ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಲ್ಫ್‌: ಜಂಟಿ 12ನೇ ಸ್ಥಾನದಲ್ಲಿ ಅದಿತಿ

Last Updated 30 ಜೂನ್ 2019, 19:30 IST
ಅಕ್ಷರ ಗಾತ್ರ

ಅರ್ಕಾನ್ಸಸ್‌, ಅಮೆರಿಕ (ಪಿಟಿಐ): ಭಾರತದ ಅದಿತಿ ಅಶೋಕ್‌, ವಾಲ್‌ಮಾರ್ಟ್‌ ಅರ್ಕಾನ್ಸಸ್‌ ಗಾಲ್ಫ್‌ ಚಾಂಪಿಯನ್‌ಷಿಪ್‌ನಲ್ಲಿ ಜಂಟಿ 12ನೇ ಸ್ಥಾನ ಪಡೆದಿದ್ದಾರೆ.ಪಿನಾಕಲ್‌ ಕಂಟ್ರಿ ಕ್ಲಬ್‌ನಲ್ಲಿ ಭಾನುವಾರ ನಡೆದ ಎರಡನೇ ಸುತ್ತಿನ ಸ್ಪರ್ಧೆಯಲ್ಲಿ ಕರ್ನಾಟಕದ ಅದಿತಿ, ಉತ್ತಮ ಸಾಮರ್ಥ್ಯ ತೋರಿದರು. ಈ ಮೂಲಕ ಒಟ್ಟು 133 ಸ್ಕೋರ್‌ ಕಲೆಹಾಕಿದರು.

ಸಂಗ್‌ ಹ್ಯೂನ್‌ ಪಾರ್ಕ್‌ ಮತ್ತು ಸ್ಪೇನ್‌ನ ಕಾರ್ಲೊಟಾ ಸಿಗಾಂಡ ಅವರು ಜಂಟಿ ಅಗ್ರಸ್ಥಾನದಲ್ಲಿದ್ದಾರೆ. ಇವರು ತಲಾ 129 ಸ್ಕೋರ್‌ ಗಳಿಸಿದ್ದಾರೆ. ಪಾರ್ಕ್‌ ಅವರು ಈ ವರ್ಷದ ಮಾರ್ಚ್‌ನಲ್ಲಿ ಸಿಂಗಪುರದಲ್ಲಿ ನಡೆದಿದ್ದ ಮಹಿಳಾ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದರು. ಇನ್ಬಿ ಪಾರ್ಕ್‌ ಅವರು ಜಂಟಿ ಮೂರನೇ ಸ್ಥಾನ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT