ಓರ್ಲಾಂಡೊ (ಪಿಟಿಐ): ಇಲ್ಲಿ ನಡೆಯುತ್ತಿರುವ ಜೂನಿಯರ್‌ಎನ್‌ಬಿಎ (ನ್ಯಾಷನಲ್ ಬ್ಯಾಸ್ಕೆಟ್‌ಬಾಲ್ ಅಸೊಸಿಯೇಷನ್) ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ತಂಡಗಳು ನಿರಾಸೆ ಅನುಭವಿಸಿವೆ.

ಬುಧವಾರ ಇಲ್ಲಿನ ವಾಲ್ಟ್ ಡಿಸ್ನಿ ಕ್ರೀಡಾ ಸಂಕೀರ್ಣದಲ್ಲಿ ನಡೆದ ಬಾಲಕರ ವಿಭಾಗದಮೊದಲ ಸುತ್ತಿನ ಪಂದ್ಯದಲ್ಲಿ ಭಾರತ ತಂಡವು 34–75ರಿಂದ ಕಂಬೈನ್ಡ್ ಯುರೋಪ್ ತಂಡಕ್ಕೆ ಮಣಿಯಿತು. ಎರಡನೇ ಸುತ್ತಿನ ಪಂದ್ಯದಲ್ಲಿ 43–80ರಿಂದ ಏಷ್ಯಾ ಪೆಸಿಫಿಕ್ ತಂಡದ ಎದುರು ಸೋತಿತು.

ಬಾಲಕಿಯರ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತ ತಂಡವು 11–57ರಿಂದ ಕಂಬೈನ್ಡ್ ಯುರೋಪ್ ತಂಡದ ಎದುರು ಪರಾಭವಗೊಂಡಿತು. ಎರಡನೇ ಪಂದ್ಯದಲ್ಲಿ 28–75ರಿಂದ ಏಷ್ಯಾ ಪೆಸಿಫಿಕ್ ತಂಡದ ಎದುರು ನಿರಾಸೆ ಅನುಭವಿಸಿತು.

ಈ ಸೋಲಿನಿಂದಾಗಿ ಭಾರತದ ಉಭಯ ತಂಡಗಳು ಟೂರ್ನಿಯಿಂದ ಹೊರಬಿದ್ದಿವೆ.

ಮೂರನೇ ಸುತ್ತಿನ ಪಂದ್ಯದಲ್ಲಿಭಾರತವನ್ನು ಪ್ರತಿನಿಧಿಸುತ್ತಿರುವ ದೆಹಲಿಯ ಬಾಲಕರ ಹಾಗೂ ಬೆಂಗಳೂರಿನ ಬಾಲಕಿಯರ ತಂಡಗಳು ಕಂಬೈನ್ಡ್ ದಕ್ಷಿಣ ಆಫ್ರಿಕಾ ತಂಡಗಳ ಎದುರು ಸೆಣಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.