ನವದೆಹಲಿ: ದೀರ್ಘಕಾಲದಿಂದ ಬಾಕಿಯಿರುವ ಭಾರತ ಬಾಕ್ಸಿಂಗ್ ಫೆಡರೇಷನ್ನ ಚುನಾವಣೆ ಇದೇ ತಿಂಗಳ 21ರಂದು ದೆಹಲಿಯಲ್ಲಿ ನಡೆಯಲಿದೆ ಎಂದು ಬಿಎಫ್ಐ ಆಡಳಿತದ ಹೊಣೆ ವಹಿಸಿರುವ ಹಂಗಾಮಿ ಸಮಿತಿ ಶುಕ್ರವಾರ ಪ್ರಕಟಿಸಿದೆ.

ಭಾರತ ಬಾಕ್ಸಿಂಗ್ ಫೆಡರೇಷನ್ನ ವಾರ್ಷಿಕ ಮಹಾಸಭೆ (ಎಜಿಎಂ) ಆಗಸ್ಟ್ 21ರಂದು ದೆಹಲಿ–ಎನ್ಸಿಆರ್ನಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಹಂಗಾಮಿ ಸಮಿತಿಯ ಮುಖ್ಯಸ್ಥ ಅಜಯ್ ಸಿಂಗ್ ಸಹಿ ಮಾಡಿರುವ ಮಾರ್ಚ್ 31ರ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

‘ಈ ಹಿಂದಿನ ಸಭೆಯತ ನಡಾವಳಿಗಳಿಗೆ ಒಪ್ಪಿಗೆ ನೀಡುವುದು ಮತ್ತು 2025–29ರ ಸಾಲಿಗೆ ಪದಾಧಿಕಾರಿಗಳ ಆಯ್ಕೆ, ಅಧ್ಯಕ್ಷರ ಅನುಮತಿಯ ಮೇಲೆ ಇತರ ವಿಷಯದ ಮೇಲೆ ಚರ್ಚೆ’ ಇವು ಕಾರ್ಯಸೂಚಿಯಾಗಿದೆ.

ಬಾಕ್ಸಿಂಗ್ ಫೆಡರೇಷನ್ ಪದಾಧಿಕಾರಿಗಳ ಅವಧಿ ಫೆಬ್ರುವರಿ 2ರಂದು ಮುಗಿದಿದೆ. ಮಾರ್ಚ್ 28ರಂದು ಚುನಾವಣೆ ಸಹ ನಿಗದಿಯಾಗಿತ್ತು. ಆದರೆ ಕಾನೂನು ತೊಡಕುಗಳು, ದಾವೆ– ಪ್ರತಿದಾವೆಗಳಿಂದಾಗಿ ಚುನಾವಣೆ ನಡೆಸಲು ಸಾಧ್ಯವಾಗಿರಲಿಲ್ಲ. ಚುನಾವಣಾ ಅಧಿಕಾರಿಯಾಗಿದ್ದ ದೆಹಲಿ ಹೈಕೋರ್ಟ್ನ ಮಾಜಿ ನ್ಯಾಯಮೂರ್ತಿ ಆರ್.ಕೆ.ಗೌಬಾ ಅವರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ನಾಲ್ಕು ತಿಂಗಳ ಹಿಂದೆ ವರ್ಲ್ಡ್ ಬಾಕ್ಸಿಂಗ್ ಹಂಗಾಮಿ ಸಮಿತಿಯನ್ನು ರಚಿಸಿ ದೇಶದ ಬಾಕ್ಸಿಂಗ್ ಆಗುಹೋಗುಗಳ ಜವಾಬ್ದಾರಿ ವಹಿಸಿತ್ತು. ಆಗಸ್ಟ್ 31ರೊಳಗೆ ಚುನಾವಣೆ ನಡೆಸುವಂತೆ ಗಡುವನ್ನೂ ನೀಡಿತ್ತು.

ಈಗ ಚುನಾವಣಾಧಿಕಾರಿ ನೇಮಕ, ಮತದಾನದ ಹಕ್ಕು ಹೊಂದಿರುವವರ ಪಟ್ಟಿ ಹೊಸದಾಗಿ ರೂಪಿಸಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.