ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲಿಬಾಲ್ | ಟಾರ್ಪಿಡೋಸ್‌ಗೆ ಮಣಿದ ಡಿಫೆಂಡರ್ಸ್‌

Published 27 ಫೆಬ್ರುವರಿ 2024, 21:30 IST
Last Updated 27 ಫೆಬ್ರುವರಿ 2024, 21:30 IST
ಅಕ್ಷರ ಗಾತ್ರ

ಬೆಂಗಳೂರು: ಸಾಂಘಿಕ ಆಟ ಪ್ರದರ್ಶಿಸಿದ ಬೆಂಗಳೂರು ಟಾರ್ಪಿಡೋಸ್‌ ತಂಡವು ಪ್ರೈಮ್ ವಾಲಿಬಾಲ್ ಲೀಗ್‌ನ ಮೂರನೇ ಆವೃತ್ತಿಯ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಅಹಮದಾಬಾದ್ ಡಿಫೆಂಡರ್ಸ್‌ ವಿರುದ್ಧ ಗೆಲುವು ಸಾಧಿಸಿತು.

ಚೆನ್ನೈನ ಜವಾಹರ್‌ಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡವು 17-15, 15-13, 15-13 ರಿಂದ ಡಿಫೆಂಡರ್ಸ್‌ ತ‌ಂಡವನ್ನು ನೇರ ಸೆಟ್‌ಗಳಿಂದ ಸುಲಭವಾಗಿ ಮಣಿಸಿತು. ಈ ಮೂಲಕ ಹಿಂದಿನ ಪಂದ್ಯದ ಸೋಲಿಗೆ ಮುಯ್ಯಿಯನ್ನು ಟಾರ್ಪಿಡೋಸ್‌ ತೀರಿಸಿಕೊಂಡಿತು.

ಟಾರ್ಪಿಡೋಸ್‌ ಪರ ಮಿಂಚಿದ್ದ ಥಾಮಸ್ ಹೆಪ್ಟಿನ್‌ಸ್ಟಾಲ್ ಪಂದ್ಯದ ಆಟಗಾರ ಪ್ರಶಸ್ತಿಗೆ ಭಾಜನರಾದರು. ಅಹಮದಾಬಾದ್ ತಂಡದ ಆಟಗಾರರರು ಎಸಗಿದ ಲೋಪ ಬೆಂಗಳೂರು ತಂಡಕ್ಕೆ ವರವಾಯಿತು. ತಂಡದ ಮುತ್ತುಸ್ವಾಮಿ ತಂತ್ರ ಫಲ ನೀಡಿದರೆ, ಮುಜೀಬ್ ಅದ್ಭುತ ಬ್ಲಾಕ್‌ಗಳ ಮೂಲಕ ಗಮನ ಸೆಳೆದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT