ಪ್ಯಾರಿಸ್: ಅಮೆರಿಕದ ಯುವ ಸ್ಪ್ರಿಂಟರ್ ಎರಿಯಾನ್ ನೈಟನ್ 200 ಮೀಟರ್ಸ್ ಓಟದಲ್ಲಿ ಭಾನುವಾರ ಮಿಂಚು ಹರಿಸಿದರು. ಬೇಟನ್ ರೇಜ್ ಕ್ರೀಡಾಕೂಟದ ಓಟದಲ್ಲಿ 19.49 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಅವರು ವಿಶ್ವದ ಅತಿವೇಗದ ಓಟಗಾರರಲ್ಲಿ ನಾಲ್ಕನೆಯವರಾದರು.

20 ವರ್ಷದೊಳಗಿನವರ ವಿಭಾಗದಲ್ಲಿ ತಮ್ಮದೇ ಹೆಸರಿನಲ್ಲಿದ್ದ 19.84 ಸೆಕೆಂಡುಗಳ ದಾಖಲೆಯನ್ನು ಮುರಿದ 18 ವರ್ಷದ ನೈಟನ್ ಅವರು ಸ್ಪ್ರಿಂಟ್ ದಂತಕತೆಗಳಾದ ಕಾರ್ಲ್ ಲೂಯಿಸ್ ಮತ್ತು ಟಾಮಿ ಸ್ಮಿತ್ ಅವರ ದಾಖಲೆ ಮುರಿದರು. ಜಮೈಕಾದ ಉಸೇನ್ ಬೋಲ್ಟ್(19.19 ಸೆ), ಯೊಹಾನ್ ಬ್ಲೇಕ್ (19.26 ಸೆ) ಮತ್ತು ಅಮೆರಿಕದ ಮೈಕೆಲ್ ಜಾನ್ಸನ್ (19.32 ಸೆ) ಅವರು ಈಗ ನೈಟನ್ ಅವರಿಗಿಂತ ಮುಂದೆ ಇದ್ದಾರೆ.

17ರ ವಯಸ್ಸಿನಲ್ಲಿ ಕಳೆದ ವರ್ಷ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವ ಮೂಲಕ ನೈಟನ್ ಗಮನ ಸೆಳೆದಿದ್ದರು. ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದರು. ಕೆನಡಾದ ಆ್ಯಂಡ್ರೆ ಡಿ ಗ್ರಾಸಿ ಅವರು ನೈಟನ್ ಅವರನ್ನು ಹಿಂದಿಕ್ಕಿದ್ದರು.

ಜುಲೈ 15ರಿಂದ 24ರ ವರೆಗೆ ಒರಿಗಾನ್‌ನ ಯೂಜಿನ್‌ನಲ್ಲಿ ನಡೆಯಲಿರುವ ವಿಶ್ವ ಹೊರಾಂಗಣ ಕ್ರೀಡಾಂಗಣದಲ್ಲಿ ಪಾಲ್ಗೊಳ್ಳುವುದರತ್ತ ಅವರು ಗಮನ ಹರಿಸಿದ್ದಾರೆ. ಇದರ ಅರ್ಹತಾ ಸುತ್ತಿನ ಸ್ಪರ್ಧೆಗಳು ಜೂನ್ 23ರಿಂದ 26ರ ವರೆಗೆ ನಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.