ನವದೆಹಲಿ: ಹೊರಜಗತ್ತಿನಿಂದ ದೂರವಿದ್ದು ‘ಪ್ರತ್ಯೇಕವಾಸ’ದಲ್ಲಿದ್ದರೂ ಖ್ಯಾತ ಬಾಕ್ಸರ್ ಮೇರಿ ಕೋಮ್ ಅವರಿಗೆ ಇದು ಬೇಸರ ತರಿಸಿಲ್ಲ. ಈ ವಾಸದಲ್ಲಿ ಅವರು ‘ಒಂದಷ್ಟು ಸ್ವಾತಂತ್ರ್ಯ, ನಿರಾಳತೆ’ ಕಂಡುಕೊಂಡಿದ್ದಾರಂತೆ.

ಈ ತಿಂಗಳು ಜೋರ್ಡಾನ್‌ನಲ್ಲಿ ನಡೆದ ಏಷ್ಯನ್ ಒಲಿಂಪಿಕ್ಸ್ ಅರ್ಹತಾ ಟೂರ್ನಿಯಲ್ಲಿ ಪಾಲ್ಗೊಂಡು ಭಾರತಕ್ಕೆ ಆಗಮಿಸಿದ ಬಳಿಕ ಅವರು ಕೊರೊನಾ ಸೋಂಕಿನ ಮುನ್ನೆಚ್ಚರಿಕಾ ಕ್ರಮವಾಗಿ ದೆಹಲಿಯಲ್ಲಿರುವ ತಮ್ಮ ನಿವಾಸದಲ್ಲಿ ‘ಸ್ವಯಂ ಪ್ರತ್ಯೇಕವಾಸ’ದಲ್ಲಿದ್ದಾರೆ.

ಇಟಲಿಯಲ್ಲಿ ತರಬೇತಿ ಪಡೆದಿದ್ದ ಭಾರತದ ಬಾಕ್ಸರ್‌ಗಳ ತಂಡವು, ಜೋರ್ಡಾನ್ ಪ್ರವೇಶಿಸುವ ಮುನ್ನ ಕೊರೊನಾ ಸೋಂಕು ಪರೀಕ್ಷೆಗೆ ಒಳಗಾಗಿತ್ತು.ಯಾರಲ್ಲಿಯೂ ಸೋಂಕು ಪತ್ತೆಯಾಗಿಲ್ಲ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಪ್ರಮಾಣ ಪತ್ರ ನೀಡಿದೆ.

‘ಒಂದು ತಿಂಗಳು ಮಕ್ಕಳಿಂದ ದೂರವಿದ್ದೆ. ಸದ್ಯ ಅವರೊಂದಿಗೆ ಕಾಲ ಕಳೆಯುತ್ತ, ಫಿಟ್‌ನೆಸ್ ಕಡೆ ಗಮನ ನೀಡುತ್ತ ನಿರಾಳವಾಗಿದ್ದೇನೆ’ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮೇರಿ ಹೇಳಿದ್ದಾರೆ.

‘ಭಯಪಡಬೇಡಿ, ಸಾಧ್ಯವಾದಷ್ಟು ಮನೆಯಲ್ಲೇ ಇರಲು ಪ್ರಯತ್ನಿಸಿ, ಕುಟುಂಬದೊಂದಿಗೆ ಕಾಲ ಕಳೆಯಿರಿ’ ಎಂದು ನಾಗರಿಕರಲ್ಲಿ ಮನವಿ ಮಾಡಿರುವ ಅವರು, ನನಗೀಗ ಯಾವುದೇ ಒತ್ತಡಗಳಿಲ್ಲ ಎಂದಿದ್ದಾರೆ.

ಆರು ಬಾರಿ ವಿಶ್ವ ಚಾಂಪಿಯನ್ ಆಗಿರುವ ಮೇರಿ, ರಾಜ್ಯಸಭೆಯ ಹಾಲಿ ಸದಸ್ಯೆಯೂ ಹೌದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.