ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿರುವ ಶ್ರೀ ಸಿದ್ಧಗಂಗಾ ಶಾಲೆಯ ಆಶ್ರಯದಲ್ಲಿ ಕೇಂದ್ರಿಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಕ್ಲಸ್ಟರ್ ಎಂಟರ ಕೊಕ್ಕೊ ಟೂರ್ನಿಯು ಇದೇ 23 ರಿಂದ 25ರವರೆಗೆ ನಡೆಯಲಿದೆ.
ಎಸ್‌ಪಿಎಸ್ ಮೈದಾನದಲ್ಲಿ ಟೂರ್ನಿಯು ನಡೆಯಲಿದ್ದು. ಸಿಬಿಎಸ್‌ಇ ಶಾಲಾ ತಂಡಗಳು ಭಾಗವಹಿಸಲಿವೆ. 23ರಂದು ಬೆಳಿಗ್ಗೆ 10.30ಕ್ಕೆ ಟೂರ್ನಿಯನ್ನು ರಾಮನಗರ ಜಿಲ್ಲಾಧಿಕಾರಿ ಯಶವಂತ ಗುರುಕಾರ್ ಉದ್ಘಾಟಿಸುವರು. ಅಂತರರಾಷ್ಟ್ರೀಯ ಅಥ್ಲೀಟ್ ಅಶ್ವಿನಿ ಅಕ್ಕುಂಜಿ, ಸಿಬಿಎಸ್‌ಇ ಪ್ರಾದೇಶಿಕ ಕಚೇರಿ ಕಾರ್ಯದರ್ಶಿ ಅನಿತಾ ಜೆ ಸಾಸ್ವೆನ್ ಹಾಜರಿರುವರು.