ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾರಿಸ್‌ ಒಲಿಂಪಿಕ್ಸ್‌: ಕಟ್ಟಡದಿಂದ ವಲಸಿಗರ ತೆರವು

Published 17 ಏಪ್ರಿಲ್ 2024, 14:57 IST
Last Updated 17 ಏಪ್ರಿಲ್ 2024, 14:57 IST
ಅಕ್ಷರ ಗಾತ್ರ

ವಿಟ್ರಿ ಸುರ್‌ ಸೀನ್‌ (ಫ್ರಾನ್ಸ್‌): ಒಲಿಂಪಿಕ್ಸ್‌ಗೆ ನೂರು ದಿನಗಳಷ್ಟೇ ಉಳಿದಿದ್ದು, ಫ್ರೆಂಚ್‌ ಅಧಿಕಾರಿಗಳು ಪ್ಯಾರಿಸ್‌ನ ದಕ್ಷಿಣ ಹೊರವಲಯದ ಸರ್ಕಾರಿ ಕಟ್ಟಡವೊಂದರಲ್ಲಿ ಆಶ್ರಯ ಪಡೆದಿದ್ದ  ನೂರಾರು ವಲಸಿಗರನ್ನು ಬುಧವಾರ ತೆರವುಗೊಳಿಸಿದರು.

ಅವರಿಗೆ ಫ್ರಾನ್ಸ್‌ನ ಬೇರೆ ಭಾಗಗಳಿಗೆ ಹೋಗುವಂತೆ ಮನವೊಲಿಸಿ ಬಸ್‌ ವ್ಯವಸ್ಥೆ ಮಾಡಿಕೊಟ್ಟರು. ಒಲಿಂಪಿಕ್ಸ್‌ ವೇಳೆಗೆ ನಗರವನ್ನು ಅಂದಗೊಳಿಸಲು ಫ್ರಾನ್ಸ್‌ ರಾಜಧಾನಿಯಿಂದ ನಿರ್ವಸಿತರನ್ನು ಹೊರದಬ್ಬಲಾಗುತ್ತಿದೆ ಎಂದು ಸೇವಾಸಂಸ್ಥೆಗಳು ಇದೇ ವೇಳೆ ಅಧಿಕಾರಿಗಳ ವಿರುದ್ಧ ಆರೋಪ ಮಾಡಿವೆ.

ಪ್ಯಾರಿಸ್‌ನಲ್ಲಿ ಜುಲೈ 26 ರಿಂದ ಆಗಸ್ಟ್‌ 11ರವರೆಗೆ ಒಲಿಂಪಿಕ್ಸ್‌ ನಡೆಯಲಿದೆ.

ಈ ಹಿಂದೆ ಕಚೇರಿಯಾಗಿದ್ದು, ಪಾಳುಬಿದ್ದಿದ್ದ ಕಟ್ಟಡದಲ್ಲಿ 450 ಮಂದಿ ವಲಸಿಗರು ವಾಸವಾಗಿದ್ದರು. ಅವರೆಲ್ಲರ ದಾಖಲೆಗಳನ್ನು ಸಂಗ್ರಹಿಸಿದ್ದು, ಸಾಮಾಜಿಕ ವಸತಿ ಯೋಜನೆಯಡಿ ಸೂರಿಗೆ ಅವರು ಕಾಯುತ್ತಿದ್ದರು ಎಂದು ನೆರವಿಗೆ ಬಂದಿದ್ದ ಸರ್ಕಾರೇತರ ಸಂಸ್ಥೆಗಳು ತಿಳಿಸಿವೆ.

ಅಂದಾಜು 300 ಮಂದಿ ಬ್ಯಾಗು, ಸೂಟ್‌ಕೇಸುಗಳಲ್ಲಿ ಬಟ್ಟೆಬರೆ ತುಂಬಿ ಬೆಳಿಗ್ಗೆ ಹೊರಟರು. ಯುವಕರು, ಮಹಿಳೆಯರು ಪುಟ್ಟ ಮಕ್ಕಳೊಂದಿಗೆ ಹೊರಟರು. ಅಧಿಕಾರಿಗಳು ಅವರ ದಾಖಲೆಗಳನ್ನು ಪರಿಶೀಲಿಸಿದರು.

ಬಸ್ಸುಗಳು ಆರ್ಲಿನ್ಸ್ ಮತ್ತು ಬೊಡೊ ನಗರಗಳತ್ತ ತೆರಳಲು ಸಜ್ಜಾಗಿದ್ದವು. ಆದರೆ ಬಹುತೇಕ ಮಂದಿ ಪ್ಯಾರಿಸ್‌ ವಲಯದಲ್ಲೇ ಅವಕಾಶ ನೀಡುವಂತೆ ಮನವಿ ಮಾಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT