ಬರ್ಮಿಂಗ್ಹ್ಯಾಂ: ಆರನೇ ಶ್ರೇಯಾಂಕದ ಆಟಗಾರ್ತಿ ಪಿ.ವಿ.ಸಿಂಧು, ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಮಹಿಳಾ ಸಿಂಗಲ್ಸ್ ಕ್ವಾರ್ಟರ್ಫೈನಲ್ನಲ್ಲಿ ಶುಕ್ರವಾರ ಜಪಾನ್ನ ನೊಜೊಮಿ ಒಕುಹಾರ ಎದುರು ಸೋಲನುಭವಿಸಿದರು. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿತು

ಶುಕ್ರವಾರ ನಡೆದ ಪಂದ್ಯದಲ್ಲಿ ಹಿನ್ನಡೆಯಿಂದ ಚೇತರಿಸಿದ ನಾಲ್ಕನೇ ಶ್ರೇಯಾಂಕದ ಒಕುಹಾರ 68 ನಿಮಿಷಗಳ ಸೆಣಸಾಟದಲ್ಲಿ 12–21, 21–15, 21–13 ರಿಂದ ಪುಸರ್ಲ ವಿ.ಸಿಂಧು ಅವರನ್ನು ಸೋಲಿಸಿದರು.

ಭಾರತದ ಮಹಿಳಾ ಡಬಲ್ಸ್ ಜೋಡಿ ಅಶ್ವಿನಿ ಪೊನ್ನಪ್ಪ–ಎನ್. ಸಿಕ್ಕಿರೆಡ್ಡಿ ಗುರುವಾರ ರಾತ್ರಿ ನಡೆದ ಎರಡನೇ ಸುತ್ತಿನ ಹಣಾಹಣಿಯಲ್ಲಿ ವಿಶ್ವದ 29ನೇ ರ್ಯಾಂಕಿನ ಜೋಡಿ 13–21, 14–21ರಿಂದ ಜಪಾನ್ನ ಮಿಸಾಕಿ ಮತ್ಸುಟೊಮೊ– ಆಯಾಕ್ ತಕಹಶಿ ಎದುರು ಸೋಲನುಭವಿಸಿತು.

ಸಚಿವ ರಿಜಿಜುಗೆ ಕರೆ: ಗುರುವಾರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರಿಗೆ ದೂರವಾಣಿ ಕರೆ ಮಾಡಿದ್ದ ಸಿಂಧು, ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಟೂರ್ನಿಯಲ್ಲಿ ಮುಂದುವರಿಯಬೇಕೇ ಎಂದು ಕೇಳಿದ್ದರು. ಇದಕ್ಕೆ ಉತ್ತರಿಸಿದ ಸಚಿವರು ಅಲ್ಲಿನ ಸುರಕ್ಷತಾ ನಿಯಮ ಪಾಲಿಸಿ ಮುಂದುವರಿಯುವಂತೆ ಸಲಹೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.