಸಿದರು. 16 ವರ್ಷದ ಅಭಯ್ ಅವರು 10 ರೇಸ್‌ಗಳಲ್ಲಿ ಸತತ ಜಯ ಸಾಧಿಸಿದರು. ಮುಂಬೈನ ಝೆಹಾನ್ ಕಮಿಸರಿಯತ್ ಮತ್ತು ರಾಜ್ ಬಕಾರು ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದರು.