ದೋಹಾ: ಸ್ವದೇಶಿ ಆಟಗಾರ ಆದಿತ್ಯ ಮೆಹ್ತಾ ಅವರ ಸವಾಲು ಮೀರಿದ ಭಾರತದ ಪಂಕಜ್ ಅಡ್ವಾಣಿ ಇಲ್ಲಿ ನಡೆಯುತ್ತಿರುವ ಏಷ್ಯನ್ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಗುರುವಾರ ಪದಕವನ್ನು ಖಚಿತಪಡಿಸಿದ್ದಾರೆ.5-4 0-99(99), 1-60, 64-50, 97(72)-0, 35-90, 113(105)-0, 8-107(107), 61-16, 72-48 ಫ್ರೇಮ್‌ಗಳಿಂದ ಗೆದ್ದ ಅವರು ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು.

ರೋಚಕ ಹಣಾಹಣಿ ಕಂಡುಬಂದ ಪಂದ್ಯದಲ್ಲಿ ಮೆಹ್ತಾ ಅವರು 21 ಬಾರಿಯ ವಿಶ್ವ ಚಾಂಪಿಯನ್ ಪಂಕಜ್‌ರನ್ನು ಮಣಿಸಲು ಕೇವಲ ಒಂದು ಫ್ರೇಮ್ ಹಿಂದಿದ್ದರು. ಆದರೆ ಪಂಕಜ್ ಅವರ ಭಾರೀ ಪ್ರಯತ್ನದ ಮುಂದೆ ಮೆಹ್ತಾ ಸೋಲೊಪ್ಪಿಕೊಳ್ಳಬೇಕಾಯಿತು.

ಭಾರತದ ಪ್ರಮುಖ ಸ್ನೂಕರ್ ಆಟಗಾರನಾಗಿರುವ ಆದಿತ್ಯ ಒಮ್ಮೆಯೂ ವಿಶ್ವಚಾಂಪಿಯನ್ ಕಿರೀಟ ಧರಿಸಿಲ್ಲ. ಆದರೆ ಅವರು ಏಷ್ಯನ್ ಚಾಂಪಿಯನ್‌ಷಿಪ್ ಟ್ರೋಫಿ ಮುಡಿಗೇರಿಸಿಕೊಂಡಿದ್ದಾರೆ. ಹಲವು ವರ್ಷಗಳ ಕಾಲ ಇಂಗ್ಲೆಂಡ್‌ನಲ್ಲಿದ್ದ ಅವರು ಸದ್ಯ ಭಾರತದ ಪರ ಆಡುತ್ತಿದ್ದಾರೆ.

ಸೆಮಿಫೈನಲ್ ಪಂದ್ಯದಲ್ಲಿ ಅವರು ಪಾಕಿಸ್ತಾನದ ಅಸ್ಜದ್ ಇಕ್ಬಾಲ್ ಅವರನ್ನು ಎದುರಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.