ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಚರಿ: ಭಾರತದ ಪರನೀತ್ ಕೌರ್‌ಗೆ ಚಿನ್ನ

Published 9 ನವೆಂಬರ್ 2023, 23:30 IST
Last Updated 9 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಬ್ಯಾಂಕಾಕ್: ಭಾರತದ ಉದಯೋನ್ಮುಖ ಆರ್ಚರಿಪಟು ಪರನೀತ್ ಕೌರ್ ಏಷ್ಯನ್
ಚಾಂಪಿಯನ್‌ ಷಿಪ್‌ನಲ್ಲಿ ಅನುಭವಿ ಜ್ಯೋತಿ ಸುರೇಖಾ ವೆನ್ನಂ ಅವರಿಗೆ ಆಘಾತ ನೀಡಿ, ಚಿನ್ನ ಗೆದ್ದರು.

ಗುರುವಾರ ನಡೆದ ಸ್ಪರ್ಧೆಗಳಲ್ಲಿ ಭಾರತಕ್ಕೆ ಒಟ್ಟು ಮೂರು ಚಿನ್ನ, ಒಂದು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳು ಒಲಿದವು.

ಪರನೀತ್ ಮತ್ತು ಜ್ಯೋತಿ ಅವರ ಹಣಾಹಣಿ ರೋಚಕವಾಗಿತ್ತು. 18 ವರ್ಷದ ಪರನೀತ್ ಸ್ಪರ್ಧೆ ಅರ್ಧ ಹಾದಿ ಕ್ರಮಿಸಿದಾಗ ಎರಡು ಪಾಯಿಂಟ್‌ಗಳಿಂದ ಹಿಂದಿದ್ದರು. ಕೊನೆಯ ಎರಡು ಸುತ್ತುಗಳಲ್ಲಿ  ತಮ್ಮ ಸಾಮರ್ಥ್ಯವನ್ನು ಪಣಕ್ಕೊಡ್ಡಿದರು. 145–145ರಿಂದ ಸಮವಾಯಿತು. ಟೈಬ್ರೇಕರ್‌ನಲ್ಲಿ  ಮುನ್ನಡೆ ಸಾಧಿಸಿದರು. ಜ್ಯೋತಿ ಬೆಳ್ಳಿ ಪದಕ ಪಡೆದರು.

ಮಿಶ್ರ ತಂಡ ವಿಭಾಗದ ಫೈನಲ್‌ನಲ್ಲಿ ಅದಿತಿ ಸ್ವಾಮಿ ಮತ್ತು ಪ್ರಿಯಾಂಶ್ 156–151 ರಿಂದ ಥಾಯ್ಲೆಂಡ್ ತಂಡವನ್ನು ಮಣಿಸಿ ಚಿನ್ನ ಜಯಿಸಿತು.

ಕಂಪೌಂಡ್ ಮಹಿಳಾ ತಂಡ ವಿಭಾಗದಲ್ಲಿ; ಜ್ಯೋತಿ, ಪರನೀತ್, ಅದಿತಿ 234–233ರಿಂದ ಚೈನಿಸ್ ತೈಪೆ ವಿರುದ್ಧ ಗೆದ್ದು ಚಿನ್ನ ಗಳಿಸಿದರು.

ಪುರುಷರ ವೈಯಕ್ತಿಕ ವಿಭಾಗದಲ್ಲಿ ಅಭಿಷೇಕ್ ವರ್ಮಾ 147–146ರಿಂದ ದಕ್ಷಿಣ ಕೊರಿಯಾದ ಜೂ್ ಜೆಹೂನ್ ವಿರುದ್ಧ ಗೆದ್ದು ಕಂಚಿನ ಪದಕ ಪಡೆದರು. ಇದು ಭಾರತಕ್ಕೆ  ಈ ಚಾಂಪಿಯನ್‌ ಷಿಪ್‌ನಲ್ಲಿ ಒಲಿದ ಮೂರನೇ ಕಂಚಿನ ಪದಕ.

ರಿಕರ್ವ್‌ನಲ್ಲಿ ಕಂಚು: ಭಾರತದ ರಿಕರ್ವ್ ಆರ್ಚರಿ ಪಟುಗಳ ತಂಡವು  ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಸ್ಪರ್ಧಿಸುವ ಅರ್ಹತೆ ಗಿಟ್ಟಿಸಲು ವಿಫಲರಾದರು. ಆದರೆ ಮಹಿಳಾ ತಂಡ ಕಂಚು ಗಳಿಸಿತು.

ಐದನೇ ಶ್ರೇಯಾಂಕದ ಭಾರತ ತಂಡದಲ್ಲಿ ಅಂಕಿತಾ ಭಕತ್, ಭಜನ್ ಕೌರ್ ಮತ್ತು ತಿಷಾ ಪೂನಿಯಾ ಅವರಿದ್ದ ತಂಡಕ್ಕೆ ಸೆಮಿಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ಸವಾಲು ಮೀರಲಿಲ್ಲ.

ಪುರುಷರ ವಿಭಾಗದಲ್ಲಿ ಭಾರತ ತಂಡ ಕ್ವಾರ್ಟರ್‌ ಫೈನಲ್‌ನಲ್ಲಿ ಮುಗ್ಗರಿಸಿತು. ಧೀರಜ್ ಬೊಮ್ಮದೇವರ, ತರುಣ ದೀಪ್ ರಾಯ್, ಪ್ರವೀಣ ಜಾಧವ್ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT