ಬೆಂಗಳೂರು: ಅಮೋಘ ಕೌಶಲ ತೋರಿದ ಎನ್.ವಿಲ್ಸನ್ ಸಿಂಗ್ ಮತ್ತು ಸತೀಶ್ ಕುಮಾರ್ ಪ್ರಜಾಪತಿ ಅವರು ಏಷ್ಯನ್ ವಯೋವರ್ಗ ಈಜು ಚಾಂಪಿಯನ್‌ಷಿಪ್‌ನಲ್ಲಿ ಸೋಮವಾರ ಚಿನ್ನದ ಹೊಳಪು ಮೂಡಿಸಿದರು.

ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್) ಈಜು ಕೇಂದ್ರದಲ್ಲಿ ನಡೆದ ಪುರುಷರ 10 ಮೀಟರ್ಸ್ ಪ್ಲಾಟ್‌ಫಾರ್ಮ್ ಸಿಂಕ್ರೊನೈಸ್ಡ್ ಡೈವಿಂಗ್ ಸ್ಪರ್ಧೆಯಲ್ಲಿ ಸತೀಶ್ ಮತ್ತು ವಿಲ್ಸನ್ ಮೊದಲ ಸ್ಥಾನ ಪಡೆದರು. ಫೈನಲ್‌ನಲ್ಲಿ ಭಾರತದ ಜೋಡಿ 290.19 ಪಾಯಿಂಟ್ಸ್ ಕಲೆಹಾಕಿತು.

ಉಜ್ಬೇಕಿಸ್ತಾನದ ಜಾಯನೆತ್‌ದಿನೋವ್ ಮಾರ್ಷಲ್ ಮತ್ತು ಖಾಸನೋವ್ ಬೊತಿರ್ ಅವರು ಬೆಳ್ಳಿಯ ಪದಕ ಗೆದ್ದರು. ಈ ಜೋಡಿ 280.53 ಪಾಯಿಂಟ್ಸ್ ಗಳಿಸಿತು.

ಈ ವಿಭಾಗದ ಕಂಚಿನ ಪದಕವು ಇರಾನ್‌ನ ಮೊಜತಾಬಾ ವಾಲಿಪೌರ್ ಮತ್ತು ಮಸೂದ್ ವಾಕಿಲಿ (266.16 ಪಾ.) ಅವರ ಪಾಲಾಯಿತು.

‘ಪುಣೆಯಲ್ಲಿ ನಡೆದಿದ್ದ ರಾಷ್ಟ್ರೀಯ ತರಬೇತಿ ಶಿಬಿರದಲ್ಲಿ ಕಠಿಣ ಅಭ್ಯಾಸ ನಡೆಸಿದ್ದವು. ಹೀಗಾಗಿ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆಲ್ಲಲು ಸಾಧ್ಯವಾಯಿತು. ಈ ಸಾಧನೆಯಿಂದ ಅತೀವ ಖುಷಿಯಾಗಿದೆ. ಫೈನಲ್‌ನಲ್ಲಿ ಉಜ್ಬೇಕಿಸ್ತಾನದ ಸ್ಪರ್ಧಿಗಳಿಂದ ಪ್ರಬಲ ಪೈಪೋಟಿ ಎದುರಾಯಿತು’ ಎಂದು ವಿಲ್ಸನ್ ಅವರು ಖುಷಿ ವ್ಯಕ್ತಪಡಿಸಿದ್ದಾರೆ.

ರಮಾನಂದಗೆ ಬೆಳ್ಳಿ: ಭಾರತದ ರಮಾನಂದ ಶರ್ಮಾ ಅವರು ಚಾಂಪಿಯನ್‌ಷಿಪ್‌ನಲ್ಲಿ ಪದಕದ ಬೇಟೆ ಮುಂದುವರಿಸಿದ್ದಾರೆ. ಭಾನುವಾರ ಚಿನ್ನದ ಪದಕ ಜಯಿಸಿದ್ದ ಅವರು ಸೋಮವಾರ ಬೆಳ್ಳಿಯ ಪದಕ ಪಡೆದರು.

3 ಮೀಟರ್ ಸ್ಪ್ರಿಂಗ್‌ಬೋರ್ಡ್ ಸ್ಪರ್ಧೆಯಲ್ಲಿ ಅವರಿಂದ ಈ ಸಾಧನೆ ಅರಳಿತು. ಫೈನಲ್‌ನಲ್ಲಿ ಅವರು ಒಟ್ಟು 287.75 ಪಾಯಿಂಟ್ಸ್ ಕಲೆಹಾಕಿದರು.

ಇದೇ ವಿಭಾಗದಲ್ಲಿ ಕಣಕ್ಕಿಳಿದಿದ್ದ ಸಿದ್ದಾರ್ಥ್ ಪ್ರದೇಶಿ ಅವರು ಕಂಚಿನ ಪದಕ ಪಡೆದರು. ಅವರು 282.15 ಪಾಯಿಂಟ್ಸ್ ಗಳಿಸಿದರು. ಫಿಲಿಪ್ಪೀನ್ಸ್‌ನ ಡಿಯೊರೆಲಾರ್ ಫ್ರಾನ್ಸಿಸ್ಕೊ (295.70 ಪಾ.) ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

ಪುರುಷರ ವಾಟರ್‌ಪೊಲೊ ಸ್ಪರ್ಧೆಯಲ್ಲಿ ಭಾರತ ತಂಡ ಕೊನೆಯ ಸ್ಥಾನ (ಆರನೇ) ಗಳಿಸಿತು. ಜಪಾನ್ ಮತ್ತು ಕಜಕಸ್ತಾನ ತಂಡಗಳು ಕ್ರಮವಾಗಿ ಚಿನ್ನ ಮತ್ತು ಬೆಳ್ಳಿಯ ಪದಕಗಳನ್ನು ಪಡೆದವು.

60 ಪದಕ ಗೆದ್ದ ಭಾರತ: ಈ ಸಲದ ಚಾಂಪಿಯನ್‌ಷಿಪ್‌ನಲ್ಲಿ ಭಾರತವು ಒಟ್ಟು 60 ಪದಕಗಳನ್ನು ಗೆದ್ದ ಸಾಧನೆ ಮಾಡಿತು.

17 ಚಿನ್ನ, 23 ಬೆಳ್ಳಿ ಮತ್ತು 20 ಕಂಚಿನ ಪದಕಗಳನ್ನು ಆತಿಥೇಯ ಈಜುಪಟುಗಳು ಕೊರಳಿಗೇರಿಸಿಕೊಂಡರು.

ಜಪಾನ್ ಪ್ರಾಬಲ್ಯ: ಆರ್ಟಿಸ್ಟಿಕ್ ಈಜು ಸ್ಪರ್ಧೆಯಲ್ಲಿ ಜಪಾನ್ ಈಜುಪಟುಗಳು ಪಾರಮ್ಯ ಮುಂದುವರಿಸಿದರು.

ಈ ದೇಶದವರು ನಾಲ್ಕು ಚಿನ್ನ ಮತ್ತು ಒಂದು ಬೆಳ್ಳಿಯ ಪದಕ ಗೆದ್ದಿದ್ದಾರೆ. ಚೀನಾ ತಂಡವು ಒಂದು ಚಿನ್ನ ಮತ್ತು ಮೂರು ಬೆಳ್ಳಿಯ ಪದಕಗಳನ್ನು ಪಡೆದರೆ, ಕಜಕಸ್ತಾನ ತಂಡ ತಲಾ ಒಂದು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ಗಳಿಸಿತು.

ಡೈವಿಂಗ್ ಸ್ಪರ್ಧೆಯ ಫಲಿತಾಂಶಗಳು: ಪುರುಷರು: 3 ಮೀಟರ್ ಸ್ಪ್ರಿಂಗ್ ಬೋರ್ಡ್ (ಮುಕ್ತ ವಿಭಾಗ): ಡಿಯೊರೆಲಾರ್ ಫ್ರಾನ್ಸಿಸ್ಕೊ (ಫಿಲಿಪ್ಪೀನ್ಸ್; 295.70 ಪಾಯಿಂಟ್ಸ್)–1, ರಮಾನಂದ ಶರ್ಮಾ (287.75 ಪಾ.)–2, ಸಿದ್ದಾರ್ಥ್ ಪ್ರದೇಶಿ (282.15 ಪಾ.)–3 (ಇಬ್ಬರೂ ಭಾರತ).

