ಶಿಮ್ಕೆಟ್ (ಕಜಾಕಸ್ತಾನ): ಭಾರತದ ಶೂಟರ್ ಇಳವೆನಿಲ್ ವಳರಿವನ್ಗೆ ಅವರು ಇಲ್ಲಿ ನಡೆಯುತ್ತಿರುವ 16ನೇ ಏಷ್ಯನ್ ಚಾಂಪಿಯನ್ಷಿಪ್ನ ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದರು.

ತಮಿಳುನಾಡಿನ 26 ವರ್ಷದ ಇಳವೆನಿಲ್ ಅವರು ಶುಕ್ರವಾರ ನಡೆದ ಫೈನಲ್ನಲ್ಲಿ 253.6 ಅಂಕಗಳೊಂದಿಗೆ ಚಾಂಪಿಯನ್ ಆದರು. ಇಳವೆನಿಲ್ ಅರ್ಹತಾ ಸುತ್ತಿನಲ್ಲಿ (630.7) ಎಂಟನೇ ಸ್ಥಾನದೊಂದಿಗೆ ಫೈನಲ್ ಪ್ರವೇಶಿಸಿದ್ದರು. ಚೀನಾದ ಕ್ಸಿನ್ಲು ಪೆಂಗ್ (253 ಅಂಕ) ಬೆಳ್ಳಿ ಪದಕ ಗೆದ್ದರೆ, ಕೊರಿಯಾದ ಯುಂಜಿ ಕ್ವಾನ್ (231.2) ಕಂಚಿನ ಪದಕ ಗೆದ್ದರು.

ಅಭಯ್ ಸಿಂಗ್ ಸೆಖೋನ್ (65) ಮತ್ತು ಗನೆಮತ್ ಸೆಖೋನ್ (73) ಅವರನ್ನು ಒಳಗೊಂಡ ಸ್ಕೀಟ್ ಮಿಶ್ರ ತಂಡವು ಕುವೈತ್ ತಂಡವನ್ನು ಮಣಿಸಿ ಕಂಚಿನ ಪದಕ ಗೆದ್ದುಕೊಂಡಿತು.

ಜೂನಿಯರ್ ಸ್ಕೀಟ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಹರ್ಮೆಹರ್ ಸಿಂಗ್ ಲಾಲಿ ಅವರು ಯಶಸ್ವಿ ರಾಥೋಡ್ ಅವರೊಂದಿಗೆ ಸೇರಿ ಚಿನ್ನದ ಪದಕ ಗೆದ್ದರು. ಈ ತಂಡವು 39–36ರಿಂದ ಕಜಾಕಸ್ತಾನದ ತಂಡವನ್ನು ಮಣಿಸಿತು.

ಶಾಂಭವಿ ಶ್ರವಣ್, ಹೃದಯಶ್ರೀ ಕೊಂಡೂರ್ ಮತ್ತು ಇಶಾ ಅನಿಲ್ ಅವರನ್ನು ಒಳಗೊಂಡ ತಂಡವು ಮಹಿಳೆಯರ ಜೂನಿಯರ್ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿತು. ಭಾರತ ತಂಡವು ಒಟ್ಟು 1896.2 ಅಂಕ ಗಳಿಸಿದ್ದು, ಇದು ಜೂನಿಯರ್ ವಿಶ್ವ ಮತ್ತು ಏಷ್ಯನ್ ದಾಖಲೆಯಾಗಿದೆ. ಚೀನಾ ಮತ್ತು ದಕ್ಷಿಣ ಕೊರಿಯಾ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.