ಅಸ್ತಾನಾ (ಕಜಕಸ್ತಾನ) (ಪಿಟಿಐ); ಭಾರತದ ಗೌರವ್ ಚೌಹಾಣ್ ಅವರು ಎಲೋರ್ಡಾ ಕಪ್ ಬಾಕ್ಸಿಂಗ್ ಟೂರ್ನಿಯ ಪುರುಷರ 92+ ಕೆ.ಜಿ ವಿಭಾಗದಲ್ಲಿ ಮಂಗಳವಾರ ಸೆಮಿಫೈನಲ್ ಪ್ರವೇಶಿಸಿದರೆ, ಅನುಭವಿ ಶಿವ ಥಾಪಾ ಮೊದಲ ಸುತ್ತಿನಲ್ಲಿಯೇ ನಿರ್ಗಮಿಸಿದ್ದಾರೆ.

ಗೌರವ್ ತಮ್ಮ ಆರಂಭಿಕ ಪಂದ್ಯದಲ್ಲಿ ಸ್ಥಳೀಯ ಫೇವರಿಟ್ ಡ್ಯಾನಿಯಲ್ ಸಪರ್ಬೆ ವಿರುದ್ಧ 3-2 ಅಂತರದಲ್ಲಿ ಜಯ ಸಾಧಿಸಿ, ಕನಿಷ್ಠ ಕಂಚಿನ ಪದಕ ಖಚಿತಪಡಿಸಿಕೊಂಡರು.

ಆದರೆ ಆರು ಬಾರಿ ಏಷ್ಯನ್ ಚಾಂಪಿಯನ್‌ಷಿಪ್ ಪದಕ ವಿಜೇತ ಶಿವ 63.5 ಕೆ.ಜಿ ವಿಭಾಗದಲ್ಲಿ ಕಜಕಸ್ತಾನದ ಅಬ್ದುಯಾಲಿ ಅಲ್ಮಾತ್ ವಿರುದ್ಧ 1-4 ಅಂತರದಲ್ಲಿ ಸೋತರು.

ಸಂಜಯ್ (80 ಕೆ.ಜಿ) ಅವರು ಹಾಲಿ ಏಷ್ಯನ್ ಗೇಮ್ಸ್ ಚಾಂಪಿಯನ್ ಚೀನಾದ ಟುವೊಹೆಟೆರ್ಬಿಕೆ ತಂಗ್ಲಾಟಿಹಾನ್ ವಿರುದ್ಧ 0-5 ಅಂತರದಲ್ಲಿ ಸೋತು ಸ್ಪರ್ಧೆಯಿಂದ ನಿರ್ಗಮಿಸಿದರು.

ಮನೀಷಾ (60 ಕೆಜಿ), ಮೋನಿಕಾ (81+ಕೆಜಿ) ಮತ್ತು ಲಾಲ್ಫಕ್ಮಾವಿ ರಾಲ್ಟೆ (81+ ಕೆಜಿ) ಅವರು ಬುಧವಾರ ಕಣಕ್ಕಿಳಿಯಲಿದ್ದಾರೆ.

ಕಡಿಮೆ ಪ್ರವೇಶಗಳಿದ್ದ ಕಾರಣ 81+ ಕೆಜಿ ವಿಭಾಗದಲ್ಲಿ ರಾಲ್ಟೆ ಅವರನ್ನು ‘ಡ್ರಾ’ ಮೂಲಕ ಸೇರ್ಪಡೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.