ಬೆಂಗಳೂರು: 18 ವರ್ಷದೊಳಗಿನ ಮಹಿಳಾ ಫಿಬಾ ಏಷ್ಯನ್ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ ಇದೇ 5 ರಿಂದ 11ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿದ್ದು, ಆತಿಥೇಯ ಭಾರತ ಒಳಗೊಂಡಂತೆ 16 ತಂಡಗಳು ಪೈಪೋಟಿ ನಡೆಸಲಿವೆ.

‘ಕಂಠೀರವ ಮತ್ತು ಕೋರಮಂಗಲ ಒಳಾಂಗಣ ಕ್ರೀಡಾಂಗಣಗಳಲ್ಲಿ ಟೂರ್ನಿಯ ಪಂದ್ಯಗಳು ನಡೆಯಲಿದ್ದು, ಎಲ್ಲ ಸಿದ್ಧತೆ ಪೂರ್ಣಗೊಂಡಿದೆ. 16 ದೇಶಗಳ 192 ಕ್ರೀಡಾಪಟುಗಳು, 96 ತಾಂತ್ರಿಕ ಅಧಿಕಾರಿಗಳು ಭಾಗವಹಿಸಲಿದ್ದಾರೆ’ ಎಂದು ಕ್ರೀಡಾ ಸಚಿವ ಕೆ.ಸಿ ನಾರಾಯಣಗೌಡ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

₹ 1.60 ಕೋಟಿ ಬಿಡುಗಡೆ: ಈ ಚಾಂಪಿಯನ್ಷಿಪ್ ಆಯೋಜಿಸಲು ರಾಜ್ಯ ಸರ್ಕಾರ ₹ 1.60 ಕೋಟಿ ಬಿಡುಗಡೆ ಮಾಡಿದೆ. ಕಂಠೀರವ ಕ್ರೀಡಾಂಗಣವನ್ನು ₹ 77 ಲಕ್ಷ ಹಾಗೂ ಕೋರಮಂಗಲ ಒಳಾಂಗಣ ಕ್ರೀಡಾಂಗಣವನ್ನು ₹ 8.96 ಕೋಟಿ ವೆಚ್ಚದಲ್ಲಿ ನವೀಕರಣ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

‘ಬೆಂಗಳೂರಿನ ಯಲಹಂಕ ಬಳಿ 100 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಕ್ರೀಡಾ ಸಂಕೀರ್ಣ ನಿರ್ಮಿಸುವ ಯೋಜನೆಯನ್ನು ರಾಜ್ಯ ಸರ್ಕಾರ ಹಾಕಿಕೊಂಡಿದೆ. 65 ಎಕರೆ ಭೂಸ್ವಾದೀನ ಪ್ರಕ್ರಿಯೆ ಪೂರ್ಣಗೊಂಡಿದೆ’ ಎಂದರು.

ಭಾರತ ಬ್ಯಾಸ್ಕೆಟ್ಬಾಲ್ ಫೆಡರೇ ಷನ್ ಅಧ್ಯಕ್ಷ ಕೆ.ಗೋವಿಂದರಾಜು, ಕ್ರೀಡಾ ಇಲಾಖೆಯ ಆಯುಕ್ತ ಡಾ.ಎಚ್.ಎನ್ ಗೋಪಾಲಕೃಷ್ಣ ಹಾಜರಿದ್ದರು.

ಸತ್ಯಾ ಕೃಷ್ಣಮೂರ್ತಿ ನೇತೃತ್ವ

ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಳ್ಳುವ ಭಾರತ ತಂಡವನ್ನು ತಮಿಳುನಾಡಿನ ಸತ್ಯಾ ಕೃಷ್ಣಮೂರ್ತಿ ಮುನ್ನಡೆಸಲಿದ್ದಾರೆ. ತಂಡದಲ್ಲಿ ಕರ್ನಾಟಕದ ನಿಹಾರಿಕಾ ರೆಡ್ಡಿ ಮತ್ತು ಮೇಖಲಾ ಗೌಡ ಇದ್ದಾರೆ. ಭಾರತ ತನ್ನ ಮೊದಲ ಪಂದ್ಯದಲ್ಲಿ ಸೆ.5 ರಂದು ಆಸ್ಟ್ರೇಲಿಯಾವನ್ನು ಎದುರಿಸಲಿದೆ.

ತಂಡ ಹೀಗಿದೆ: ಸತ್ಯಾ ಕೃಷ್ಣಮೂರ್ತಿ (ನಾಯಕಿ), ನಿಕಿತಾ ಅಮುದನ್, ದೀಪ್ತಿ ರಾಜಾ, ಹರಿಮಾ ಸುಂದರಿ, ನಿಹಾರಿಕಾ ರೆಡ್ಡಿ, ಮೇಖಲಾ ಗೌಡ, ಕರಣ್ವೀರ್ ಕೌರ್, ಮನ್ಮೀತ್ ಕೌರ್, ಯಶ್ನೀತ್ ಕೌರ್, ಕೀರ್ತಿ ದೇಪ್ಲಿ, ಐರಿನಾ ಎಲ್ಸಾ ಜಾನ್, ಭೂಮಿಕಾ ಸಿಂಗ್. ಅರ್ಣಿಕಾ ಪಾಟೀಲ್ (ಮುಖ್ಯ ಕೋಚ್), ಅನಿತಾ ಪೌಲ್ ದುರೈ (ಕೋಚ್), ಪಿ.ಎಸ್.ಜರಿನ್ (ಮ್ಯಾನೇಜರ್), ಅಹಾನಾ ಪುರಾಣಿಕ್ (ಫಿಸಿಯೊ)

ಸತ್ಯಾ ಕೃಷ್ಣಮೂರ್ತಿ (ನಾಯಕಿ), ನಿಕಿತಾ ಅಮುದನ್, ದೀಪ್ತಿ ರಾಜಾ, ಹರಿಮಾ ಸುಂದರಿ, ನಿಹಾರಿಕಾ ರೆಡ್ಡಿ, ಮೇಖಲಾ ಗೌಡ, ಕರಣ್ವೀರ್ ಕೌರ್, ಮನ್ಮೀತ್ ಕೌರ್, ಯಶ್ನೀತ್ ಕೌರ್, ಕೀರ್ತಿ ದೇಪ್ಲಿ, ಐರಿನಾ ಎಲ್ಸಾ ಜಾನ್, ಭೂಮಿಕಾ ಸಿಂಗ್. ಅರ್ಣಿಕಾ ಪಾಟೀಲ್ (ಮುಖ್ಯ ಕೋಚ್), ಅನಿತಾ ಪೌಲ್ ದುರೈ (ಕೋಚ್), ಪಿ.ಎಸ್.ಜರಿನ್ (ಮ್ಯಾನೇಜರ್), ಅಹಾನಾ ಪುರಾಣಿಕ್ (ಫಿಸಿಯೊ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.