ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊಲ್ ಓಪನ್ ಡಿ ಸ್ಪಾನಾ ಗಾಲ್ಫ್ ಟೂರ್ನಿ: ಅದಿತಿಗೆ ಪ್ರಶಸ್ತಿ

Published 27 ನವೆಂಬರ್ 2023, 16:11 IST
Last Updated 27 ನವೆಂಬರ್ 2023, 16:11 IST
ಅಕ್ಷರ ಗಾತ್ರ

ಮಬೆಲ್ಲಾ, ಸ್ಪೇನ್: ಒಲಿಂಪಿಯನ್ ಅದಿತಿ ಅಶೋಕ್ ಅವರು ಅಂದಾಲುಸಿಯಾ ಕೊಸ್ತಾ ದೆಲ್ ಸೊಲ್ ಓಪನ್ ಡಿ ಸ್ಪಾನಾ  ಗಾಲ್ಫ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದರು.

ಬೆಂಗಳೂರಿನ ಅದಿತಿ ಅವರಿಗೆ ಪ್ರಸಕ್ತ ಲೇಡಿಸ್ ಯುರೋಪಿಯನ್ ಟೂರ್ (ಎಲ್‌ಇಟಿ)  ಇದು ಎರಡನೇ ಪ್ರಶಸ್ತಿಯಾಗಿದೆ. ಅವರ ವೃತ್ತಿಜೀವನದಲ್ಲಿ ಒಟ್ಟಾರೆ ಐದನೇ ಪ್ರಶಸ್ತಿಯೂ ಇದಾಗಿದೆ. 

ಭಾನುವಾರ ನಡೆದ ಫೈನಲ್ ಸುತ್ತಿನಲ್ಲಿ ಅವರು ನೆದರ್ಲೆಂಡ್ಸ್‌ನ ಅನಾ ವ್ಯಾನ್ ಡ್ಯಾಮ್ (68) ಅವರನ್ನು ಎರಡು ಶಾಟ್‌ಗಳಿಂದ ಹಿಂದಿಕ್ಕಿ ಜಯಿಸಿದರು.

‘ಆನ್ ಅವರ ಎದುರಿನ ಪೈಪೋಟಿಯು ಉನ್ನತ ದರ್ಜೆಯದಾಗಿತ್ತು. ಅವರು ಉತ್ತಮವಾಗಿ  ಆಡಿದರು. ಅವರು  5 ರಿಂದ 10 ಶಾಟ್‌ಗಳ ಅಂತರದಲ್ಲಿ ಜಯಿಸುವ ಸಾಧ್ಯತೆಯೂ ಇತ್ತು. ಅದನ್ನು ಅರಿತಿದ್ದ ನಾನು ಬರ್ಡೀಸ್ ಮಾಡುವುದನ್ನು ನಿಲ್ಲಿಸಲಿಲ್ಲ ಮತ್ತು ನಿರಂತರವಾಗಿ ಪ್ರಯತ್ನಿಸುತ್ತಲೂ ಇದ್ದೆ’ ಎಂದು ಅದಿತಿ ಹೇಳಿದರು.

2023ರಲ್ಲಿ ಕೆನ್ಯಾದಲ್ಲಿ ಅವರು ಟ್ರೋಫಿ ಜಯಿಸಿದ್ದರು.

2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅವರು ನಾಲ್ಕನೇ ಸ್ಥಾನ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT