15 ವರ್ಷದೊಳಗಿನವರ ವಿಭಾಗದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸುಹಾನಾ 11–3, 9–11, 11–8, 9–11, 11–7ರಿಂದ ಭಾರತದವರೇ ಆದ ಪ್ರೀತಾ ವರ್ತಿಕರ್ ಸವಾಲು ಮೀರಿದರು. ಸುಹಾನಾ ಅವರಿಗೆ ಇದು ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಎರಡನೇ ಚಿನ್ನ. ಸ್ಲೊವೇನಿಯಾ ನಿವಾಸಿಯಾಗಿದ್ದ ವೇಳೆ ಅವರು ಟೂರ್ನಿಯೊಂದರಲ್ಲಿ ಅಗ್ರಸ್ಥಾನ ಗಳಿಸಿದ್ದರು.