ಕರಾಚಿ : ಜಾವೆಲಿನ್ ಥ್ರೊ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಅವರಿಗೆ ನಿಕಟ ಸ್ಪರ್ಧಿಯಾಗಿರುವ ಅರ್ಷದ್ ನದೀಮ್ ಅವರು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪಾಕಿಸ್ತಾನದ 18 ಸ್ಪರ್ಧಿಗಳ ತಂಡವನ್ನು ಮುನ್ನಡೆಸಲಿದ್ದಾರೆ. ಅರ್ಷದ್ ಅಥ್ಲೆಟಿಕ್ಸ್ನಲ್ಲಿ ಪಾಕಿಸ್ತಾನಕ್ಕೆ ಮೊದಲ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ಏಳು ಅಥ್ಲೀಟ್ಗಳು ಮತ್ತು ಹನ್ನೊಂದು ಸಹಾಯಕ ಸಿಬ್ಬಂದಿ ಹೆಸರನ್ನು ಪಾಕಿಸ್ತಾನ ಒಲಿಂಪಿಕ್ಸ್ ಸಂಸ್ಥೆಯು ಸೋಮವಾರ ಪ್ರಕಟಿಸಿದೆ.

ನದೀಮ್ ಜೊತೆಗೆ ಶೂಟರ್ ಕಿಶ್ಮಲಾ ತಲತ್, ಓಟಗಾರ್ತಿ ಫೈಕಾ ರಿಯಾಜ್ ಮತ್ತು ಈಜುಗಾರ್ತಿ ಜಹನಾರಾ ನಬಿ ಅವರು ತಂಡದಲ್ಲಿ ಒಳಗೊಂಡಿದ್ದಾರೆ. 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದು, ಪಾಕ್ ತಂಡವನ್ನು ಪ್ರತಿನಿಧಿಸುತ್ತಿರುವ ಮೊದಲ ಮಹಿಳಾ ಸ್ಪರ್ಧಿ ಆಗಿದ್ದಾರೆ.

1992ರ ಬಾರ್ಸಿಲೋನಾ ಕ್ರೀಡೆಗಳಲ್ಲಿ ಪಾಕಿಸ್ತಾನ ಹಾಕಿ ತಂಡವು ಕಂಚಿನ ಪದಕ ಗೆದ್ದಿತು. ಇದು ಒಲಿಂಪಿಕ್ಸ್ನಲ್ಲಿ ಪಾಕಿಸ್ತಾನಕ್ಕೆ ಕೊನೆಯ ಪದಕವಾಗಿದೆ.

ಟೋಕಿಯೊ ಒಲಿಂಪಿಕ್ಸ್ನಲ್ಲಿ ಅರ್ಷದ್ ನದೀಮ್ 84.62 ಮೀಟರ್ ದೂರ ಎಸೆದು ಐದನೇ ಸ್ಥಾನ ಪಡೆದಿದ್ದರು, ಇದೇ ಕೂಟದಲ್ಲಿ ಭಾರತದ ನೀರಜ್ ಚೋಪ್ರಾ ಚಿನ್ನ ಗೆದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.