ಕ್ವಾಲಾಲಂಪುರ: ಚೀನಾದ ರೆನ್ ಷಿಯಾಂಗ್ ಯು ಮತ್ತು ಹೆ ಜಿ ಟಿಂಗ್ ಅವರನ್ನು ನೇರ ಸೆಟ್ಗಳಿಂದ ಹಿಮ್ಮೆಟ್ಟಿಸಿದ ಭಾರತದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಮಲೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಡಬಲ್ಸ್ನಲ್ಲಿ ಶುಕ್ರವಾರ ಸೆಮಿಫೈನಲ್ ತಲುಪಿದರು.

ವಿಶ್ವ ಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ಸಾತ್ವಿಕ್– ಚಿರಾಗ್ ಜೋಡಿ 21–11, 21–8 ರಿಂದ ವಿಶ್ವ ಕ್ರಮಾಂಕದಲ್ಲಿ 32ನೇ ಸ್ಥಾನದಲ್ಲಿರುವ ಚೀನಾ ಜೋಡಿಯನ್ನು ಸೋಲಿಸಲು ಕೇವಲ 35 ನಿಮಿಷ ತೆಗೆದುಕೊಂಡಿತು.

ಏಷ್ಯನ್ ಗೇಮ್ಸ್ ಚಾಂಪಿಯನ್ನರಾದ ಭಾರತದ ಆಟಗಾರರು ಸೆಮಿಫೈನಲ್ನಲ್ಲಿ ಕೊರಿಯಾದ ಕಾಂಗ್ ಮಿನ್ ಹ್ಯುಕ್– ಸಿಯೊ ಸಿಯುಂಗ್ ಜೇ ಮತ್ತು ಮಲೇಷ್ಯಾದ ಆರೊನ್ ಚಿಯಾ– ಸೊಹ್ ವುಯಿ ಯಿಕ್ ನಡುವಣ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.

ಮಹಿಳೆಯರ ಡಬಲ್ಸ್ನ ಕ್ವಾರ್ಟರ್ ಫೈನಲ್ನಲ್ಲಿ ಆಶ್ವಿನಿ ಪೊನ್ನಪ್ಪ– ತನಿಶಾ ಕ್ರಾಸ್ಟೊ ಜೋಡಿ ಸೋಲನುಭವಿಸಿತು. ವಿಶ್ವ ಕ್ರಮಾಂಕದಲ್ಲಿ 15ನೇ ಸ್ಥಾನದಲ್ಲಿರುವ ಜಪಾನ್ನ ಇವಾನಾಗಾ– ನಕಾನಿಶಿ ಜೋಡಿ 21–15, 21–13 ರಿಂದ ಭಾರತದ ಆಟಗಾರ್ತಿಯರ ಮೇಲೆ ಗೆಲ್ಲಲು 39 ನಿಮಿಷ ತೆಗೆದುಕೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.