ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಸೌರಾಷ್ಟ್ರದ ಮಾಜಿ ಕ್ರಿಕೆಟಿಗ ಅಂಬಾಪ್ರಥಾಸಿಂಗ್‌ ಜಡೇಜ ಸಾವು

Last Updated 4 ಜನವರಿ 2022, 13:52 IST
ಅಕ್ಷರ ಗಾತ್ರ

ರಾಜ್‌ಕೋಟ್‌:ಕೋವಿಡ್–19ರಿಂದ ಬಳಲುತ್ತಿದ್ದ ಸೌರಾಷ್ಟ್ರದ ಮಾಜಿ ಕ್ರಿಕೆಟಿಗ ಅಂಬಾಪ್ರಥಾಸಿಂಗ್ ಜಡೇಜ (69)ಮಂಗಳವಾರ ಮೃತಪಟ್ಟಿದ್ದಾರೆ. ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ (ಎಸ್‌ಸಿಎ) ಈ ವಿಷಯ ತಿಳಿಸಿದೆ.

ಜಾಮ್‌ನಗರದ ಜಡೇಜ, ಬಲಗೈ ಮಧ್ಯಮವೇಗಿ ಮತ್ತು ಬಲಗೈ ಬ್ಯಾಟರ್ ಆಗಿದ್ದರು. ಎಂಟು ರಣಜಿ ಟ್ರೋಫಿ ಪಂದ್ಯಗಳಲ್ಲಿ ಸೌರಾಷ್ಟ್ರ ತಂಡವನ್ನು ಪ್ರತಿನಿಧಿಸಿದ್ದರು. ಗುಜರಾತ್‌ನ ಡಿಎಸ್‌ಪಿ ಆಗಿಯೂ ಕಾರ್ಯನಿರ್ವಹಿಸಿದ್ದರು.

ಅಭಿಷೇಕ್ ದಾಲ್ಮಿಯಾ, ಶುಕ್ಲಾಗೆ ಸೋಂಕು: ಬಂಗಾಳ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ (ಸಿಎಬಿ) ಅಧ್ಯಕ್ಷ ಅಭಿಷೇಕ್ ದಾಲ್ಮಿಯಾ, ತಂಡದ ಮಾಜಿ ನಾಯಕ ಮತ್ತು 23 ವರ್ಷದೊಳಗಿನವರ ತಂಡದ ಹಾಲಿ ಕೋಚ್ ಲಕ್ಷ್ಮಿರತನ್ ಶುಕ್ಲಾ ಅವರಿಗೂ ಕೋವಿಡ್ ಖಚಿತಪಟ್ಟಿದೆ.

ಸಿಎಬಿ ಕಾರ್ಯದರ್ಶಿ ಸ್ನೇಹಶಿಶ್ ಗಂಗೂಲಿ ಮತ್ತು ಏಳು ಮಂದಿ ಆಟಗಾರರಲ್ಲಿ ಸೋಂಕು ಪತ್ತೆಯಾಗಿತ್ತು.

ಜಿಂಬಾಬ್ವೆಯ ಯುವ ಕ್ರಿಕೆಟಿಗರಿಗೆ ಕೊರೊನಾ: 19 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಗೆ ಆಯ್ಕೆಯಾಗಿದ್ದ ಜಿಂಬಾಬ್ವೆಯ ನಾಲ್ವರು ಕ್ರಿಕೆಟಿಗರಿಗೆ ಕೊರೊನಾ ದೃಢಪಟ್ಟಿದೆ. ಭಾನುವಾರ ಮುಕ್ತಾಯಗೊಂಡ ಐರ್ಲೆಂಡ್‌ ಯುವ ತಂಡದ ಎದುರಿನ ಏಕದಿನ ಸರಣಿಯಲ್ಲಿ ಈ ಆಟಗಾರರು ಕಣಕ್ಕಿಳಿದಿದ್ದರು.

ರಾಷ್ಟ್ರೀಯ ಯೂತ್ ಅಥ್ಲೆಟಿಕ್ಸ್ ಮುಂದಕ್ಕೆ: ಕೋವಿಡ್‌ ಹಾವಳಿಯ ಕಾರಣದಿಂದಾಗಿ ರಾಷ್ಟ್ರೀಯ ಯೂತ್ ಚಾಂಪಿಯನ್‌ಷಿಪ್‌ಅನ್ನು ಭಾರತ ಅಥ್ಲೆಟಿಕ್ಸ್ ಫೆಡರೇಷನ್‌ (ಎಎಫ್‌ಐ) ಮಂಗಳವಾರ ಅನಿರ್ದಿಷ್ಟಾವಧಿಗೆ ಮುಂದೂಡಿದೆ.

ಜನವರಿ 27ರಿಂದ 29ರವರೆಗೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಈ ಚಾಂಪಿಯನ್‌ಷಿಪ್ ನಿಗದಿಯಾಗಿತ್ತು. ಇತ್ತೀಚೆಗೆ ಏಷ್ಯನ್ ಚಾಂಪಿಯನ್‌ಷಿಪ್‌ಗಳನ್ನು ಕೋವಿಡ್‌ ಹಿನ್ನಲೆಯಲ್ಲಿ ಮುಂದೂಡಲಾಗಿತ್ತು.

ಆಸ್ಟ್ರೇಲಿಯಾ ದೇಶಿ ಕ್ರಿಕೆಟ್‌ ಲೀಗ್‌ಗಳ ಮೇಲೆ ಕರಿನೆರಳು: ಆಸ್ಟ್ರೇಲಿಯಾದ ದೇಶಿ ಕ್ರಿಕೆಟ್‌ ಲೀಗ್‌ಗಳಿಗೂ ಕೋವಿಡ್‌ ಹಾವಳಿಯ ಬಿಸಿ ತಟ್ಟಿದೆ. ಸೋಂಕು ಪಸರಿಸುವ ಕುರಿತುಆಟಗಾರರು ಆತಂಕ ವ್ಯಕ್ತಪಡಿಸಿರುವ ಕಾರಣ ರಾಷ್ಟ್ರೀಯ ಮಹಿಳಾ ಲೀಗ್‌ ಮತ್ತು ಪುರುಷರ ಟೂರ್ನಿಗಳನ್ನು ಮುಂದೂಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಬಿಗ್ ಬ್ಯಾಷ್ ಲೀಗ್(ಬಿಬಿಎಲ್‌) ಕೂಡ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ಋತುವನ್ನು ಹೇಗೆ ಪೂರ್ಣಗೊಳಿಸಬೇಕು ಮತ್ತು ಆಟಗಾರರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿರಿಸುವುದು ಹೇಗೆ ಎಂಬುದು ಕ್ರಿಕೆಟ್ ಆಸ್ಟ್ರೇಲಿಯಾದ (ಸಿಎ) ಕಳವಳಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT