ವಿಜ್ಕ್ ಆ್ಯನ್ ಜೀ, ನೆದರ್ಲೆಂಡ್ಸ್ : ಭಾರತದ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಅವರು ಟಾಟಾ ಸ್ಟೀಲ್ ಮಾಸ್ಟರ್ಸ್ ಚೆಸ್ ಟೂರ್ನಿಯ ಮೂರನೇ ಸುತ್ತಿನ ಪಂದ್ಯದಲ್ಲಿ ಡ್ರಾ ಮಾಡಿಕೊಂಡಿದ್ದಾರೆ.

ಮಂಗಳವಾರ ನಡೆದ ಹಣಾಹಣಿಯಲ್ಲಿ ಐದು ಬಾರಿಯ ವಿಶ್ವ ಚಾಂಪಿಯನ್ ಆನಂದ್ ಅವರು ನೆದರ್ಲೆಂಡ್ಸ್‌ನ ಅನಿಶ್ ಗಿರಿ ಎದುರು ಪಾಯಿಂಟ್ ಹಂಚಿಕೊಂಡರು.

ಬಿಳಿ ಕಾಯಿಗಳೊಂದಿಗೆ ಆಡಿದ ಆನಂದ್, 12ನೇ ನಡೆಯವರೆಗೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರು. ನಂತರ ಗಿರಿ ಜಾಣ್ಮೆಯ ಆಟ ಆಡಿದರು. 21ನೇ ನಡೆಯ ನಂತರ ಉಭಯ ಆಟಗಾರರು ಡ್ರಾ ಮಾಡಿಕೊಳ್ಳಲು ಸಮ್ಮತಿಸಿದರು.

ನಾರ್ವೆಯ ಆಟಗಾರ, ಹಾಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್ ಅವರು ಅಮೆರಿಕದ ಜೆಫ್ರಿ ಕ್ಸಿಯಾಂಗ್ ಎದುರು ಡ್ರಾ ಸಾಧಿಸಿದರು.

ನೆದರ್ಲೆಂಡ್ಸ್‌ನ ಜೋರ್ಡನ್ ವಾನ್ ಫೊರೀಸ್ಟ್, ರಷ್ಯಾದ ಡೇನಿಯಲ್ ಡುಬೊವ್ ಅವರನ್ನು ಮಣಿಸಿದರು. ಅಮೆರಿಕದ ಫಾಬಿಯಾನೊ ಕರುವಾನ, ಚೀನಾದ ಯು ಯಾಂಗ್ಯಿ ಎದುರು ಗೆದ್ದರು. ಇನ್ನೊಂದು ಪಂದ್ಯದಲ್ಲಿ ಅಲಿರೆಜಾ ಫಿರೋಜ್, ರಷ್ಯಾದ ವ್ಲಾದಿಸ್ಲಾವ್ ಅರ್ಟೆಮೀವ್ ಅವರನ್ನು ಪರಾಭವಗೊಳಿಸಿದರು.

ಇತರ ಪಂದ್ಯಗಳಲ್ಲಿ ನಿಕಿತ್ ವಿಟಿವುಗೊವ್, ವೆಸ್ಲಿ ಸೊ ಎದುರೂ; ವ್ಲಾದಿಸ್ಲಾವ್ ಕೊವಾಲೆವ್, ಜಾನ್ ಕ್ರಿಜಿಟೊಫ್ ಡುಡಾ ಮೇಲೂ ಡ್ರಾ ಸಾಧಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.