ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಕ್ವೆಸ್ಟ್ರಿಯನ್‌: ಏಷ್ಯನ್‌ ಗೇಮ್ಸ್‌ಗೆ ಸೆತಲ್ವಾಡ್‌ ಸಹೋದರರು

Last Updated 26 ಅಕ್ಟೋಬರ್ 2021, 14:31 IST
ಅಕ್ಷರ ಗಾತ್ರ

ಬೆಂಗಳೂರು: ಸೆತಲ್ವಾಡ್ ಸಹೋದರರಾದ ಕೇವಾನ್ ಮತ್ತು ಜಹಾನ್ ಸೇರಿದಂತೆ ಭಾರತದ ನಾಲ್ವರು ಈಕ್ವೆಸ್ಟ್ರಿಯನ್ ಪಟುಗಳು ಏಷ್ಯನ್ ಗೇಮ್ಸ್‌ನ ಶೋ ಜಂಪಿಂಗ್‌ ವಿಭಾಗದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಮುಂದಿನ ವರ್ಷ ನಿಗದಿಯಾಗಿರುವ ಏಷ್ಯನ್ ಗೇಮ್ಸ್‌ಗಾಗಿ ಇಲ್ಲಿ ನಡೆದ ಮೊದಲ ಹಂತದ ಟ್ರಯಲ್ಸ್‌ಗಳಲ್ಲಿ ಅವರು ಆಯ್ಕೆಯಾದರು.

ಪ್ರಣಯ್‌ ಖರೆ ಮತ್ತು ಯಶಾನ್‌ ಖಂಬಟ್ಟ ಅವರು ಏಷ್ಯನ್ ಕೂಟಕ್ಕೆ ಆಯ್ಕೆಯಾದ ಇನ್ನಿಬ್ಬರು ಪಟುಗಳು. ಚೀನಾದ ಹಾಂಗ್‌ಜೌನಲ್ಲಿ 2022ರ ಸೆಪ್ಟೆಂಬರ್‌ 10ರಿಂದ 25ರವರೆಗೆ ಏಷ್ಯನ್ ಗೇಮ್ಸ್‌ ನಡೆಯಲಿದ್ದು, ಐದು ಅಶ್ವಗಳಾದ ವೆನಿಲ್ಲಾ ಸ್ಕೈ, ಅಲಾಸ್ದೇರ್‌, ಕ್ವಿಂಟುಸ್‌ ಜೆಡ್‌, ಲೊರೆಂಜೊ ಮತ್ತು ಎಲ್‌ ಕ್ಯಾಪಿಟನ್‌ಗಳೊಂದಿಗೆ ಇವರು ಭಾಗವಹಿಸಲಿದ್ದಾರೆ.

ಕೇವಾನ್ ಹಾಗೂ ಜಹಾನ್‌, 2018ರಲ್ಲಿ ಇಂಡೊನೇಷ್ಯಾದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲೂ ಭಾರತವನ್ನು ಪ್ರತಿನಿಧಿಸಿದ್ದರು.

‘ಒಟ್ಟು ನಾಲ್ಕು ಮಂದಿ ಅಶ್ವಾರೋಹಿಗಳು ಮತ್ತು ಐದು ಕುದುರೆಗಳು ಟ್ರಯಲ್ಸ್‌ನಲ್ಲಿ ಗೆದ್ದು ಅರ್ಹತೆ ಗಳಿಸಿವೆ‘ ಎಂದು ಈಕ್ವೆಸ್ಟ್ರಿಯನ್ ಫೆಡರೇಷನ್ ಆಫ್‌ ಇಂಡಿಯಾ (ಇಎಫ್‌ಐ) ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT