ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖೇಲೊ ಇಂಡಿಯಾ: ದಾಖಲೆಗಳ ಮಳೆ; ಪ್ರಿಯಾಗೆ ಚಿನ್ನದ ಕಳೆ

ಖೇಲೊ ಇಂಡಿಯಾ ಕ್ರೀಡಾಕೂಟದ ಅಥ್ಲೆಟಿಕ್ಸ್‌: ಮಿಂಚಿದ ಪ್ರಿನ್ಸ್ ಮಿಶ್ರಾ, ಅಕ್ಷದೀಪ್
Last Updated 3 ಮೇ 2022, 10:19 IST
ಅಕ್ಷರ ಗಾತ್ರ

ಬೆಂಗಳೂರು: ಬೆಳಿಗ್ಗೆ ಉರಿಸೆಕೆ ಲೆಕ್ಕಿಸದೆ ವೇಗನಡಿಗೆಯಲ್ಲಿ ಅಕ್ಷದೀಪ್ ದಾಖಲೆ ನಿರ್ಮಿಸಿದರೆ ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ‘ಜಾರುವ ರನ್‌ವೇ’ಯ ಸವಾಲು ಮೀರಿದ ರಿಷಭ್ ನೆಹ್ರಾ, ಜಾವೆಲಿನ್‌ ಥ್ರೋದಲ್ಲಿ ಮಿಂಚಿದರು. ಐದು ದಾಖಲೆಗಳು ಮುರಿದು ಬಿದ್ದ ಕಂಠೀರವ ಕ್ರೀಡಾಂಗಣದಲ್ಲಿ ಆತಿಥೇಯ ಜೈನ್ ವಿವಿಯ ಪ್ರಿಯಾ ಮೋಹನ್ ಚಿನ್ನ ಗೆದ್ದು ಸಂಭ್ರಮಿಸಿದರು.

ಭಾನುವಾರ ನಡೆದಖೇಲೊ ಇಂಡಿಯಾ ವಿಶ್ವವಿದ್ಯಾಲಯಗಳ ಕ್ರೀಡಾಕೂಟದ ಅಥ್ಲೆಟಿಕ್ಸ್‌ನ ಜಾವೆಲಿನ್ ಥ್ರೋದಲ್ಲಿ ರಾಮ್‌ಮನೋಹರ್ ಲೋಹಿಯಾ ವಿವಿಯ ರಿಷಭ್ 76.64 ಮೀಟರ್ಸ್ ದೂರದ ಸಾಧನೆಯೊಂದಿಗೆ ಚಿನ್ನ ಗಳಿಸಿದರು. ಕಳೆದ ಬಾರಿ ಹರೀಶ್ ಮಾಡಿದ್ದ ದಾಖಲೆ ಮುರಿದರು.

ಪುರುಷರ 20 ಕಿಲೋಮೀಟರ್ ವೇಗ ನಡಿಗೆಯಲ್ಲಿ ಪಂಜಾಬಿ ವಿವಿಯ ಅಕ್ಷದೀಪ್ ಸಿಂಗ್ 1 ತಾಸು 26.44 ನಿಮಿಷಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗಳಿಸಿದರು. ಕೂಟ ದಾಖಲೆಯನ್ನೂ ಮಾಡಿದರು. ಕುಮಾಂವ್ ವಿವಿಯ ಅನ್ಶುಲ್ ದೊಂಡಿಯಾಲ್ ಬೆಳ್ಳಿ ಪದಕ ಗೆದ್ದುಕೊಂಡರು. ಮಂಗಳೂರು ವಿವಿಯ ಪರಮ್‍ಜೀತ್ ಬಿಷ್ಠ್ ಕಂಚಿನ ಪದಕ ಗಳಿಸಿದರು.

ಜಾವೆಲಿನ್ ಥ್ರೋದಲ್ಲಿ ರಿಷಭ್ ಕೊನೆಯ ಪ್ರಯತ್ನದಲ್ಲಿ ದಾಖಲೆ ಬರೆದರು. ಲವ್ಲಿ ಪ್ರೊಫೆಷನಲ್ ವಿವಿಯ ಕುನ್ವರ್ ಅಜಯ್‌ರಾಜ್ ರಾಣಾ ಅವರಿಂದ ರಿಷಭ್‌ ತೀವ್ರ ಪೈಪೋಟಿ ಎದುರಿಸಿದರು. ಮೊದಲ ಪ್ರಯತ್ನದಲ್ಲಿ ಇಬ್ಬರೂ 69 ಮೀಟರ್‌ಗಳನ್ನು ದಾಟಿದ್ದರು. ನಂತರವೂ ಜಿದ್ದಾಜಿದ್ದಿಯ ಹಣಾಹಣಿ ಕಂಡುಬಂತು. ರಿಷಭ್ 2 ಮತ್ತು 4ನೇ ಪ್ರಯತ್ನದಲ್ಲಿ ವೈಫಲ್ಯ ಕಂಡರು. ಆದರೆ ಕೊನೆಯ ಯತ್ನದಲ್ಲಿ ಅಮೋಘ ಸಾಧನೆ ಮಾಡಿದರು.

400 ಮೀಟರ್ಸ್ ಓಟದಲ್ಲಿ ಅಖಿಲ ಭಾರತ ವಿವಿ ಕ್ರೀಡಾಕೂಟ (52.58 ಸೆ) ಮತ್ತು ಖೇಲೊ ಇಂಡಿಯಾ ಕ್ರೀಡಾಕೂಟದ (53.88) ದಾಖಲೆ ಹೊಂದಿರುವ ಪ್ರಿಯಾ ಮೋಹನ್ ಇಲ್ಲಿ54.43 ಸೆಕೆಂಡುಗಳೊಂದಿಗೆ ಚಿನ್ನ ಗೆದ್ದರು. ಮಂಗಳೂರು ವಿವಿಯ ಲಿಖಿತಾ (55.45 ಸೆ) ಕಂಚು ಗಳಿಸಿದರು. ಪುರುಷರ 400 ಮೀಟರ್ಸ್‌ನಲ್ಲಿ ಬೆಳ್ಳಿ ಮತ್ತು ಕಂಚು ಮಂಗಳೂರು ವಿವಿ ಪಾಲಾಯಿತು.

ಫಲಿತಾಂಶಗಳು: ಅಥ್ಲೆಟಿಕ್ಸ್‌
ಪುರುಷರ 400 ಮೀ ಓಟ:
ನಿತಿನ್ ಕುಮಾರ್ (ಚೌಧರಿ ಚರಣ್)–1. ಕಾಲ: 47.63 ಸೆ, ನಿಹಾಲ್ ಡಬ್ಲ್ಯು (ಮಂಗಳೂರು)–2, ಮಹಾಂತೇಶ್‌ ಎಚ್‌ (ಮಂಗಳೂರು)–3.

110 ಮೀ ಹರ್ಡಲ್ಸ್‌: ವಿಕಾಸ್ ಖೋಡೆ (ಶಿವಾಜಿ)–1. ಕಾಲ:14.40 ಸೆ (ಕೂಟ ದಾಖಲೆ; ಹಳೆಯದು: 14.40, ರೊನಾಲ್ಡ್ ಬಾಬು), ಯಶ್ವಂತ್ ಕುಮಾರ್ (ನಾಗಾರ್ಜುನ)–2, ಕೃಷಿಕ್ (ವಿಟಿಯು)–3.

4x100 ಮೀ ರಿಲೆ; ಮಂಗಳೂರು ವಿವಿ (ಶಿಜನ್‌, ಅಭಿನ್ ದೇವಾಡಿಗ, ತೀರ್ಥೇಶ್ ಶೆಟ್ಟಿ, ವಿಘ್ನೇಶ್‌)–1. ಕಾಲ: 40.76 ಸೆ (ಕೂಟ ದಾಖಲೆ; ಹಳೆಯ: 41.39, ಎಂ.ಜಿ ವಿವಿ), ಭಾರತಿಯಾರ್‌ ವಿವಿ–2, ಮದ್ರಾಸ್ ವಿವಿ–3.‌

20 ಕಿ ಮೀ ವೇಗ ನಡಿಗೆ: ಅಕ್ಷದೀಪ್ ಸಿಂಗ್ (ಪಂಜಾಬಿ)–1. ಕಾಲ: 1 ತಾಸು 26.44 ಸೆ (ಕೂಟ ದಾಖಲೆ; ಹಳೆಯದು: 1:29.51.80, ಜುನೇದ್‌); ಅನ್ಶುಲ್ ದೊಂಡಿಯಾಲ್ (ಕುಮಾಂವ್‌)–2, ಪರಮ್‌ಜೀತ್ ಬಿಷ್ಠ್‌ (ಮಂಗಳೂರು)–3;

ಜಾವೆಲಿನ್ ಥ್ರೋ: ರಿಷಭ್ ನೆಹ್ರಾ (ರಾಮ್‌ಮನೋಹರ್)–1. ದೂರ: 76.64 ಮೀ (ಕೂಟ ದಾಖಲೆ: ಹಿಂದಿನದು.70 ಮೀ, ಕುಮಾರ್ ಮಹಾರಾಜ), ಕುನ್ವರ್ ಅಜಯ್‌ ರಾಜ್ (ಲವ್ಲಿ)–2, ಇಜರ್ ಮಹಮ್ಮದ್ (ಪ್ರೊ ರಾಜೇಂದ್ರ)–3;

3000 ಮೀ ಸ್ಟೀಪಲ್ ಚೇಸ್: ಪ್ರಿನ್ಸ್ ಮಿಶ್ರಾ (ಲವ್ಲಿ)–1. ಕಾಲ:8:58.39 (ಕೂಟ ದಾಖಲೆ, ಹಳೆಯದು9:11.26, ಎ. ಪೂನಿಯಾ), ಲೋಕೇಶ್ (ಮಹರ್ಷಿ ಚೌಧರಿ)–2, ಸಿದ್ದಾಂತ್‌ (ಶಿವಾಜಿ)–3.

ಮಹಿಳೆಯರ 400 ಮೀ ಓಟ: ಪ್ರಿಯಾ ಮೋಹನ್ (ಜೈನ್)–1. ಕಾಲ: 54.43 ಸೆ, ಪ್ಲಾರೆನ್ಸ್ ಬಾರ್ಲಾ (ರಾಂಚಿ)–2, ಲಿಖಿತಾ ಎ.ಎಂ (ಮಂಗಳೂರು)–3;

3000 ಮೀ ಸ್ಟೀಪಲ್ ಚೇಸ್‌: ಕೋಮಲ್‌ ಜಗದಾಳೆ (ಪುಣೆ)–1. ಕಾಲ 10:13.49 (ಕೂಟ ದಾಖಲೆ; ಹಳೆಯದು: 10:26.63, ಕೋಮಲ್ ಜಗದಾಳೆ); ರೆಬಿ ಪಾಲ್ (ಬನಾರಸ್)–2, ಕಾಜಲ್ ಶರ್ಮಾ (ಲಖನೌ)–3;

4x100 ಮೀ ರಿಲೆ: ಎಂ.ಜಿ ವಿವಿ–1. ಕಾಲ: 47.02 (ಕೂಟ ದಾಖಲೆ; ಹಳೆಯದು: 47.37, ಎಂ.ಜಿ), ಮಂಗಳೂರು ವಿವಿ–2, ರಾಂಚಿ ವಿವಿ–3;

100 ಮೀ ಹರ್ಡಲ್ಸ್‌: ಅಪರ್ಣಾ ರಾಯ್ (ಕೇರಳ)–1. ಕಾಲ: 14.28 ಸೆ, ಕೆ.ನಂದಿನಿ (ಮದ್ರಾಸ್‌)–2, ಆ್ಯನ್‌ ರೋಸ್ ಟಾಮಿ (ಕ್ಯಾಲಿಕಟ್‌)–3;

ಲಾಂಗ್ ಜಂಪ್‌: ಆ್ಯನ್ಸಿ ಸೋಜನ್‌ (ಕ್ಯಾಲಿಕಟ್‌)–1. ಅಂತರ: 5.98 ಮೀ, ಸಾಂಡ್ರ ಬಾಬು (ಕ್ಯಾಲಿಕಟ್‌)–2, ಶ್ರುತಿಲಕ್ಷ್ಮಿ (ಮಂಗಳೂರು)–3;

ಶಾಟ್‌ಪಟ್‌: ಅಂಬಿಕಾ (ಮೈಸೂರು)–1. ದೂರ: 14.04 ಮೀ, ಜಾಸ್ಮಿನ್‌ (ಲವ್ಲಿ)–2, ರೇಖಾ (ಮಂಗಳೂರು)–3;

ಜಾವೆಲಿನ್ ಥ್ರೋ: ಜ್ಯೋತಿ (ದೇವಿಲಾಲ್)–1. ದೂರ: 46.32 ಮೀ; ಕರಿಷ್ಮಾ ಸನಿಲ್ (ಮಂಗಳೂರು)–2, ಪುಷ್ಪಾ (ಮಹಾರಾಜ ಗಂಗಾಸಿಂಗ್)–3.

ಕುಸ್ತಿ: ಪುರುಷರ 130 ಕೆಜಿ ಗ್ರೀಕೊ ರೋಮನ್: ಸತೀಶ್‌ (ಮಹರ್ಷಿ ದಯಾನಂದ್‌)–1, ಅಶೋಕ್ ಗ್ರಿವಾಲ್ (ಚೌಧರಿ ಬನ್ಸಿಲಾಲ್)–2, ತುಷಾರ್ ದುಬೆ (ಭಾರತೀಯ ವಿದ್ಯಾಪೀಠ)–3.

ಆರ್ಚರಿ (ಚಿನ್ನ ಮಾತ್ರ): ಪುರುಷರ ರಿಕರ್ವ್‌: ಸಚಿನ್ ಗುಪ್ತ: ಕುರುಕ್ಷೇತ್ರ; ರಿಕರ್ವ್ ತಂಡ: ಕುರುಕ್ಷೇತ್ರ;

ಮಹಿಳೆಯರ ರಿಕರ್ವ್‌: ಚಾರುಲತಾ ಕಮಲಾಪುರ–ಪುಣೆ; ತಂಡ: ಮಹರ್ಷಿ ದಯಾನಂದ್‌; ಮಿಶ್ರ: ಕುರುಕ್ಷೇತ್ರ.

