ನವದೆಹಲಿ: ‘ರಾಷ್ಟ್ರೀಯ ಕ್ಯಾಂಪ್ನಲ್ಲಿರುವ ಅಥ್ಲೀಟುಗಳಿಗೆ ಲಾಕ್ಡೌನ್ ಸಮಯದಲ್ಲಿ ದೇಶದ ಪ್ರಮುಖ ಕ್ರೀಡಾ ಕೇಂದ್ರಗಳಲ್ಲಿ ಹೊರಾಂಗಣ ಅಭ್ಯಾಸ ನಡೆಸಲು ಅನುವು ಮಾಡಿಕೊಡುವಂತೆ ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಮಾಡುತ್ತೇನೆ’ ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಅಧ್ಯಕ್ಷ ನರಿಂದರ್ ಬಾತ್ರಾ ಹೇಳಿದ್ದಾರೆ.

‘ಈ ಹಿಂದೆಯೂ ಐಒಎ ಈ ಸಂಬಂಧ ಸರ್ಕಾರಕ್ಕೆ ಮನವಿ ಮಾಡಿತ್ತು. ಆದರೆ ಕೇಂದ್ರದಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿರಲಿಲ್ಲ. ಅಂತರ ಕಾಯ್ದುಕೊಳ್ಳುವ ಮಾರ್ಗದರ್ಶಿ ನಿಯಮಾವಳಿಯನ್ನು ಪಾಲಿಸಿ ಹೊರಾಂ ಗಣದಲ್ಲಿ ಅಭ್ಯಾಸ ನಡೆಸಲು ಅವಕಾಶ ಕೊಡಬೇಕು ಎಂದು ಪಟಿಯಾಲದ ಎನ್ಐಎಸ್ನ ಕೆಲವು ಅಥ್ಲೀಟುಗಳೂ ಕ್ರೀಡಾ ಸಚಿವಾಲಯಕ್ಕೆ ಪತ್ರ ಬರೆದಿ ದ್ದಾರೆ’ ಎಂದು ಬಾತ್ರಾ ಶನಿವಾರ ತಿಳಿಸಿದ್ದಾರೆ.

‘ಪಟಿಯಾಲದ ಜೊತೆ ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ಕೇಂದ್ರ, ಕೋಲ್ಕತ್ತದ ಸಾಯ್ ಕೇಂದ್ರದ ಅಥ್ಲೀಟುಗಳಿಗೂ ಹೊರಾಂಗಣದಲ್ಲಿ ಅಭ್ಯಾಸ ನಡೆಸಲು ಸಾಧ್ಯವಾಗುತ್ತಿಲ್ಲ‘ ಎಂದು ಅವರು ಬೇಸರ
ವ್ಯಕ್ತಪಡಿಸಿದ್ದಾರೆ.

‘ಸರ್ಕಾರವು, ಈಗ ವಿಸ್ತರಿಸಿರುವ ಲಾಕ್ಡೌನ್ ಸಮಯದಲ್ಲಿ ಇದಕ್ಕೆ ಅನುಮತಿ ನೀಡುವುದೊ ಇಲ್ಲವೇ ಎಂದು ಗೊತ್ತಿಲ್ಲ. ಆದರೆ ಭಾನುವಾರ ಮತ್ತೊಮ್ಮೆ ಸರ್ಕಾರಕ್ಕೆ ಮನವರಿಕೆ ಮಾಡಲು ಯತ್ನಿಸುತ್ತೇನೆ‘ ಎಂದರು. ಭಾರತ ಅಥ್ಲೆಟಿಕ್ ಫೆಡರೇಷನ್ನ ವಿಶೇಷ ಮಹಾಸಭೆಯನ್ನು ಆನ್ಲೈನ್ ನಲ್ಲಿ ಉದ್ದೇಶಿಸಿ ಅವರು ಈ ಮಾತುಗಳನ್ನಾಡಿದರು.

2032ರ ಒಲಿಂಪಿಕ್ಸ್ ಆತಿಥ್ಯಕ್ಕೆ ಪ್ರಯತ್ನ: 2032ರ ಒಲಿಂಪಿಕ್ ಕೂಟ ಹಾಗೂ ಇತರ ಅಂತರರಾಷ್ಟ್ರೀಯ ಟೂರ್ನಿಗಳ ಆತಿಥ್ಯದ ಹಕ್ಕು ಗೆಲ್ಲಲು ಭಾರತ ಪ್ರಯತ್ನಿಸಲಿದೆ ಎಂದು ಹೇಳಿದ್ದಾರೆ. ಕೊರೊನಾ ವೈರಾಣು ಉಪಟಳ ನಿಯಂತ್ರಣಕ್ಕೆ ಬಂದ ಬಳಿಕ ಈ ಯತ್ನಕ್ಕೆ ಕೈ ಹಾಕಲಾಗುವುದು ಎಂದು ಅವರು ತಿಳಿಸಿದ್ದಾರೆ.

ಹತ್ತು ವರ್ಷಗಳ ಹಿಂದೆ, 2010ರಲ್ಲಿ ದೆಹಲಿಯಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟ ನಡೆದಿತ್ತು.

‘ಭಾರತ ಟೂರ್ನಿಗಳನ್ನು ಆಯೋ ಜಿಸುವಲ್ಲಿ ಇನ್ನಷ್ಟು ಪಳಗಬೇಕಿದೆ. ಆದರೆ ಹಿಂದೆ ಬೀಳುವುದಿಲ್ಲ. 2026ರ ಯೂತ್ ಒಲಿಂಪಿಕ್ಸ್ ಹಾಗೂ 2032ರ ಒಲಿಂ ಪಿಕ್ಸ್ ಬಿಡ್ ಗೆಲ್ಲಲು ಗಂಭೀರ ಪ್ರಯತ್ನ ನಡೆದಿದೆ’ ಎಂದು ಹೇಳಿದ್ದಾರೆ.

ಕೂಟಗಳನ್ನು ಆಯೋಜಿಸುವ ಕುರಿತು ಭಾರತ ತನ್ನ ಆಸಕ್ತಿಯನ್ನು ಲಿಖಿತ ರೂಪದಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ (ಐಒಸಿ) ತಿಳಿಸಿದೆ. ಆದರೆ 2026ರ ಕೂಟದ ಆತಿಥ್ಯಕ್ಕೆ ಥಾಯ್ಲೆಂಡ್, ರಷ್ಯಾ ಹಾಗೂ ಕೊಲಂಬಿಯಾ ದೇಶಗಳಿಂದ ಸ್ಪರ್ಧೆ ಯಿದೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.