ಚಂಡೀಗಢ: ಅರ್ಜುನ ಪ್ರಶಸ್ತಿ ವಿಜೇತೆ, ಮಾಜಿ ವಿಶ್ವ ಚಾಂಪಿಯನ್ ಬಾಕ್ಸರ್ ಸ್ವೀಟಿ ಬೂರಾ ಅವರು ತಮ್ಮ ಪತಿ ದೀಪಕ್ ಹೂಡಾ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.

ಸ್ವೀಟಿ ಅವರ ಪತಿ ದೀಪಕ್ ಕಬ್ಬಡ್ಡಿಯಲ್ಲಿ ಏಷ್ಯಾಡ್ ಕಂಚಿನ ಪದಕ ವಿಜೇತರಾಗಿದ್ದಾರೆ.

ಸ್ವೀಟಿ ಮತ್ತು ದೀಪಕ್ 2022ರಲ್ಲಿ ವಿವಾಹವಾಗಿದ್ದರು. ಇದೀಗ ದೀಪಕ್ ಮತ್ತು ಅವರ ಕುಟುಂಬ ಸದಸ್ಯರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಹರಿಯಾಣದ ಹಿಸ್ಸಾರ್ನಲ್ಲಿ ಪ್ರಕರಣ ದಾಖಲಿಸಿದ್ದಾರೆ.

‘ಫೆ.25ರಂದು ಸ್ವೀಟಿ ಅವರ ದೂರನ್ನು ಆಧರಿಸಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ದೀಪಕ್ ಅವರಿಗೆ ಎರಡು, ಮೂರು ಬಾರಿ ನೊಟೀಸ್ ನೀಡಿದರೂ ಅವರು ಠಾಣೆಗೆ ಹಾಜರಾಗಿಲ್ಲ’ ಎಂದು ಹಿಸ್ಸಾರ್ನ ಮಹಿಳಾ ಪೊಲೀಸ್ ಠಾಣೆಯ ಎಸ್ಎಚ್ಒ ಸೀಮಾ ತಿಳಿಸಿದ್ದಾರೆ.

‘ಈ ಬಗ್ಗೆ ದೀಪಕ್ ಅವರನ್ನು ಸುದ್ದಿಸಂಸ್ಥೆ ಸಂಪರ್ಕಿಸಿದಾಗ ಅವರು ತಮ್ಮ ಗೈರುಹಾಜರಿ ಸಮರ್ಥಿಸಿಕೊಂಡರು. ‘ಪ್ರಕರಣದಿಂದ ಮಾನಸಿಕ ಕ್ಷೋಭೆಗೆ ಒಳಗಾಗಿದ್ದೇನೆ’ ಎಂದರು.

‘ನಾನು ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸಿದ್ದು, ದಿನಾಂಕ ಮುಂದೂಡುವಂತೆ ವಿನಂತಿಸಿದ್ದೇನೆ. ನಾನು ಠಾಣೆಗೆ ಖಂಡಿತ ಹೋಗುವೆ. ಪತ್ನಿಯ ವಿರುದ್ಧ ನಕಾರಾತ್ಮಕವಾಗಿ ಮಾತನಾಡುವುದಿಲ್ಲ. ಆಕೆಯನ್ನು ಭೇಟಿ ಮಾಡಲು ನನಗೆ ಅವಕಾಶ ನೀಡುತ್ತಿಲ್ಲ’ ಎಂದು ಹೇಳಿದರು.

ಈ ಕುರಿತು ಪ್ರತಿಕ್ರಿಯಿಸಲು ಸ್ವೀಟಿ ನಿರಾಕರಿಸಿದ್ದಾರೆ.

‘ವಿಲಾಸಿ ಕಾರು ನೀಡುವಂತೆ ಒತ್ತಾಯಿಸಿದ್ದು, ಅದನ್ನು ಈಡೇರಿಸಲಾಗಿದೆ. ಆದರೆ ಪತಿ ಆಕೆಗೆ ಹೊಡೆಯುತ್ತಾರೆ. ಹಣ ಕೊಡುವಂತೆ ಪೀಡಿಸುತ್ತಿರುತ್ತಾರೆ’ ಎಂದು ಎಸ್ಎಚ್ಒ ದೂರಿನಲ್ಲಿರುವ ಅಂಶ ಹೆಕ್ಕಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.