ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

8 ವರ್ಷಗಳ ಬಳಿಕ ರಾಷ್ಟ್ರೀಯ ಕೂಟಕ್ಕೆ ದೀಪಾ ಕರ್ಮಾಕರ್‌

Published 1 ಜನವರಿ 2024, 22:34 IST
Last Updated 1 ಜನವರಿ 2024, 22:34 IST
ಅಕ್ಷರ ಗಾತ್ರ

ಭುವನೇಶ್ವರ: ಒಲಿಂಪಿಯನ್ ದೀಪಾ ಕರ್ಮಾಕರ್ ಅವರು ಎಂಟು ವರ್ಷಗಳ ದೀರ್ಘ ಕಾಲದ ನಂತರ ಸೀನಿಯರ್‌ ರಾಷ್ಟ್ರೀಯ ಜಿಮ್ನಾಸ್ಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲಿದ್ದಾರೆ. 3 ದಿನಗಳ ಈ ಚಾಂಪಿಯನ್‌ಷಿಪ್‌ ಮಂಗಳವಾರದಿಂದ ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ನಡೆಯಲಿದೆ.

ಮತ್ತೋರ್ವ ಒಲಿಂಪಿಯನ್‌ ಪ್ರಣತಿ ನಾಯಕ್, ರಾಷ್ಟ್ರೀಯ ಜಿಮ್ನಾಸ್ಟ್‌ಗಳಾದ ಯೋಗೆಶ್ವರ್ ಸಿಂಗ್‌, ರಾಕೇಶ್‌ ಪಾತ್ರ, ತಪನ್ ಮೊಹಾಂತಿ, ಸೈಫ್‌ ತಂಬೋಲಿ, ಗೌರವ್ ಕುಮಾರ್ ಮತ್ತಿತರರು ಈ ಕೂಟದಲ್ಲಿ ಭಾಗವಹಿಸುವರು.

‘ಜೂನಿಯರ್‌ ಅಥ್ಲೀಟುಗಳು, ಅನುಭವಿಗಳ ವಿರುದ್ಧ ಪೈಪೋಟಿ ನಡೆಸುವುದನ್ನು ನೋಡಲು ಇಲ್ಲಿಗೆ ಬಂದೆ’ ಎಂದು ದೀಪಾ ಅವರ ಕೋಚ್‌ ವಿಶ್ವೇಶ್ವರ ನಂದಿ ತಿಳಿಸಿದರು.

ದೇಶದಾದ್ಯಂತ 300 ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT