ಪ್ಯಾರಿಸ್: ಭಾರತದ ಯುವ ಕುಸ್ತಿಪಟು ಅಮನ್ ಸೆಹ್ರಾವತ್ ಅವರು ಒಲಿಂಪಿಕ್ಸ್ ಪುರುಷರ ಕುಸ್ತಿ ಸ್ಪರ್ಧೆಗಳ 57 ಕೆ.ಜಿ.ವಿಭಾಗದಲ್ಲಿ ಕಂಚಿನ ಪದಕ ಗೆದ್ದರು.
ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ಅಮನ್ ಸೆಹ್ರಾವತ್ ಅವರು ಪೊರ್ಟೊರಿಕಾದ ಡೇರಿಯನ್ ಕ್ರೂಸ್ ಅವರನ್ನು 13-5 ರಿಂದ ಮಣಿಸಿದರು. 21 ವರ್ಷದ ಅಮನ್, ಒಲಿಂಪಿಕ್ಸ್ ವೈಯಕ್ತಿಕ ವಿಭಾಗದಲ್ಲಿ ಪದಕ ಗೆದ್ದ ಅತಿ ಕಿರಿಯ ಭಾರತೀಯ ಸ್ಪರ್ಧಿ ಎನಿಸಿದ್ದಾರೆ.