ಷಿಕಾಗೊ: ದಿ ಬ್ಯಾಂಕ್ ಆಫ್ ಅಮೆರಿಕ ಪ್ರಾಯೋಜಕತ್ವದ ಪ್ರತಿಷ್ಠಿತ ಷಿಕಾಗೊ ಮ್ಯಾರಥಾನ್ ಅನ್ನು ಕೊರೊನಾ ಬಿಕ್ಕಟ್ಟಿನಿಂದಾಗಿ ರದ್ದು ಮಾಡಲಾಗಿದೆ.

ಈ ವರ್ಷದ ಅಕ್ಟೋಬರ್ 11ರಂದು ನಿಗದಿಯಾಗಿದ್ದ ಮ್ಯಾರಥಾನ್‌ನಲ್ಲಿ 45,000 ಓಟಗಾರರು ಮತ್ತು ವೀಲ್‌ಚೇರ್ ಅಥ್ಲೀಟ್‌ಗಳು ಪಾಲ್ಗೊಳ್ಳಬೇಕಿತ್ತು.

‘ವರ್ಷಕ್ಕೊಮ್ಮೆ ನಡೆಯುತ್ತಿದ್ದ ಷಿಕಾಗೊ ಮ್ಯಾರಥಾನ್ ನಮ್ಮ ನಗರದ ಕೀರ್ತಿಯನ್ನು ಹೆಚ್ಚಿಸಿತ್ತು. ಈಗ ಎಲ್ಲೆಡೆಯೂ ಕೊರೊನಾ ಪ್ರಕರಣಗಳು ಏರುತ್ತಿವೆ. ಇಂತಹ ಸಮಯದಲ್ಲಿ ಮ್ಯಾರಥಾನ್ ನಡೆಸಿದರೆ ಎಲ್ಲರಿಗೂ ಅಪಾಯ. ಅಥ್ಲೀಟ್‌ಗಳು, ಅಧಿಕಾರಿಗಳು, ಸ್ವಯಂ ಸೇವಕರು ಹಾಗೂ ಲಕ್ಷಾಂತರ ಅಭಿಮಾನಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮ್ಯಾರಥಾನ್ ರದ್ದು ಮಾಡುವ ತೀರ್ಮಾನ ತೆಗೆದುಕೊಂಡಿದ್ದೇವೆ’ ಎಂದು ಷಿಕಾಗೊ ಮೇಯರ್ ಲೋರಿ ಲೈಟ್‌ಫುಟ್ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಈ ಬಾರಿಯ ಮ್ಯಾರಥಾನ್ ನಿಗದಿಯಂತೆ ನಡೆಯಲಿ ಎಂಬುದು ಎಲ್ಲರ ಹಾರೈಕೆಯಾಗಿತ್ತು. ನನಗೂ ಆ ಆಸೆ ಇತ್ತು’ ಎಂದಿದ್ದಾರೆ.

ಭಾನುವಾರದ ಅಂತ್ಯಕ್ಕೆ ಷಿಕಾಗೊದಲ್ಲಿ 55,184 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 2,682 ಮಂದಿ ಮೃತಪಟ್ಟಿದ್ದಾರೆ.

ಈ ವರ್ಷದ ಏಪ್ರಿಲ್‌ನಲ್ಲಿ ನಿಗದಿಯಾಗಿದ್ದ ಬೋಸ್ಟನ್ ಮ್ಯಾರಥಾನ್ ಅನ್ನು ಕೊರೊನಾ ಕಾರಣದಿಂದಾಗಿ ಸೆಪ್ಟೆಂಬರ್ 14ಕ್ಕೆ ಮುಂದೂಡಲಾಗಿತ್ತು. ಕೊರೊನಾ ಬಿಕ್ಕಟ್ಟು ಶಮನವಾಗುವ ಲಕ್ಷಣಗಳು ಗೋಚರಿಸದ ಕಾರಣ ಇತ್ತೀಚೆಗೆಆಯೋಜಕರು ಸ್ಪರ್ಧೆಯನ್ನು ರದ್ದು ಮಾಡುವ ತೀರ್ಮಾನ ಕೈಗೊಂಡಿದ್ದರು.

ಈ ವರ್ಷದ ನವೆಂಬರ್ 1ರಂದು ನಿಗದಿಯಾಗಿದ್ದ ನ್ಯೂಯಾರ್ಕ್ ಸಿಟಿ ಮ್ಯಾರಥಾನ್ ಕೂಡ ಕೋವಿಡ್–19ನಿಂದಾಗಿ ರದ್ದಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.