ನವದೆಹಲಿ: ಏಷ್ಯಾ ತಂಡಗಳ ಸ್ಕ್ವಾಷ್ ಚಾಂಪಿಯನ್ಷಿಪ್ಗೆ ಭಾರತದ ಪುರುಷ ಹಾಗೂ ಮಹಿಳಾ ತಂಡಗಳನ್ನು ಮಂಗಳವಾರ ಪ್ರಕಟಿಸಲಾಗಿದ್ದು, ಕ್ರಮವಾಗಿ ಸೌರವ್ ಘೋಷಾಲ್ ಹಾಗೂ ಜೋಷ್ನಾ ಚಿಣ್ಣಪ್ಪ ಮುನ್ನಡೆಸಲಿದ್ದಾರೆ. ಮಲೇಷ್ಯಾದ ಕ್ವಾಲಾಲಂಪುರದಲ್ಲಿ ಮಾರ್ಚ್ 15ರಿಂದ 29ರವರೆಗೆ ಚಾಂಪಿಯನ್ಷಿಪ್ ಆಯೋಜನೆಯಾಗಿದೆ.

ಘೋಷಾಲ್ 13 ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದರೆ, ಜೋಷ್ನಾ 18 ಬಾರಿ ರಾಷ್ಟ್ರೀಯ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ.

ಚಾಂಪಿಯನ್ಷಿಪ್ಗೆ ಭಾರತ ಸ್ಕ್ವಾಷ್ ರಾಕೆಟ್ ಫೆಡರೇಷನ್ (ಎಸ್ಆರ್ಎಫ್ಐ) ಪ್ರಕಟಿಸಿರುವ ಇತರೆ ಸದಸ್ಯರು: ಪುರುಷರು: ಅಭಿಷೇಕ್ ಪ್ರಧಾನ್, ಹರಿಂದರ್ ಪಾಲ್ ಸಂಧು ಹಾಗೂ ಅಭಯ್ ಸಿಂಗ್. ಮಹಿಳೆಯರು: ತನ್ವಿ ಖನ್ನಾ, ಸುನಯನಾ ಕುರುವಿಲ್ಲಾ ಹಾಗೂ ಸನ್ಯಾ ವತ್ಸ.

ಇತ್ತೀಚೆಗೆ ಮುಕ್ತಾಯವಾದ ರಾಷ್ಟ್ರೀಯ ಚಾಂಪಿಯನ್ನಲ್ಲಿ ತೋರಿದ ಸಾಮರ್ಥ್ಯದ ಆಧಾರದ ಮೇಲೆ ತಂಡಗಳನ್ನು ಆಯ್ಕೆ ಮಾಡಲಾಗಿದೆ. ಏಷ್ಯನ್ ಹಾಗೂ 2022ರ ಕಾಮನ್ವೆಲ್ತ್ ಕ್ರೀಡಾಕೂಟವನ್ನು ಗಮನದಲ್ಲಿಟ್ಟುಕೊಂಡು ಡೇವಿಡ್ ಪಾಲ್ಮರ್ ಅವರನ್ನು ಭಾರತ ತಂಡಕ್ಕೆ ತಾತ್ಕಾಲಿಕ ಕೋಚ್ ಆಗಿ ಎಸ್ಆರ್ಎಫ್ಐನೇಮಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.