ಬ್ಯಾಂಕಾಕ್: ಭಾರತದ ಎಚ್.ಎಸ್. ಪ್ರಣಯ್ ಅವರು ಬಿಡಬ್ಲ್ಯುಎಫ್ ವಿಶ್ವ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಅಂತಿಮವಾಗಿ ಜಯ ಗಳಿಸಿದರು.

ಇಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಶುಕ್ರವಾರ ಪ್ರಣಯ್ 14–21, 21–17, 21–18ರಿಂದ ವಿಶ್ವ ಕ್ರಮಾಂಕದಲ್ಲಿ ಅಗ್ರಸ್ಥಾನದಲ್ಲಿರುವ, ಒಲಿಂಪಿಕ್ ಚಾಂಪಿಯನ್ ವಿಕ್ಟರ್ ಅಕ್ಸೆಲ್ಸೆನ್ ಅವರಿಗೆ ಆಘಾತ ನೀಡಿದರು. ಆದರೆ ಎ ಗುಂಪಿನ ಮೊದಲೆರಡು ಪಂದ್ಯಗಳಲ್ಲಿ ಸೋತಿದ್ದ ಕಾರಣ ಅವರು ಈಗಾಗಲೇ ಸೆಮಿಫೈನಲ್ ಅರ್ಹತೆಯಿಂದ ಹೊರಬಿದ್ದಿದ್ದರು. ಅಭಿಯಾನ ಅಂತ್ಯಗೊಳಿಸುವ ಮೊದಲು ಡೆನ್ಮಾರ್ಕ್ನ ಪ್ರಮುಖ ಆಟಗಾರನನ್ನು ಮಣಿಸಿದ ಸಮಾಧಾನ ಅವರದಾಯಿತು. 51 ನಿಮಿಷಗಳಲ್ಲಿ ಈ ಪಂದ್ಯ ಮುಗಿಯಿತು.

ಅಕ್ಸೆಲ್ಸೆನ್ ವಿರುದ್ಧ ಪ್ರಣಯ್ ಅವರಿಗೆ ಇದು ಎರಡನೇ ಜಯವಾಗಿದೆ. ಕಳೆದ ವರ್ಷ ಇಂಡೊನೇಷ್ಯಾ ಮಾಸ್ಟರ್ಸ್ ಟೂರ್ನಿಯಲ್ಲಿ ಭಾರತದ ಆಟಗಾರ ಗೆದ್ದಿದ್ದರು. ಆದರೆ ಮುಖಾಮುಖಿಯಾದ ಒಟ್ಟು ಏಳು ಪಂದ್ಯಗಳಲ್ಲಿ ಡೆನ್ಮಾರ್ಕ್ ಆಟಗಾರ ಐದು ಬಾರಿ ಮೇಲುಗೈ ಸಾಧಿಸಿದ್ದಾರೆ.

ಗುಂಪಿನ ಎರಡನೇ ಪಂದ್ಯದಲ್ಲಿ ಪ್ರಣಯ್21-23, 21-17, 19-21ರಿಂದ ಚೀನಾದ ಲು ಗುವಾಂಗ್ ಜು ವಿರುದ್ಧ ಸೋತಿದ್ದರು.

ದೇಶದ ಸ್ಪರ್ಧಿಯಾಗಿ ಪ್ರಣಯ್ ಒಬ್ಬರೇ ಇದ್ದುದರಿಂದ ಅವರ ಸೋಲಿನೊಂದಿಗೆಭಾರತದ ಅಭಿಯಾನ ಅಂತ್ಯವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.