ಬೆಂಗಳೂರು: ಐದು ಬಾರಿಯ ಒಲಿಂಪಿಕ್ಸ್ ಚಾಂಪಿಯನ್, ಜಮೈಕಾದ ಎಲೈನ್ ಥಾಮ್ಸನ್ ಹೆರಾ ಮಹಿಳೆಯರ 100 ಮೀಟರ್ಸ್ ಓಟದಲ್ಲಿ ಈ ವರ್ಷದ ದಾಖಲೆ ಬರೆದರು.

ಕ್ಯಾಲಿಫೋರ್ನಿಯಾದ ವಾಲ್‌ನಟ್‌ನಲ್ಲಿ ನಡೆದ ಗೋಲ್ಡನ್ ಗೇಮ್ಸ್‌ನ ಸೆಮಿಫೈನಲ್‌ನಲ್ಲಿ ಅವರು 10.89 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಈ ಸಾಧನೆ ಮಾಡಿದರು. ಆದರೆ ಫೈನಲ್‌ನಲ್ಲಿ ಓಡಲು ಅವರು ನಿರಾಕರಿಸಿದರು. ಅದಕ್ಕೆ ಯಾವುದೇ ಕಾರಣವನ್ನೂ ನೀಡಲಿಲ್ಲ.

‘ಅಂಗಣಕ್ಕೆ ಮರಳಿದ ಮೊದಲ ಕೂಟದಲ್ಲೇ 10.89 ಸೆಕೆಂಡುಗಳ ಸಾಧನೆ ಮಾಡಿದ್ದು ಸಂತಸ ತಂದಿದೆ‘ ಎಂದು ಎಲೈನ್ ಟ್ವೀಟ್ ಮಾಡಿದ್ದಾರೆ.

ಟೋಕಿಯೊ ಒಲಿಂಪಿಕ್ಸ್ 100 ಮತ್ತು 200 ಮೀಟರ್ಸ್ ಓಟಗಳಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದ ಅವರು 4X100 ಮೀಟರ್ಸ್ ರಿಲೇ ವಿಭಾಗದಲ್ಲೂ ಜಮೈಕಾ ತಂಡಕ್ಕೆ ಅಗ್ರಸ್ಥಾನ ಗಳಿಸಿಕೊಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.