ಗ್ವಾಂಗ್ಜು (ದಕ್ಷಿಣ ಕೊರಿಯಾ): ವಿಶ್ವ ಆರ್ಚರಿ ಚಾಂಪಿಯನ್ಷಿಪ್ನಲ್ಲಿ ಕೈಗಳ ಸಹಾಯವಿಲ್ಲದೇ ಚಿನ್ನ ಗೆದ್ದ ವಿಶ್ವದ ಮೊದಲ ಮಹಿಳಾ ಸ್ಪರ್ಧಿ ಎಂಬ ಹೆಗ್ಗಳಿಕೆ ಭಾರತದ ಶೀತಲ್ ದೇವಿ ಅವರದಾಯಿತು. ಇಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್ಷಿಪ್ನ ಪುರುಷರ ವಿಭಾಗದ ಕಾಂಪೌಂಡ್ ವೈಯಕ್ತಿಕ ಸ್ಪರ್ಧೆಯಲ್ಲಿ ತೊಮನ್ ಕುಮಾರ್ ಅವರೂ ಚಿನ್ನ ಗೆದ್ದರು.

ಶನಿವಾರ ಕಾಂಪೌಂಡ್ ವೈಯಕ್ತಿಕ ವಿಭಾಗದ ಫೈನಲ್ನಲ್ಲಿ 18 ವರ್ಷ ವಯಸ್ಸಿನ ಶೀತಲ್, ಟರ್ಕಿಯ ಅಗ್ರ ಕ್ರಮಾಂಕದ ಸ್ಪರ್ಧಿ ಒಝ್ನೂರ್ ಕ್ಯುರ್ ಗಿರ್ದಿ ಅವರನ್ನು 146–143 ರಿಂದ ಸೋಲಿಸಿದರು. ಕೈಗಳನ್ನು ಕಳೆದುಕೊಂಡ ಜಮ್ಮು–ಕಾಶ್ಮೀರದ ಬಾಲೆ ಶೀತಲ್ ಕಾಲಿನಿಂದಲೇ ಬಾಣ ಪ್ರಯೋಗಿಸಿ ಹೆಸರು ಮಾಡಿದ್ದಾರೆ.

ಕಾಂಪೌಂಡ್ ವಿಭಾಗದ ಸ್ಪರ್ಧಿಗಳು ಬಳಸುವ ಬಿಲ್ಲು ಕೇಬಲ್ ಮತ್ತು ಪುಟ್ಟ ರಾಟೆಗಳನ್ನು ಹೊಂದಿರುತ್ತದೆ. ರೀಕರ್ವ್ ವಿಭಾಗದ ಬಿಲ್ಲು ಸಾಂಪ್ರದಾಯಿಕ ರೀತಿಯಲ್ಲಿರುತ್ತದೆ.

ಶೀತಲ್ ಅವರು ಈ ಟೂರ್ನಿಯಲ್ಲಿ ಕೈಗಳಿಲ್ಲದೇ ಭಾಗವಹಿಸಿರುವ ಏಕೈಕ ಸ್ಪರ್ಧಿ ಎನಿಸಿದ್ದಾರೆ. ಅವರು ಗಲ್ಲದ ನೆರವು ಪಡೆದು ಕಾಲಿನಿಂದ ಬಾಣ ಪ್ರಯೋಗಿಸುತ್ತಾರೆ.

ಈ ಹಿಂದೆ ಪುರುಷರ ವಿಭಾಗದಲ್ಲಿ ಕೈಗಳಿಲ್ಲದೇ ಬಾಣ ಪ್ರಯೋಗಿಸಿ ಚಿನ್ನ ಗೆದ್ದ ಏಕೈಕ ದಾಖಲೆ ಇರುವುದು ಅಮೆರಿಕದ ಮ್ಯಾಟ್ ಸ್ಟುಟ್ಜ್ಮನ್ ಹೆಸರಿನಲ್ಲಿ. ಅವರು ದುಬೈ ವಿಶ್ವ ಚಾಂಪಿಯನ್ಷಿಪ್ನಲ್ಲಿ ಚಿನ್ನ ಗೆದ್ದಿದ್ದರು.

ತೊಮನ್ಗೆ ಚಿನ್ನ:

ಇದಕ್ಕೆ ಮೊದಲು ಶೀತಲ್ ಅವರು ತೊಮನ್ ಕುಮಾರ್ ಜೊತೆಗೂಡಿ ಕಾಂಪೌಂಡ್ ಮಿಶ್ರ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದ್ದರು. ಪ್ಲೇಆಫ್ನಲ್ಲಿ ಬ್ರಿಟನ್ನ ಜೋಡೀ ಗ್ರೀನ್ಹಮ್– ನಥಾನ್ ಮೆಕ್ಕ್ವೀನ್ ಜೋಡಿಯನ್ನು 152–149 ರಿಂದ ಸೋಲಿಸಿದ್ದರು.

ನಂತರ ನಡೆದ ಪುರುಷರ ವಿಭಾಗದ ಕಾಂಪೌಂಡ್ ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ತೊಮನ್ ಅವರು ಸ್ವದೇಶದ ರಾಕೇಶ್ ಕುಮಾರ್ ಅವರನ್ನು 40–20 ರಿಂದ ಸೋಲಿಸಿದರು. ರಾಕೇಶ್ ಅವರು ತಾಂತ್ರಿಕ ತೊಂದರೆಯ ಕಾರಣ ಅರ್ಧದಲ್ಲೇ ಹಿಂದೆಸರಿದರು. ರಾಕೇಶ್, ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ಕಂಚಿನ ಪದಕ ಜಯಿಸಿದ್ದರು. ಇಲ್ಲಿ ಅವರ ಬಾಣ ಪ್ರಯೋಗಿಸುವ ವೇಳೆ ತಾಂತ್ರಿಕ ತೊಂದರೆ ಕಾಣಿಸಿತು.

ಕಾಂಪೌಂಡ್ ಪುರುಷರ ಓಪನ್ ವಿಭಾಗದಲ್ಲಿ ಕಂಚಿನ ಪದಕಕ್ಕೆ ನಡೆದ ಸ್ಪರ್ಧೆಯಲ್ಲಿ ಶ್ಯಾಮ್ ಸುಂದರ್ ಸ್ವಾಮಿ 141–148 ರಲ್ಲಿ ಬ್ರಿಟನ್ನ ನಥಾನ್ ಮೆಕ್ಕ್ವೀನ್ ಅವರಿಗೆ ಸೋತರು. ಸ್ವಾಮಿ ಸೆಮಿಫೈನಲ್ನಲ್ಲಿ ತೊಮನ್ ಅವರನ್ನು ಸೋಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.