ಟೆನಿಸ್‌: ಒಸ್ಮಾನಿಯಾ ವಿವಿ–1, ರಾಜಸ್ಥಾನ–2, ಗುಜರಾತ್‌–3;

ಪೆನ್ಸಿಂಗ್‌: ಪುರುಷರ ಫಾಯಿಲ್: ಗುರುನಾನಕ್‌–1, ಲವ್ಲಿ–2, ಪಂಜಾಬ್‌–3.

ಯೋಗಾಸನ: ಪುರುಷರ ವಿಭಾಗ: ರಾಷ್ಟ್ರಸಂತ್ ತುಕಡೋಜಿ ವಿವಿ–1, ಶಿವಾಜಿ –2, ಚೌಧರಿ ಬನ್ಸಿಲಾಲ್–3;

ಮಹಿಳಾ ವಿಭಾಗ: ಸಾವಿತ್ರಿಬಾಯಿ ಫುಲೆ–1, ರಾಷ್ಟ್ರಸಂತ್ ತುಕಡೋಜಿ–2, ಗುರು ಜಂಬೇಶ್ವರ್‌–3.

ಶೂಟಿಂಗ್‌:ಮಹಿಳೆಯರ 10 ಮೀ ಏರ್‌ ಪಿಸ್ತೂಲ್: ಯುವಿಕಾ ತೋಮರ್ (ಸಿಸಿಎಸ್‌ ಮೀರಟ್‌)–1. ಪಾಯಿಂಟ್ಸ್‌: 16, ರಾಧಿಕಾ ತನ್ವರ್‌ (ಚೌಧರಿ ಬನ್ಸಿಲಾಲ್)–2, ಅಲಕಾ ಸಿಂಗ್ (ಡೆಲ್ಲಿ)–3;

50 ಮೀ ರೈಫಲ್–3 ಪೊಸಿಷನ್: ಆಶಿ ಚೌಕಸೆ (ಅಮೃತಸರ)–1. ಪಾಯಿಂಟ್ಸ್‌–17, ಸೃಷ್ಟಿ ಮಿಶ್ರಾ (ಬರ್ಕತ್‌ ಉಲ್ಲಾ)–2, ಮಾನಿನಿ ಕೌಶಿಕ್ (ಮಣಿಪಾಲ್)–3.

ಎರಡು ತಾಸು ಸ್ಪರ್ಧೆ ಸ್ಥಗಿತ
ಸಂಜೆ ಸುರಿದ ಭಾರಿ ಮಳೆಯಿಂದಾಗಿ ಅಥ್ಲೆಟಿಕ್ ಸ್ಪರ್ಧೆಗಳನ್ನು ಕೆಲಕಾಲ ಸ್ಥಗಿತಗೊಳಿಸಲಾಯಿತು. ಫೀಲ್ಡ್‌ನಲ್ಲಿ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆ ಅಂತಿಮ ಹಂತದಲ್ಲಿದ್ದಾಗ ಟ್ರ್ಯಾಕ್‌ನಲ್ಲಿ ಮಹಿಳೆಯರ 100 ಮೀಟರ್ಸ್ ಮತ್ತು ಪುರುಷರ 110 ಮೀ ಹರ್ಡಲ್ಸ್‌ಗೆ ಸಿದ್ಧತೆ ನಡೆಯುತ್ತಿತ್ತು. ಮಳೆಯ ನಡುವೆಯೇ ಸ್ವಲ್ಪ ಹೊತ್ತು ಜಾವೆಲಿನ್ ಸ್ಪರ್ಧೆ ಮುಂದುವರಿಸಲಾಯಿತು. ನಂತರ ಸ್ಥಗಿತಗೊಳಿಸಲಾಯಿತು. ಎರಡು ತಾಸುಗಳ ನಂತರ ಪುನರಾರಂಭ ಮಾಡಲಾಯಿತು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅಂಗಣದಲ್ಲಿ ಮಹಿಳಾ ಹಾಕಿಯ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿತು. ಸಂಜೆ 5 ಗಂಟೆಗೆ ಪಂದ್ಯ ಆರಂಭವಾಗಬೇಕಾಗಿತ್ತು. ಅಂಗಣದಲ್ಲಿ ನೀರು ನಿಂತಿದ್ದರಿಂದ ನಿಗದಿತ ಸಮಯಕ್ಕೆ ಶುರುಮಾಡಲು ಆಗಲಿಲ್ಲ. ಒಂದೂಕಾಲು ತಾಸಿನ ನಂತರ ಪಂದ್ಯ ಆರಂಭಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT