ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜು: ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡ ಬಿಎಸಿ

Published 10 ಡಿಸೆಂಬರ್ 2023, 16:22 IST
Last Updated 10 ಡಿಸೆಂಬರ್ 2023, 16:22 IST
ಅಕ್ಷರ ಗಾತ್ರ

ಉಡುಪಿ: ಆರಂಭದ ದಿನದಿಂದಲೇ ಎಲ್ಲ ವಿಭಾಗಗಳಲ್ಲೂ ಆಧಿಪತ್ಯ ಸ್ಥಾಪಿಸಿದ್ದ ಬೆಂಗಳೂರಿನ ಬಸವನಗುಡಿ ಈಜುಕೇಂದ್ರ (ಬಿಎಸಿ) ರಾಜ್ಯ ಶಾರ್ಟ್ ಕೋರ್ಸ್ ಈಜು ಚಾಂಪಿಯನ್‌ಷಿಪ್‌ನ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು. ಬೆಂಗಳೂರಿನ ಡಾಲ್ಫಿನ್ ಅಕ್ವಾಟಿಕ್ಸ್‌ ತಂಡ ರನ್ನರ್ ಅಪ್ ಸ್ಥಾನ ತನ್ನದಾಗಿಸಿಕೊಂಡಿತು.

ಕರ್ನಾಟಕ ರಾಜ್ಯ ಈಜು ಸಂಸ್ಥೆ ಆಶ್ರಯದಲ್ಲಿ ಇಲ್ಲಿನ ಅಜ್ಜರಕಾಡು ಈಜುಕೊಳದಲ್ಲಿ ಭಾನುವಾರ ಮುಕ್ತಾಯಗೊಂಡ ಚಾಂಪಿಯನ್‌ಷಿಪ್‌ನಲ್ಲಿ ಬಿಎಸಿ 1007 ಪಾಯಿಂಟ್ ಕಲೆ ಹಾಕಿತು.

7 ಕೂಟ ದಾಖಲೆಗಳು ನಿರ್ಮಾಣವಾದ ಸ್ಪರ್ಧೆಗಳಲ್ಲಿ ಡಾಲ್ಫಿನ್ ಅಕ್ವಾಟಿಕ್ಸ್ 360 ಪಾಯಿಂಟ್ಸ್ ಗಳಿಸಿತು. ಈ ಕ್ಲಬ್‌ನ ಮೂವರು ವೈಯಕ್ತಿಕ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡರು. ಮೂರನೇ ಸ್ಥಾನ ಗಳಿಸಿದ ಡಿಕೆವಿ ಈಜುಕೇಂದ್ರ 213 ಪಾಯಿಂಟ್ಸ್ ಪಡೆದುಕೊಂಡಿತು. 192 ಪಾಯಿಂಟ್‌ಗಳೊಂದಿಗೆ ನೆಟ್ಟಕಲ್ಲಪ್ಪ ಈಜುಕೇಂದ್ರ ನಾಲ್ಕನೇ ಸ್ಥಾನ ಗಳಿಸಿತು.

ಕೊನೆಯ ದಿನದ ಫಲಿತಾಂಶಗಳು

ಗುಂಪು–1: 25 ಮೀಟರ್ಸ್ ಫ್ರೀಸ್ಟೈಲ್‌: ಬಾಲಕರು: ಅಲೆಸ್ಟರ್ ಸ್ಯಾಮ್ಯುಯೆಲ್‌ ರೇಗೊ (ಡಾಲ್ಫಿನ್ ಅಕ್ವಾಟಿಕ್ಸ್‌)–1, ಚಿಂತನ್ ಎಸ್‌.ಶೆಟ್ಟಿ (ಮಂಗಳಾ ಈಜು ಕ್ಲಬ್‌)–2, ಶ್ರೇಯಸ್ ಮಂಜುನಾಥ್ (ಬಿಎಸಿ)–3. ಕಾಲ: 11.80ಸೆ; ಬಾಲಕಿಯರು: ನೈಶಾ ಶೆಟ್ಟಿ (ಡಾಲ್ಫಿನ್ ಅಕ್ವಾಟಿಕ್ಸ್‌)–1, ಸಾಕ್ಷಿ ದ್ಯಾಮಣ್ಣವರ (ಡಾಲ್ಫಿನ್‌ ಅಕ್ವಾಟಿಕ್ಸ್)–2, ಹಿತೈಷಿ ವಿ  (ವಿಜಯನಗರ ಈಜುಕೇಂದ್ರ)–3. ಕಾಲ: 13.60ಸೆ. ‌50 ಮೀ ಬ್ರೆಸ್ಟ್ ಸ್ಟ್ರೋಕ್‌: ಬಾಲಕರು: ಸೂರ್ಯ ಜೋಯಪ್ಪ (ಬಿಎಸಿ)–1, ವಿಶಾಖನ್‌ ಸರವಣನ್‌ (ಬಿಎಸಿ)–2, ಸುಯೋಗ್ ಗೌಡ (ನೆಟ್ಟಕಲ್ಲಪ್ಪ ಈಜುಕೇಂದ್ರ)–3. ಕಾಲ: 31.07ಸೆ; ಬಾಲಕಿಯರು: ಪ್ರತೀಕ್ಷಾ ಶೆಣೈ (ಪುತ್ತೂರು ಈಜು ಕ್ಲಬ್‌)–1, ಜಗಶ್ರೀ ಪೂಂಜ (ಬಿಎಸಿ)–2, ಆರಾಧನಾ ಗೌಡ (ಡಾಲ್ಫಿನ್ ಅಕ್ವಾಟಿಕ್ಸ್‌)–3. ಕಾಲ:36.75ಸೆ. 100 ಮೀ ಫ್ರೀಸ್ಟೈಲ್‌; ಬಾಲಕರು: ಚಿಂತನ್ ಎಸ್.ಶೆಟ್ಟಿ (ಮಂಗಳಾ ಈಜು ಕೇಂದ್ರ)–1, ಅಲೆಸ್ಟರ್ ಸ್ಯಾಮ್ಯುಯೆಲ್ ರೇಗೊ (ಡಾಲ್ಫಿನ್ ಅಕ್ವಾಟಿಕ್ಸ್‌)–2, ಶ್ರೇಯಸ್ ಮಂಜುನಾಥ್ (ಬಿಎಸಿ)–3. ಕಾಲ: 53.34ಸೆ; ಬಾಲಕಿಯರು: ನೈಶಾ ಶೆಟ್ಟಿ (ಡಾಲ್ಫಿನ್ ಅಕ್ವಾಟಿಕ್ಸ್‌)–1, ಜಗಶ್ರೀ ಪೂಂಜ (ಬಿಎಸಿ)–2, ಸಾಕ್ಷಿ ದ್ಯಾಮಣ್ಣವರ (ಡಾಲ್ಫಿನ್ ಅಕ್ವಾಟಿಕ್ಸ್‌)–3. ಕಾಲ: 1ನಿ 01.92ಸೆ. 4x50 ಮೀ ಮೆಡ್ಲೆ: ಬಾಲಕರು:ಬಿಎಸಿ ‘ಎ’–1, ಬಿಎಸಿ ‘ಬಿ’–2, ಡಾಲ್ಫಿನ್ ಅಕ್ವಾಟಿಕ್ಸ್‌–3. ಕಾಲ:1ನಿ 50.05ಸೆ (ಕೂಟ ದಾಖಲೆ: ಹಿಂದಿನ ದಾಖಲೆ: ಬಿಎಸಿ 1ನಿ 50.80ಸೆ; 2022).

ಗುಂಪು–2: 25 ಮೀ ಫ್ರೀಸ್ಟೈಲ್‌: ಬಾಲಕರು: ಸಾತ್ವಿಕ್ ನಾಯಕ್‌ ಸುಜೀರ್ (ಡಾಲ್ಫಿನ್ ಅಕ್ವಾಟಿಕ್ಸ್‌)–1, ದಕ್ಷ್ ಮಟ್ಟ (ಬಿಎಸಿ)–2, ವಫಿ ಅಬ್ದುಲ್ ಹಕೀಮ್ (ಬಿಎಸಿ)–3. ಕಾಲ:12.43 ಸೆ; ಬಾಲಕಿಯರು: ಚರಿತಾ ಫಣೀಂದ್ರನಾಥ್‌ (ಎಲೀಟ್‌ ಸ್ಪೋರ್ಟ್ಸ್ ಅಕಾಡೆಮಿ)–1, ತ್ರಿಶಾ ಸಿಂಧು (ಡಿಕೆವಿ ಈಜುಕೇಂದ್ರ)–2, ತಿಸ್ಯಾ ಸೋನಾರ್ (ಪಿಎಂ ಈಜುಕೇಂದ್ರ)–3. ಕಾಲ: 13.61ಸೆ; 50 ಮೀ ಬ್ರೆಸ್ಟ್ ಸ್ಟ್ರೋಕ್‌: ಬಾಲಕರು: ದಕ್ಷ್‌ ಮಟ್ಟ–1, ಸಪ್ತಾಶ್ವ ಬ್ಯಾನರ್ಜಿ–2, ಯಶ್ ಪಾಲ್‌–3 (ಮೂವರೂ ಬಿಎಸಿ). ಕಾಲ:32.37ಸೆ; ಬಾಲಕಿಯರು: ಗಗನಾ ಸಿ.ಎಂ (ಗ್ಲೋಬಲ್ ಈಜುಕೇಂದ್ರ)–1, ಹಿಯಾ ಮನ್‌ಚಂದಾ (ಡಾಲ್ಫಿನ್‌ ಅಕ್ವಾಟಿಕ್ಸ್‌)–2, ನಾಗಸಾಕ್ಷಿ ಎಂ (ಬಿಎಸಿ)–3. ಕಾಲ:37.14ಸೆ. 100 ಮೀ ಫ್ರೀಸ್ಟೈಲ್‌: ಬಾಲಕರು: ಸಾತ್ವಿಕ್ ನಾಯಕ್ ಸುಜೀರ್ (ಡಾಲ್ಫಿನ್ ಅಕ್ವಾಟಿಕ್ಸ್‌)–1, ಋಷಿತ್ ರಂಗನ್ (ಬಿಎಸಿ)–2, ಅನೀಶ್ ಅನಿರುದ್ಧ ಕೋರೆ (ನೆಟ್ಟಕಲ್ಲಪ್ಪ ಈಜುಕೇಂದ್ರ)–3. ಕಾಲ:56.76ಸೆ. ಬಾಲಕಿಯರು: ತಿಸ್ಯಾ ಸೋನಾರ್ (ಪಿಎಂ ಈಜುಕೇಂದ್ರ)–1, ಚರಿತಾ ಫಣೀಂದ್ರನಾಥ್‌ (ಎಲೀಟ್‌ ಕ್ರೀಡಾ ಅಕಾಡೆಮಿ)–2, ತ್ರಿಶಾ ಸಿಂಧು (ಡಿಕೆವಿ ಈಜುಕೇಂದ್ರ)–3. ಕಾಲ:1ನಿ02.01ಸೆ. 200 ಮೀ ಬ್ಯಾಕ್‌ಸ್ಟ್ರೋಕ್‌: ಬಾಲಕರು: ಸಮರ್ಥ್ ಗೌಡ (ಬಿಎಸಿ)–1, ಸಾತ್ವಿಕ್ ನಾಯಕ್ ಸುಜೀರ್ (ಡಾಲ್ಫಿನ್‌ ಅಕ್ವಾಟಿಕ್ಸ್‌)–2, ಅಭಿಮನ್ಯು ನಂಬಿಯಾರ್‌ (ಡಾಲ್ಫಿನ್ ಅಕ್ವಾಟಿಕ್ಸ್‌)–3. ಕಾಲ:2 ನಿ16.92ಸೆ; ಬಾಲಕಿಯರು: ತಾನ್ಯಾ ಎಂ.ಎನ್‌ (ಬಿಎಸಿ)–1, ತನ್ಮಯಿ ಧರ್ಮೇಶ್‌ (ಗ್ಲೋಬಲ್‌ ಈಜುಕೇಂದ್ರ)–2, ಅದಿತಿ ವಿನಾಯಕ್ ರೆಳೇಕರ್ (ಬಿಎಸಿ)–3. ಕಾಲ:2ನಿ 29.01ಸೆ. 4x50ಮೀ ಮೆಡ್ಲೆ: ಬಾಲಕರು: ಬಿಎಸಿ ‘ಎ’–1, ಡಾಲ್ಫಿನ್‌ ಅಕ್ವಾಟಿಕ್ಸ್‌–2, ಬಿಎಸಿ ‘ಬಿ’–3. ಕಾಲ: 1ನಿ58.15ಸೆ.

ಗುಂಪು–3: 50 ಮೀ ಬ್ರೆಸ್ಟ್‌ ಸ್ಟ್ರೋಕ್‌: ಬಾಲಕರು: ರಾಮಪ್ರಕಾಶ್ (ಗ್ಲೋಬಲ್ ಈಜುಕೇಂದ್ರ)–1, ಮೊಹಮ್ಮದ್ ಅಮಾನ್ ಸಮೀರ್ (ಬೆಂಗಳೂರು ಈಜು ಸಂಶೋಧನಾ ಕೇಂದ್ರ)–2, ಅವ್ಯುಕ್ತ್ ಮೋಹನ್ (ಬಿಎಸಿ)–3. ಕಾಲ: 40.21ಸೆ; ಬಾಲಕಿಯರು: ಮಾನ್ಯಾ ಆರ್‌.ವಾಧ್ವ (ಪಿಎಂ ಈಜುಕೇಂದ್ರ)–1, ಇಂಚರಾ ಎಚ್‌.ಆರ್‌ (ನೆಟ್ಟಕಲ್ಲಪ್ಪ ಈಜುಕೇಂದ್ರ)–2, ಸಿರಿ ಪ್ರೀತಂ (ಏಕಲವ್ಯ ಕ್ರೀಡಾ ಅಕಾಡೆಮಿ)–3. ಕಾಲ: 40.75ಸೆ; 100 ಮೀ ಫ್ರೀಸ್ಟೈಲ್‌: ಬಾಲಕರು: ನಿಖಿಲ್ ತೇಜ್ ರೆಡ್ಡಿ (ಬಿಎಸಿ)–1, ರೋನಿತ್ ಅರುಣ್ ಕುಮಾರ್ (ಬೆಂಗಳೂರು ಸ್ವಿಮ್ಮಿಂಗ್ ಅಕಾಡೆಮಿ)–2, ವ್ಯಾಸ್ ವಿಜಯ್‌ (ಡಿಕೆವಿ ಈಜುಕೇಂದ್ರ)–3. ಕಾಲ:1ನಿ 05.49ಸೆ; ಬಾಲಕಿಯರು: ಸಮನ್ವಿ ವಿ. (ಡಿಕೆವಿ ಈಜುಕೇಂದ್ರ)–1, ಮಾನ್ಯ ಆರ್‌. ವಾಧ್ವ (ಪಿಎಂ ಈಜುಕೇಂದ್ರ)–2, ದಿಶಾ ಹೊಂಡಿ (ಅಬಾ ಕ್ಲಬ್‌, ಬೆಳಗಾವಿ)–3. ಕಾಲ: 1ನಿ 07.43ಸೆ. 4x50ಮೀ ಮೆಡ್ಲೆ: ಬಾಲಕರು: ಬಿಎಸಿ ‘ಎ’–1, ಬಿಎಸಿ ‘ಬಿ’–2, ನೆಟ್ಟಕಲ್ಲಪ್ಪ ಈಜುಕೇಂದ್ರ–3. ಕಾಲ: 2ನಿ24.03ಸೆ.

ವೈಯಕ್ತಿಕ ಚಾಂಪಿಯನ್ನರು ಗುಂಪು;ವಿಭಾಗ;ಈಜುಪಟು;ಕ್ಲಬ್‌;ಪಾಯಿಂಟ್ಸ್‌ ಒಂದು;ಬಾಲಕಿ;ನೈಶಾ ಶೆಟ್ಟಿ;ಡಾಲ್ಫಿನ್‌;45 ಒಂದು;ಬಾಲಕ;ಅಲೆಸ್ಟರ್ ರೇಗೊ;ಡಾಲ್ಫಿನ್‌;40 ಎರಡು;ಬಾಲಕ;ಶರಣ್‌ಎಸ್‌;ಪಿಎಂಎಸ್‌ಸಿ;38 ಎರಡು;ಬಾಲಕ;ಸಾತ್ವಿಕ್ ನಾಯಕ್;ಡಾಲ್ಫಿನ್‌;38 ಎರಡು;ಬಾಲಕಿ;ತಿಸ್ಯಾ ಸೋನಾರ್‌;ಪಿಎಂಎಸ್‌ಸಿ;36 ಮೂರು;ಬಾಲಕ;ನಿಖಿಲ್ ತೇಜ್;ಬಿಎಸಿ;36; ಮೂರು;ಬಾಲಕ;ರೋನಿತ್ ಅರುಣ್;ಬಿಎಸ್‌ಎ;36 ಮೂರು;ಬಾಲಕಿ;ಸುಮನ್ವಿ.ವಿ;ಡಿಕೆವಿ;35

ರಾಜ್ಯ ಈಜು ಸಂಸ್ಥೆ ಉಡುಪಿಯ ಅಜ್ಜರಕಾಡು ಈಜುಕೆಂದ್ರದಲ್ಲಿ ಆಯೋಜಿಸಿದ್ದ ರಾಜ್ಯ ಶಾರ್ಟ್ ಕೋರ್ಸ್‌ ಈಜು ಚಾಂಪಿಯನ್‌ಷಿಪ್‌ನಲ್ಲಿ ರನ್ನರ್ ಅಪ್ ಸ್ಥಾನ ಗಳಿಸಿದ ಬೆಂಗಳೂರಿನ ಡಾಲ್ಫಿನ್ ಅಕ್ವಾಟಿಕ್ಸ್‌ ತಂಡದ ಸಂಭ್ರಮ
ರಾಜ್ಯ ಈಜು ಸಂಸ್ಥೆ ಉಡುಪಿಯ ಅಜ್ಜರಕಾಡು ಈಜುಕೆಂದ್ರದಲ್ಲಿ ಆಯೋಜಿಸಿದ್ದ ರಾಜ್ಯ ಶಾರ್ಟ್ ಕೋರ್ಸ್‌ ಈಜು ಚಾಂಪಿಯನ್‌ಷಿಪ್‌ನಲ್ಲಿ ರನ್ನರ್ ಅಪ್ ಸ್ಥಾನ ಗಳಿಸಿದ ಬೆಂಗಳೂರಿನ ಡಾಲ್ಫಿನ್ ಅಕ್ವಾಟಿಕ್ಸ್‌ ತಂಡದ ಸಂಭ್ರಮ
ಗುಂಪು–3ರ ಬಾಲಕರ ವಿಭಾಗದ ವೈಯಕ್ತಿಕ ಚಾಂಪಿಯನ್ ನಿಖಿಲ್ ತೇಜ್‌ ರೆಡ್ಡಿ 
ಗುಂಪು–3ರ ಬಾಲಕರ ವಿಭಾಗದ ವೈಯಕ್ತಿಕ ಚಾಂಪಿಯನ್ ನಿಖಿಲ್ ತೇಜ್‌ ರೆಡ್ಡಿ 
ಗುಂಪು–2ರ ಬಾಲಕಿಯರ ವಿಭಾಗದ ವೈಯಕ್ತಿಕ ಚಾಂಪಿಯನ್‌ ತಿಸ್ಯಾ ಸೋನಾರ್ ಕೋಚ್‌ ಶ್ರೀಶ ರೆಡ್ಡಿ ಜೊತೆ
ಗುಂಪು–2ರ ಬಾಲಕಿಯರ ವಿಭಾಗದ ವೈಯಕ್ತಿಕ ಚಾಂಪಿಯನ್‌ ತಿಸ್ಯಾ ಸೋನಾರ್ ಕೋಚ್‌ ಶ್ರೀಶ ರೆಡ್ಡಿ ಜೊತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT