ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಡೀ ಹಳ್ಳಿಗೇ ಸ್ಯಾನಿಟೈಸೇಷನ್‌ ಮಾಡಿದ ದತ್ತು

ಕೊರೊನಾ ವೈರಾಣು ಹರಡದಂತೆ ತಡೆಯಲು ವಿಶಿಷ್ಟ ಕಾರ್ಯ
Last Updated 14 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಮುಂಬೈ:ಕೋವಿಡ್‌–19 ಪಿಡುಗಿನ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮರ ಸಾರಿವೆ. ಇದಕ್ಕೆ ಕ್ರೀಡಾಪಟುಗಳೂ ಕೈಜೋಡಿಸಿದ್ದಾರೆ. ಹಲವರು ತಮ್ಮಿಂದ ಸಾಧ್ಯವಾದಷ್ಟು ದೇಣಿಗೆ ಕೊಟ್ಟಿದ್ದಾರೆ. ಇನ್ನು ಕೆಲವರು, ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ನಿರಾಶ್ರಿತರು ಮತ್ತು ನಿರುದ್ಯೋಗಿಗಳಿಗೆ ಆಹಾರ ಮತ್ತು ದಿನಸಿ ಸಾಮಾಗ್ರಿಗಳನ್ನು ಒದಗಿಸುತ್ತಿದ್ದಾರೆ.

ರೋವಿಂಗ್‌ ಪಟು ದತ್ತು ಬಾಬನ್‌ ಭೋಕನಾಳ್‌ ಇವುಗಳಿಗಿಂತಲೂ ಭಿನ್ನವಾದ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಲಾಕ್‌ಡೌನ್‌ನಿಂದಾಗಿ ತವರೂರು ತಾಲೆಗಾಂವ್‌ ರೊಹಿಗೆ (ನಾಸಿಕ್‌ ಸಮೀಪ) ಹೋಗಿರುವ ಅವರು ಕೊರೊನಾ ವೈರಾಣು ಹರಡುವುದನ್ನು ತಡೆಗಟ್ಟುವ ಸಲುವಾಗಿ ಇಡೀ ಗ್ರಾಮವನ್ನು ಸ್ಯಾನಿಟೈಸೇಷನ್‌ ಮಾಡಿದ್ದಾರೆ. ಈ ಕಾರ್ಯಕ್ಕೆ ಅವರ ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ನೆರವಾಗಿದ್ದಾರೆ.

‘ನಮ್ಮದು 12,000 ಜನಸಂಖ್ಯೆ ಇರುವ ಊರು. ಒಬ್ಬರಿಗೆ ಕೊರೊನಾ ಸೋಂಕು ತಗುಲಿದರೆ ಅದರಿಂದ ಇಡೀ ಸಮುದಾಯವೇ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ. ಹೀಗಾಗಿ ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಸಹಾಯದಿಂದ ಇಡೀ ಗ್ರಾಮವನ್ನೇ ಸ್ಯಾನಿಟೈಸೇಷನ್‌ ಮಾಡಿದ್ದೇನೆ. ಈ ಕಾರ್ಯಕ್ಕೆ ನಾಲ್ಕು ಗಂಟೆ ಸಮಯ ತಗುಲಿದೆ’ ಎಂದು 29 ವರ್ಷ ವಯಸ್ಸಿನ ದತ್ತು ಹೇಳಿದ್ದಾರೆ.

‘ನಮ್ಮ ಗ್ರಾಮ ಕೊರೊನಾ ವೈರಾಣು ಮುಕ್ತವಾಗಿದೆ. ಹೀಗಿದ್ದರೂ ಮುನ್ನೆಚ್ಚರಿಕೆಯ ದೃಷ್ಟಿಯಿಂದ ಬೆಳೆಗಳಿಗೆ ಔಷಧಿ ಸಿಂಪಡಿಸುವ ಯಂತ್ರವನ್ನು ಟ್ಯಾಕ್ಟರ್‌ಗೆ ಅಳವಡಿಸಿಕೊಂಡು ಸಮುದಾಯ ಕೇಂದ್ರ, ಪಶು ವೈದ್ಯಕೀಯ ಕೇಂದ್ರ, ಗ್ರಾಮ ಪಂಚಾಯತ್‌, ಮಾರುಕಟ್ಟೆ, ಮೆಡಿಕಲ್‌ ಶಾಪ್‌, ದೇವಸ್ಥಾನ ಸೇರಿದಂತೆ ಇತರೆ ಪ್ರದೇಶಗಳಲ್ಲಿ ಸ್ಯಾನಿಟೈಜರ್‌ ಸಿಂಪಡಣೆ ಮಾಡಿದ್ದೇವೆ. ವಾರದಲ್ಲಿ ಎರಡು ದಿನ ಈ ಕೆಲಸವನ್ನು ತಪ್ಪದೇ ಮಾಡಬೇಕೆಂದು ನಿರ್ಧರಿಸಿದ್ದೇನೆ’ ಎಂದೂ ಅವರು ನುಡಿದಿದ್ದಾರೆ.

‘ಮನೆಯಲ್ಲೇ ಅಗತ್ಯ ವ್ಯಾಯಾಮಗಳನ್ನು ಮಾಡಿ ಫಿಟ್‌ನೆಸ್‌ ಕಾಪಾಡಿಕೊಳ್ಳುತ್ತಿದ್ದೇನೆ. ಕೊರೊನಾ ಬಿಕ್ಕಟ್ಟು ಬಗೆಹರಿದ ಬಳಿಕ ಟೂರ್ನಿಗಳು ಆಯೋಜನೆಯಾಗುವುದು ಖಚಿತ. ಅದಕ್ಕಾಗಿ ಸಿದ್ಧತೆ ನಡೆಸುತ್ತಿದ್ದೇನೆ’ ಎಂದಿದ್ದಾರೆ.

ದತ್ತು ಅವರು 2018ರ ಏಷ್ಯನ್‌ ಕ್ರೀಡಾಕೂಟದ ಕ್ವಾಡ್ರಪಲ್‌ ಸ್ಕಲ್ಸ್‌ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

2015ರಲ್ಲಿ ಬೀಜಿಂಗ್‌ನಲ್ಲಿ ಆಯೋಜನೆಯಾಗಿದ್ದಏಷ್ಯನ್‌ ಚಾಂಪಿಯನ್‌ಷಿಪ್‌ನ ಸಿಂಗಲ್‌ ಸ್ಕಲ್ಸ್‌ ವಿಭಾಗದಲ್ಲಿ ಬೆಳ್ಳಿಯ ಪದಕವನ್ನೂ ಜಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT