ನವದೆಹಲಿ: ವಿಶ್ವ ಚಾಂಪಿಯನ್ಷಿಪ್ನ ಪದಕ ವಿಜೇತರಾದ ದೀಪಕ್ ಪುನಿಯಾ, ಅಂತಿಮ ಪಂಘಲ್ ಸೇರಿದಂತೆ 30 ಸ್ತಿಪಟುಗಳು ಇದೇ 25ರಿಂದ 30ರವರೆಗೆ ನಡೆಯಲಿರುವ ಏಷ್ಯನ್ ಕುಸ್ತಿ ಚಾಂಪಿಯನ್ಷಿಪ್ನಲ್ಲಿ ಸ್ಪರ್ಧಿಸುವ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಇಲ್ಲಿನ ಐಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ಭಾರತ ಕುಸ್ತಿ ಫೆಡರೇಶನ್ ನಡೆಸಿದ ಆಯ್ಕೆ ಟ್ರಯಲ್ಸ್ ವೇಳೆ ಪುರುಷರ ಫ್ರೀಸ್ಟೈಲ್ಗೆ ಮತ್ತು ಗ್ರಿಕೊ ರೋಮನ್ ವಿಭಾಗಗಳಿಗೆ ತಲಾ ಹತ್ತು ಕುಸ್ತಿಪಟುಗಳನ್ನು ಆಯ್ಕೆ ಮಾಡಲಾಯಿತು.

2019ರ ವಿಶ್ವ ಚಾಂಪಿಯನ್ಷಿಪ್ನಲ್ಲಿ ದೀಪಕ್ ಪುನಿಯಾ ಬೆಳ್ಳಿ ಮತ್ತು 2022ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದರು. ನಂತರ 86 ಕೆ.ಜಿ.ಯಿಂದ 92 ಕೆ.ಜಿಗೆ ತಮ್ಮ ವಿಭಾಗವನ್ನು ಬದಲಿಸಿದ್ದರು. ಮತ್ತೋರ್ವ ಕುಸ್ತಿಪಟು ವಿಶಾಲ್ ಕಾಲಿರಮನ್ 65 ಕೆ.ಜಿ.ಯಿಂದ 70 ಕೆಜಿಗೆ, ಪಂಘಲ್ 53 ಕೆ.ಜಿ ಮತ್ತು ರಿತಿಕಾ 86 ಕೆ.ಜಿ ನಿರೀಕ್ಷೆಯಂತೆ ಟ್ರಯಲ್ಸ್ ಗೆದ್ದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.