ಹಾಝಫ್ (ಪೋಲೆಂಡ್): ಮಹತ್ವಾಕಾಂಕ್ಷೆಯ 90 ಮೀ. ಎಸೆತದ ಮೈಲಿಗಲ್ಲು ದಾಟಿರುವ ಜಾವೆಲಿನ್ ತಾರೆ ನೀರಜ್ ಚೋಪ್ರಾ ಈಗ ಇನ್ನೂ ಹೆಚ್ಚಿನ ದೂರ ಎಸೆಯುವ ಗುರಿಯೊಡನೆ, ಆರ್ಲಿನ್ ಯಾನುಷ್ ಕುಸೊಸಿನ್ಸ್ಕಿ ಸ್ಮರಣಾರ್ಥ ಅಥ್ಲೆಟಿಕ್ ಕೂಟದಲ್ಲಿ ಶುಕ್ರವಾರ ಕಣಕ್ಕಿಳಿಯಲಿದ್ದಾರೆ. ಇಲ್ಲೂ ಅವರಿಗೆ ವಿಶ್ವದರ್ಜೆಯ ಎದುರಾಳಿಗಳ ಸವಾಲು ಇದೆ.

ದೋಹಾದಲ್ಲಿ ಹೋದ ವಾರ ನಡೆದ ಡೈಮಂಡ್ ಲೀಗ್ನಲ್ಲಿ ಚೋಪ್ರಾ ಭರ್ಚಿಯನ್ನು 90.23 ಮಿ. ದೂರಕ್ಕೆ ಎಸೆದಿದ್ದರು. ಆದರೆ ಕೊನೆಯ ಸುತ್ತಿನಲ್ಲಿ ಜರ್ಮನಿಯ ಜೂಲಿಯನ್ ವೇಬರ್ 91.06 ಮೀ. ದೂರಕ್ಕೆ ಎಸೆದ ಕಾರಣ ಭಾರತದ ತಾರೆ ಎರಡನೇ ಸ್ಥಾನಕ್ಕೆ ಸರಿಯಬೇಕಾಯಿತು. ವೇಬರ್ ಕೂಡ ಅದೇ ಮೊದಲ ಬಾರಿ 90 ಮೀ.ಗಳ ಎಲ್ಲೆಯನ್ನು ಮೀರಿದ್ದರು.

2022ರ ಯುರೋಪಿಯನ್ ಚಾಂಪಿಯನ್ ಹಾಗೂ 2024ರ ಬೆಳ್ಳಿ ವಿಜೇತ ವೇಬರ್ ಸಹ ಯಾನುಷ್ ಕುಸೊಸಿನ್ಸ್ಕಿ ಕೂಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ದೋಹಾದಲ್ಲಿ ಮೂರನೇ ಸ್ಥಾನ ಪಡೆದ ಗ್ರೆನೆಡಾದ ದಿಗ್ಗಜ ಆ್ಯಂಡರ್ಸನ್ ಪೀಟರ್ಸ್ ಅವರೂ ಸವಾಲೊಡ್ಡಲು ಸಜ್ಜಾಗಿದ್ದಾರೆ. ಪೀಟರ್ಸ್ ಅವರು ದೋಹಾದಲ್ಲಿ 84 ಮೀ. ದೂರ ಎಸೆದಿದ್ದರು.

ಪೋಲೆಂಡ್ನ ರಾಷ್ಟ್ರೀಯ ದಾಖಲೆ ವೀರ ಮರ್ಸಿನ್ ಕ್ರುಕೋವ್ಸ್ಕಿ (ವೈಯಕ್ತಿಕ ಶ್ರೇಷ್ಠ ಸಾಧನೆ: 89.55 ಮೀ.), ಇದೇ ದೇಶದ ಸಿಪ್ರಿಯಾನ್ ಮಿಗೋಲ್ಡ್ (ವೈ.ಶ್ರೇ.ಸಾ: 84.97) ಕಣದಲ್ಲಿರುವ ಇತರ ಪ್ರಮುಖರಲ್ಲಿ ಒಳಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.