ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೂರದರ್ಶನದಲ್ಲಿ ಟಿ 20 ವಿಶ್ವಕಪ್‌, ಪ್ಯಾರಿಸ್‌ ಒಲಿಂಪಿಕ್ಸ್‌ ನೇರಪ್ರಸಾರ

Published 3 ಜೂನ್ 2024, 15:57 IST
Last Updated 3 ಜೂನ್ 2024, 15:57 IST
ಅಕ್ಷರ ಗಾತ್ರ

ನವದೆಹಲಿ: ಡಿಡಿ ಸ್ಪೋರ್ಟ್ಸ್‌ ವಾಹಿನಿಯಲ್ಲಿ ಟಿ 20 ವಿಶ್ವಕಪ್‌, ಪ್ಯಾರಿಸ್‌ ಒಲಿಂಪಿಕ್ಸ್‌ ಮತ್ತು ವಿಂಬಲ್ಡನ್‌ ಪಂದ್ಯಗಳನ್ನು ನೇರಪ್ರಸಾರ ಮಾಡುವುದಾಗಿ ಪ್ರಸಾರ ಭಾರತಿ ಸೋಮವಾರ ಘೋಷಿಸಿದೆ.

ಈ ಕುರಿತು ಪ್ರಸಾರ ಭಾರತಿ ಸಿಇಒ ಗೌರವ್‌ ದ್ವಿವೇದಿ ಮಾಧ್ಯಮಗಳೊಂದಿಗಿನ ಮಾತುಕತೆಯ ವೇಳೆ ತಿಳಿಸಿದ್ದಾರೆ.

ಟಿ 20 ವಿಶ್ವಕಪ್‌ಗಾಗಿಯೇ ಪ್ರಸಾರ ಭಾರತಿ ‘ಜಜ್ಬಾ’(Jazba) ಎನ್ನುವ ವಿಶೇಷ ಗೀತೆಯನ್ನು ರಚಿಸಿದೆ.

ಜುಲೈ 26 ರಿಂದ ಆಗಸ್ಟ್‌ 11ರವರೆಗೆ ಮತ್ತು ಆಗಸ್ಟ್‌ 28ರಿಂದ ಸೆಪ್ಟೆಂಬರ್‌ 8ರವರೆಗೆ ನಡೆಯಲಿರುವ ಪ್ಯಾರಿಸ್‌ ಒಲಿಂ‍ಪಿಕ್ಸ್‌ನ ನೇರಪ್ರಸಾರ, ಮುಖ್ಯಾಂಶಗಳನ್ನು ಪ್ರಸಾರ ಮಾಡುವುದಾಗಿ ದೂರದರ್ಶನ ಹೇಳಿದೆ.

ಜತೆಗೆ ಜುಲೈ 6 ರಿಂದ 14ರವರೆಗೆ ಭಾರತ ಜಿಂಬಾಬೆಯಲ್ಲಿ ಆಡಲಿರುವ ಐದು ಅಂತರರಾಷ್ಟ್ರೀಯ ಟಿ 20 ಕ್ರಿಕೆಟ್‌ ಪಂದ್ಯ ಮತ್ತು ಟಿ 20 ವಿಶ್ವಕಪ್‌ ಪಂದ್ಯಗಳು ನೇರಪ್ರಸಾರಗೊಳ್ಳಲಿವೆ.

ಫ್ರೆಂಚ್‌ ಒಪನ್‌ ಮತ್ತು ವಿಂಬಲ್ಡನ್‌ನ ಫೈನಲ್‌ ಪಂದ್ಯಗಳೂ ಕೂಡ ದೂರದರ್ಶನದಲ್ಲಿ ಪ್ರಸಾರವಾಗಲಿವೆ. 

ಟಿ 20 ವಿಶ್ವಕಪ್‌ನ 55 ಪಂದ್ಯಗಳು ನಿನ್ನೆ (ಜೂ.2) ಆರಂಭವಾಗಿದ್ದು, 28 ದಿನ ನಡೆಯಲಿವೆ. ವೆಸ್ಟ್ ಇಂಡೀಸ್‌ ಮತ್ತು ಅಮೆರಿಕಾದಲ್ಲಿ ಟಿ 20 ವಿಶ್ವಕಪ್‌ ಪಂದ್ಯ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT