ವುಹಾನ್, ಚೀನಾ: ಭಾರತದ ಸೌರಭ್ ಶರ್ಮಾ ಮತ್ತು ಅನುಷ್ಕಾ ಪಾರಿಖ್ ಇಲ್ಲಿ ಮಂಗಳವಾರ ಆರಂಭಗೊಂಡ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ನಿರಾಸೆ ಅನುಭವಿಸಿದರು.

ವುಹಾನ್ ಕ್ರೀಡಾ ಸಂಕೀರ್ಣದಲ್ಲಿ ನಡೆದ ಮಿಶ್ರ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಸೌರಭ್–ಅನುಷ್ಕಾ ಜೋಡಿ ಥಾಯ್ಲೆಂಡ್‌ನ ದೆಚಾಪೊಲ್ ಪರಂಕೊರ್ ಮತ್ತು ಸಪ್‌ಸ್ರಿ ಟೆರಂಚಂಪ್ಚಾನ್ ಎದುರು 21–9, 21–9ರಿಂದ ಸೋತರು.

ರೋಹನ್ ಕಪೂರ್ ಮತ್ತು ಕುಹೂ ಗರ್ಗ್ ಜೋಡಿಯೂ ಸೋಲನುಭವಿಸಿತು. ಇಂಡೊನೇಷ್ಯಾದ ಪ್ರವೀಣ್ ಜೋರ್ಡಾನ್–ಮೆಲಾತಿ ದೇವ ಒಕ್ಟವ್ಯಂತಿ ಅವರಿಗೆ ಭಾರತದ ಜೋಡಿ 21–15, 21–15ರಿಂದ ಮಣಿಯಿತು.

ಸೈನಾ ನೆಹ್ವಾಲ್, ಪಿ.ವಿ.ಸಿಂಧು ಮತ್ತು ಸಮೀರ್ ವರ್ಮಾ ಬುಧವಾರ ಕಣಕ್ಕೆ ಇಳಿಯಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.