ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂಡೀಗಢ ಓಪನ್ ಗಾಲ್ಫ್: ತಂದೆ-ಮಗ ಸ್ಪರ್ಧೆ

Published 1 ಏಪ್ರಿಲ್ 2024, 16:34 IST
Last Updated 1 ಏಪ್ರಿಲ್ 2024, 16:34 IST
ಅಕ್ಷರ ಗಾತ್ರ

ಚಂಡೀಗಢ: ಖ್ಯಾತ ಗಾಲ್ಫ್ ಆಟಗಾರ ಜೀವ್ ಮಿಲ್ಖಾ ಸಿಂಗ್ ಮತ್ತು ಅವರ 14 ವರ್ಷದ ಪುತ್ರ ಹರ್ಜೈ ಮಿಲ್ಖಾ ಸಿಂಗ್ ಅವರು ಬುಧವಾರ ನಡೆಯಲಿರುವ ಉದ್ಘಾಟನಾ ಚಂಡೀಗಢ ಓಪನ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ಚಂಡೀಗಢ ಗಾಲ್ಫ್ ಕ್ಲಬ್ ಅಗ್ರ ಗಾಲ್ಫ್ ಆಟಗಾರರಿಗೆ ಸಾಕ್ಷಿಯಾಗಲಿದೆ.

ವೃತ್ತಿಪರ ಗಾಲ್ಫ್ ಟೂರ್ ಆಫ್ ಇಂಡಿಯಾ (ಪಿಜಿಟಿಐ) ಏಪ್ರಿಲ್ 3 ರಿಂದ 6 ರವರೆಗೆ ನಡೆಯಲಿರುವ ₹1 ಕೋಟಿ  ಬಹುಮಾನದ ಮೊತ್ತದ ಪಂದ್ಯಾವಳಿಯನ್ನು ಪ್ರಾರಂಭಿಸುವುದಾಗಿ ಸೋಮವಾರ ಪ್ರಕಟಿಸಿದೆ.

ಕಳೆದ ವರ್ಷ 13 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಯುಎಸ್ ಕಿಡ್ಸ್ ಗಾಲ್ಫ್ ಯುರೋಪಿಯನ್ ಚಾಂಪಿಯನ್‌ಷಿಪ್ ಗೆದ್ದ ಹರ್ಜೈ, ಅಯಾನ್ ಗುಪ್ತಾ ಮತ್ತು ರಾಮ್ ಸಿಂಗ್ ಮಾನ್. ಈ ಮೂರು ಹವ್ಯಾಸಿಗಾರರಿಗೆ ವೃತ್ತಿಪರರೊಂದಿಗೆ ಸ್ಪರ್ಧಿಸುವ ಅವಕಾಶ ದೊರೆತಿದೆ.  

ಭಾನುವಾರ ಹೀರೋ ಇಂಡಿಯನ್ ಓಪನ್‌ನಲ್ಲಿ 2ನೇ ಸ್ಥಾನ ಪಡೆದ ವೀರ್ ಅಹ್ಲಾವತ್, ಗಗನ್‌ಜೀತ್ ಭುಲ್ಲರ್, ಎಸ್ಎಸ್‌ಪಿ ಚೌರಾಸಿಯಾ, ರಾಹಿಲ್ ಗಂಗ್ಜಿ, ರಶೀದ್ ಖಾನ್, ಯುವರಾಜ್ ಸಿಂಗ್ ಸಂಧು, ಕೆ. ಚಿಕ್ಕರಂಗಪ್ಪ, ಕರಣಿದೀಪ್ ಕೊಚ್ಚರ್, ಓಂ ಪ್ರಕಾಶ್ ಚೌಹಾಣ್ ಮತ್ತು ಮನು ಗಂಡಾಸ್ ಸೇರಿದಂತೆ ಹಲವಾರು ತಾರೆಯರು ಕಣಕ್ಕಿಳಿಯಲಿದ್ದಾರೆ. 

ಅಂತರರಾಷ್ಟ್ರೀಯ ಗಾಲ್ಫ್ ಆಟಗಾರರಾದ ಶ್ರೀಲಂಕಾದ ಎನ್.ತಂಗರಾಜ ಮತ್ತು ಕೆ.ಪ್ರಭಾಕರನ್, ಬಾಂಗ್ಲಾದೇಶದ ಜಮಾಲ್ ಹುಸೇನ್ ಮತ್ತು ಬಾದಲ್ ಹುಸೇನ್, ಅಂಡೋರಾದ ಕೆವಿನ್ ಎಸ್ಟೆವ್ ರಿಗೈಲ್ ಮತ್ತು ಅಮೆರಿಕದ ವರುಣ್ ಚೋಪ್ರಾ ಕೂಡ ಸ್ಪರ್ಧಿಸಲಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT