ಬೀದಿಯಲ್ಲಿ ರೋಚಕವಾಗಿ ನಡೆಯುವ ಪಂದ್ಯ ಊರಿಗೆಲ್ಲಾ ಸುದ್ದಿಯಾಗುತ್ತಿತ್ತು. ಬ್ಯಾಟ್ನಿಂದ ಹೊಡೆಯುವ ಶಬ್ದ, ಮನೆಯ ಗೋಡೆ–ಕಿಟಕಿಗಳಿಗೆ ಅಪ್ಪಳಿಸುವ ಚೆಂಡಿನ ಸದ್ದು, ಆಟಗಾರರ ಆರ್ಭಟ ಇವೆಲ್ಲಾ ಹಳ್ಳಿಯ ತುಂಬಾ ಪ್ರತಿಧ್ವನಿಸುತ್ತಿದ್ದವು.

ಆದರೆ ನಗರಗಳ ಬೀದಿಯಲ್ಲಿ ಈ ರೀತಿಯ ದೃಶ್ಯಗಳನ್ನು ಕಾಣಲು ಸಾಧ್ಯವಿಲ್ಲ. ಒಬ್ಬರಿಗೊಬ್ಬರು ಮಾತನಾಡುವುದೇ ಹೆಚ್ಚು. ಸ್ವಲ್ಪ ಹೊತ್ತು ಆಡೋಣವೆಂದರೆ ಆಟದ ಮೈದಾನಗಳು, ಸ್ಥಳಗಳು ಎಲ್ಲಿವೆ ಎಂದು ಹುಡುಕಬೇಕು. ಬ್ಯಾಡ್ಮಿಂಟನ್ ಆಡಬೇಕೆಂದರೆ ಮತ್ತೊಬ್ಬ ಆಟಗಾರ ಬೇಕು. ಇನ್ನು ಕ್ರಿಕೆಟ್ ಆಡಬೇಕೆಂದರೆ 11 ಆಟಗಾರರು ಬೇಕು. ಫುಟ್ಬಾಲ್, ಕಬಡ್ಡಿ, ಕೊಕ್ಕೊ ಹೀಗೆ ಯಾವ ಆಟ ಆಡಬೇಕೆಂದರೂ ಇದೇ ಪರಿಸ್ಥಿತಿ.

ನಗರಗಳಲ್ಲಿ ಬಹುತೇಕರ ಜೀವನ ಬಿಡುವಿಲ್ಲದಂತೆ ಇರುತ್ತದೆ. ಹೀಗಾಗಿ ಕರೆದ ಕೂಡಲೇ ಆಟಕ್ಕೆ ಸಿದ್ಧ ಎನ್ನುವವರು ಸಿಗುವುದು ಅಪರೂಪ. ನಗರವಾಸಿಗಳ ಈ ಕೊರತೆ ನೀಗಿಸುವುದಕ್ಕಾಗಿ ಅಂತರ್ಜಾಲವನ್ನೇ ಆಟದ ಸ್ಥಳವನ್ನಾಗಿಸುವ ಹಲವು ಜಾಲತಾಣಗಳು ಕಾರ್ಯನಿರತವಾಗಿವೆ. ಇವನ್ನೇ ಕಮ್ಯುನಿಟಿ ಸ್ಪೋರ್ಟ್ ಆ್ಯಪ್ಸ್ / ವೆಬ್ಸೈಟ್ಸ್ ಎನ್ನುತ್ತಾರೆ.

ಇಂತಹ ತಾಣಗಳಿಂದಾಗಿ ಹಲವರು ಆನ್ಲೈನ್ನಲ್ಲೇ, ಚದುರಂಗ, ಕ್ಯಾಂಡಿಕ್ರಷ್, ಪಜಲ್ ಗೇಮ್ಸ್ನಂತಹ ಒಳಾಂಗಣ ಕ್ರೀಡೆಗಳನ್ನು ದೂರದ ಊರುಗಳಲ್ಲಿರುವ ಕ್ರೀಡಾ ಆಸಕ್ತರೊಂದಿಗೆ ಸೇರಿ ಆಡುತ್ತಿದ್ದಾರೆ. ಇಂತಹ ಸೌಲಭ್ಯವನ್ನೇ ಹೊರಾಂಗಣ ಕ್ರೀಡೆಗಳಿಗೂ ಬಳಸಿಕೊಳ್ಳುವ ಸಾಧ್ಯತೆಯನ್ನು ಮನಗಂಡು ಈ ತಾಣಗಳನ್ನು ಸೃಷ್ಟಿಸಲಾಗಿದೆ.

ಆಟವಾಡಲು ಇಷ್ಟಪಡುತ್ತಿರುವ ಇಬ್ಬರು ಸಮಾನ ಮನಸ್ಕರನ್ನು ಒಂದೆಡೆ ಸೇರಿಸಿ, ಆಡುವುದಕ್ಕೆ ವೇದಿಕೆ ಕಲ್ಪಿಸುವುದೇ ಇವುಗಳ ಕೆಲಸ. ಬಹುತೇಕ ನಗರವಾಸಿಗಳು ಫಿಟ್ನೆಸ್ಗೆ ಹೆಚ್ಚು ಒತ್ತು ನೀಡುವುದರ ಜೊತೆಗೆ ತಂತ್ರಜ್ಞಾನ ಬಳಕೆಯಲ್ಲೂ ಮುಂದಿದ್ದಾರೆ. ಇದು ಸ್ಪೋರ್ಟ್ಸ್ ಆ್ಯಪ್ಸ್ ಬಗೆಗಿನ ಕಾಳಜಿಯನ್ನು ಹೆಚ್ಚಿಸುತ್ತಿವೆ.

ಸ್ಪೈಯಿನ್ (Spyn): ಈ ತಂತ್ರಾಂಶದ ಮೂಲಕ ಆಟದ ಬಗ್ಗೆ ಇರುವ ಅನುಮಾನಗಳನ್ನು ಪರಿಹರಿಸಿಕೊಳ್ಳಬಹುದು. ನಿಮ್ಮ ಪ್ರತಿ ಪ್ರಶ್ನೆಗೂ ತಜ್ಞರಿಂದ ಉತ್ತರ ಪಡೆಯಬಹುದು. ಜತೆಗೆ ಆಟವಾಡುವುದಕ್ಕೆ ಆಟಗಾರರು ಬೇಕಿದ್ದರೆ, ಆಟದ ಮೈದಾನ ಬೇಕೆಂದರೆ, ಕ್ರೀಡಾ ಕ್ಲಬ್ಗಳ ಮಾಹಿತಿ ಬೇಕಿದ್ದರೆ ಇದರ ಮೂಲಕ ಪಡೆಯಬಹುದು. ಪ್ರಸ್ತುತ ಈ ತಂತ್ರಾಂಶ ಮುಂಬೈ ಮತ್ತು ಬೆಂಗಳೂರಿನಲ್ಲಿ ಮಾತ್ರ ಕೆಲಸ ಮಾಡುತ್ತಿದೆ.

ಗ್ರೌಂಡ್ವಾಲಾ: ಗಲ್ಲಿಗಳಲ್ಲೇ ಎಷ್ಟು ದಿನ ಕ್ರಿಕೆಟ್ ಆಡುತ್ತೀರಿ? ದೊಡ್ಡ ಮೈದಾನಗಳಲ್ಲೂ ಆಡಿ, ಖುಷಿಪಡಿ ಎನ್ನುತ್ತಿದೆ ಗ್ರೌಂಡ್ವಾಲಾ ಕಿರು ತಂತ್ರಾಂಶ. ಫ್ಲಿಪ್ಕಾರ್ಟ್, ಅಮೆಜಾನ್ಗಳಲ್ಲಿ ಕಾಣಿಸುವ ವಸ್ತು, ಉತ್ಪನ್ನಗಳಂತೆ ಈ ತಂತ್ರಾಂಶದಲ್ಲಿ ಆಟದ ಮೈದಾನಗಳು ಕಾಣಿಸುತ್ತವೆ. ಕ್ರಿಕೆಟ್ ಆಡುವುದಕ್ಕಾಗಿ ಸೂಕ್ತ ಮೈದಾನ ಬೇಕೆಂದರೆ ಇದರ ಮೂಲಕ ಬುಕ್ ಮಾಡಬಹುದು. ಒಂದು ಬಾರಿ ಆಡುವುದಕ್ಕೆ ₹2 ಸಾವಿರದಿಂದ ₹3 ಸಾವಿರದವರೆಗೆ ಪಾವತಿಸಬೇಕಾಗುತ್ತದೆ.

ಬುಕ್ ಮಾಡುವ ಮುನ್ನ, ರೇಟಿಂಗ್ ಕಾಮೆಂಟ್ಸ್ ನೋಡಬಹುದು. ಮೈದಾನಕ್ಕೆ ಪೆವಿಲಿಯನ್. ಫ್ಲಡ್ಲೈಟ್ಗಳು, ವಾಷ್ರೂಮ್, ಡ್ರೆಸ್ ರೂಮ್ ಇವೆಯೇ ಎಂಬುದನ್ನೂ ಪರಿಶೀಲಿಸಬಹುದು. ಇದರ ಮೂಲಕ ಸುಮಾರು 2 ಸಾವಿರ ಆಟದ ಮೈದಾನಗಳು ಬುಕ್ ಮಾಡಲು ಅವಕಾಶವಿದೆ. ಬೆಂಗಳೂರಿನಲ್ಲೂ ಈ ಆ್ಯಪ್ ಸೇವೆ ಒದಗಿಸುತ್ತಿದೆ.

ಅಥ್ಲಿಟೊ (Athletto): ಮನೆಗೆ ಸಮೀಪದಲ್ಲಿರುವ ಈಜುಕೊಳ, ಟೆನಿಸ್ ಕೋರ್ಟ್, ಕ್ರೀಡಾಕೂಟಗಳ ಮಾಹಿತಿ ಪಡೆಯುವುದರ ಜತೆಗೆ ನಿಮ್ಮ ಜೊತೆ ಆಡುವುದಕ್ಕಾಗಿ ಸೂಕ್ತ ಆಟಗಾರರೂ ಇದರಲ್ಲಿ ಸಿಗುತ್ತಾರೆ. ಆಟಗಾರರ ಅನುಭವ, ಗ್ರೇಡಿಂಗ್ನಂತಹ ಸೌಲಭ್ಯಗಳೂ ಇದರಲ್ಲಿವೆ. ಬೆಂಗಳೂರು ಸೇರಿದಂತೆ ಸುಮಾರು ಎಂಟು ನಗರಗಳಲ್ಲಿ ಈ ಆ್ಯಪ್ ಸೇವೆ ಒದಗಿಸುತ್ತಿದೆ.

ಗೊ ಸ್ಪೋರ್ಟೊ(Go sporto): ನಿಮಗೆ ಸವಾಲು ಹಾಕುತ್ತಿವೆ 576 ತಂಡಗಳು, ನಿಮ್ಮೊಂದಿಗೆ ಆಟವಾಡಲು ತುದಿಗಾಲಲ್ಲಿ ನಿಂತಿದ್ದಾರೆ 8,300 ಆಟಗಾರರು, ಹೊಸ ಆಟಗಾರರನ್ನು ಆಹ್ವಾನಿಸುತ್ತಿವೆ 26 ತಂಡಗಳು. ಈ ಕಿರು ತಂತ್ರಾಂಶವನ್ನು ತೆರೆಯುತ್ತಿದ್ದಂತೆಯೇ ಕಾಣಿಸುವ ಆಕರ್ಷಕ ಬರಹಗಳಿವು. ಕ್ರಿಕೆಟ್, ವಾಲಿಬಾಲ್, ಕಬಡ್ಡಿ, ಹಾಕಿ ಸೇರಿದಂತೆ ಸುಮಾರು 25 ಆಟಗಳನ್ನು ಈ ಆ್ಯಪ್ ಮೂಲಕ ಆಡಬಹುದು. ಪ್ರಸ್ತುತ ದೆಹಲಿಯಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿರುವ ಈ ತಾಣ ಮುಂದಿನ ದಿನಗಳಲ್ಲಿ ಇತರ ನಗರಗಳಿಗೂ ವಿಸ್ತರಿಸುವ ಗುರಿ ಇಟ್ಟುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.