10 ಮೀಟರ್ಸ್ ಪ್ಲಾಟ್‌ಫಾರ್ಮ್ ಸಿಂಕ್ರೊನೈಸ್ಡ್ (ಮುಕ್ತ): ಎನ್.ವಿಲ್ಸನ್ ಸಿಂಗ್ ಮತ್ತು ಸತೀಶ್ ಕುಮಾರ್ ಪ್ರಜಾಪತಿ (ಭಾರತ; 290.19 ಪಾ.)–1. ಜಾಯನೆತ್‌ದಿನೋವ್ ಮಾರ್ಷಲ್ ಮತ್ತು ಖಾಸನೋವ್ ಬೊತಿರ್ (ಉಜ್ಬೇಕಿಸ್ತಾನ; 280.53ಪಾ.)–2, ಮೊಜತಾಬಾ ವಾಲಿಪೌರ್ ಮತ್ತು ಮಸೂದ್ ವಾಕಿಲಿ (ಇರಾನ್; 266.16 ಪಾ.)–3.

ಮಹಿಳೆಯರು: 3 ಮೀ. ಸ್ಪ್ರಿಂಗ್ ಬೋರ್ಡ್: ಮಾನಿಕ್ ಆ್ಯನಾ ಡೆಮಾನ್ಸಿಪ್ (ಫಿಲಿಪ್ಪೀನ್ಸ್; 214.40 ಪಾ.)–1, ಜುರಾವಲೆವಾ ಜುಲಿಯಾ (207.25 ಪಾ.)–2, ಬೊರೊವಾ ಯೆಲಿಜಾವೆಟಾ (186.15 ಪಾ.)–3 (ಇಬ್ಬರೂ ಕಜಕಸ್ತಾನ).

ಬಾಲಕಿಯರು; ಗುಂಪು–1: ಪ್ಲಾಟ್‌ಫಾರ್ಮ್ (5ಮೀ/7.5 ಮೀ/10 ಮೀ): ಜಾಂಗ್ ರುಯಿ (ಚೀನಾ; 468.40 ಪಾ.)–1, ಲಿಯಾಂಗ್ ಯಿಕ್ಸಿಯನ್ (ಚೀನಾ; 381.00 ಪಾ.)–2, ಯಮಸಾಕಿ ಕರೆನ್ (ಜಪಾನ್; 345.85 ಪಾ.)–3.

ಗುಂಪು–2: 1 ಮೀ. ಸ್ಪ್ರಿಂಗ್ ಬೋರ್ಡ್: ಜಾಂಗ್ ಮಿನ್‌ಜೀ (ಚೀನಾ; 278.60 ಪಾ.)–1, ಲಾಯಿ ಚಿನ್ ಯಾನ್ (ಹಾಂಗ್‌ಕಾಂಗ್; 267.35 ಪಾ.)–2, ರಮನ್ಯಾ ಯಾನ್‌ಮೊಂಗ್‌ಕೊನ್ (ಥಾಯ್ಲೆಂಡ್; 248.75 ಪಾ.)–3.

ಬಾಲಕರು; ಗುಂಪು–1: ಪ್ಲಾಟ್‌ಫಾರ್ಮ್ (5ಮೀ/7.5 ಮೀ/10 ಮೀ): ಯಾಂಗ್ ಲಿಂಗ್ (ಚೀನಾ; 613.35 ಪಾ.)–1, ಲೆವಾಂಡೊವ್‌ಸ್ಕಿ ಕೊನ್ರಾಡ್ (ಥಾಯ್ಲೆಂಡ್; 416.35 ಪಾ.)–2, ಅಹಮದ್ ಕ್ವಾಲಿ (ಕುವೈತ್; 402.35 ಪಾ.)–3.

ಗುಂಪು–2: 1 ಮೀ.ಸ್ಪ್ರಿಂಗ್ ಬೋರ್ಡ್: ಯಾಂಗ್‌ಕ್ಸಿನ್ ಜು (381.70 ಪಾ.)–1, ಜೆಕ್ಸಿಯೊಂಗ್ ಯಾವೊ (360.70 ಪಾ.)–2 (ಇಬ್ಬರೂ ಚೀನಾ), ನಿವಾ ಕೌಗಾ (ಜಪಾನ್; 335.65 ಪಾ.)–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.