ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ.9ರಿಂದ ಕರ್ನಾಟಕ ಸ್ಟೇಟ್‌ ಸ್ಪೀಡ್‌ ರೋಲರ್‌ ಸ್ಕೇಟಿಂಗ್‌ ಚಾಂಪಿಯನ್‌ಷಿಪ್‌

Published 7 ನವೆಂಬರ್ 2023, 23:30 IST
Last Updated 7 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ರೋಲರ್‌ ಸ್ಪೋರ್ಟ್ಸ್‌ ಅಸೋಸಿಯೇಷನ್‌ (ಡಿಕೆಆರ್‌ಎಸ್‌ಎ) ವತಿಯಿಂದ ಕರ್ನಾಟಕ ರೋಲರ್‌ ಸ್ಕೇಟಿಂಗ್‌ ಅಸೋಸಿಯೇಷನ್‌ ಸಹಯೋಗದಲ್ಲಿ ನ. 9ರಿಂದ 12ರವರೆಗೆ ಇಲ್ಲಿನ ಅಶೋಕನಗರದ ಹೊಯಿಗೆಬೈಲಿನಲ್ಲಿರುವ ಫ್ರಾನ್ಸಿಸ್‌ ಡೋರಿಸ್‌ ಸ್ಕೇಟ್‌ ಸಿಟಿಯಲ್ಲಿ 39ನೇ ಕರ್ನಾಟಕ ರಾಜ್ಯ ಸ್ಪೀಡ್‌ ರೋಲರ್‌ ಸ್ಕೇಟಿಂಗ್‌ ಚಾಂಪಿಯನ್‌ಷಿಪ್‌ ಮತ್ತು ಆಯ್ಕೆ ಟ್ರಯಲ್ಸ್‌ ಆಯೋಜಿಸಲಾಗಿದೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಆಯೋಜನಾ ಸಮಿತಿ ಅಧ್ಯಕ್ಷ, ಮೇಯರ್‌ ಸುಧೀರ್‌ ಶೆಟ್ಟಿ, ‘ಈ ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯದ 500 ಸ್ಕೇಟರ್‌ಗಳು ಭಾಗವಹಿಸಲಿದ್ದಾರೆ. ಇಲ್ಲಿ ವಿಜೇತರಾದವರು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುತ್ತಾರೆ. ವಿವಿಧ ವಯೋಮಾನದ ಬಾಲಕರು, ಬಾಲಕಿಯರು, ಪುರುಷರು, ಮಹಿಳೆಯರಿಗೆ ರಿಂಕ್‌ ಮತ್ತು ರೋಡ್‌ ವಿಭಾಗಗಳಲ್ಲಿ ಸ್ಪರ್ಧೆ ನಡೆಯುತ್ತವೆ. ವಿಶೇಷ ಚೇತನರೂ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಫ್ರಾನ್ಸಿಸ್‌ ಡೋರಿಸ್‌ ಸ್ಕೇಟ್‌ ಸಿಟಿಯಲ್ಲಿ ರಿಂಕ್‌ ಹಾಗೂ ಮುಂಚೂರಿನ ನಾರ್ತರ್ನ್‌ ಸ್ಕೈ ಲೇಔಟ್‌ನಲ್ಲಿ ರಸ್ತೆ ವಿಭಾಗದ ಸ್ಪರ್ಧೆ ನಡೆಯುತ್ತದೆ’ ಎಂದು ತಿಳಿಸಿದರು.

ನ.9ರಂದು ಸಂಜೆ 5.30ಕ್ಕೆ ಫ್ರಾನ್ಸಿಸ್‌ ಡೋರಿಸ್‌ ಸ್ಕೇಟ್‌ ಸಿಟಿಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದರು.

ಡಿಕೆಆರ್‌ಎಸ್‌ಎ ಕಾರ್ಯಕಾರಿ ಸಮಿತಿ ಸದಸ್ಯ ಸಂತೋಷ್‌ ಶೆಟ್ಟಿ ಮಾತನಾಡಿ, ಫ್ರಾನ್ಸಿಸ್‌, ಡೋರಿಸ್‌ ದಂಪತಿ ಇಲ್ಲಿ ಸುಸಜ್ಜಿತ ಸ್ಕೇಟಿಂಗ್‌ ರಿಂಕ್‌ ನಿರ್ಮಿಸಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT