ಬೆಂಗಳೂರು: ಕರ್ನಾಟಕದ ಗಾಲ್ಫರ್ ಅವನಿ ಪ್ರಶಾಂತ್ ಅವರು ಗುಜರಾತ್‌ನಲ್ಲಿ ನಡೆಯುತ್ತಿರುವ 36ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಎರಡು ಚಿನ್ನ ಗೆದ್ದುಕೊಂಡರು.

ಅಹಮದಾಬಾದ್‌ನ ಕೆನ್ಸ್‌ವಿಲ್ ಗಾಲ್ಫ್ ಮತ್ತು ಕೌಂಟಿ ಕ್ಲಬ್‌ನಲ್ಲಿ ನಡೆದ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ಬೆಂಗಳೂರಿನ ಗಾಲ್ಫರ್ ಅವನಿ ಚಾಂಪಿಯನ್ ಆದರು.

ಮೂರನೇ ಸುತ್ತಿನ ಬಳಿಕ ಪಂಜಾಬ್‌ನ ಅಮನ್‌ದೀಪ್ ಕೌರ್ ಅವರಿಗಿಂತ ನಾಲ್ಕು ಶಾಟ್‌ಗಳಿಂದ ಹಿಂದಿದ್ದ ಅವನಿ, ಭಾನುವಾರ ನಡೆದ ಕೊನೆಯ ಸುತ್ತಿನಲ್ಲಿ ನಿಖರ ಪ್ರದರ್ಶನ ನೀಡಿದರು. ನಾಲ್ಕು ಸುತ್ತುಗಳಲ್ಲಿ ಒಟ್ಟು 288 ಸ್ಕೋರ್‌ಗಳೊಂದಿಗೆ (71, 74, 71, 72) ಅಗ್ರಸ್ಥಾನ ಪಡೆದರು.

ಕರ್ನಾಟಕ ತಂಡದ ದುರ್ಗಾ ನಿತ್ತೂರ್ ಅವರು ಆರನೇ ಸ್ಥಾನ ಪಡೆದರು. ಅವನಿ ಮತ್ತು ದುರ್ಗಾ ಅವರ ಒಟ್ಟಾರೆ ಪ್ರದರ್ಶನವು ತಂಡ ವಿಭಾಗದಲ್ಲಿ ಕರ್ನಾಟಕಕ್ಕೆ ಚಿನ್ನ ತಂದುಕೊಟ್ಟಿತು.

ಪುರುಷರ ವಿಭಾಗದಲ್ಲಿ ಆರ್ಯನ್ ರೂಪಾ ಆನಂದ್ ಮತ್ತು ತ್ರಿಶೂಲ್ ಚಿಣ್ಣಪ್ಪ ಅವರನ್ನೊಳಗೊಂಡ ತಂಡ ಬೆಳ್ಳಿ ಜಯಿಸಿತು. ಚಂಡೀಗಡ ತಂಡ ಚಿನ್ನ ಗೆದ್ದಿತು. ಇದೇ ತಂಡದ ಕರಣ್‌ದೀಪ್ ಕೊಚ್ಚಾರ್ ಪುರುಷರ ವೈಯಕ್ತಿಕ ವಿಭಾಗದ ಚಿನ್ನ ಜಯಿಸಿದರು.

ವೈಯಕ್ತಿಕ ವಿಭಾಗದಲ್ಲಿ ಆರ್ಯನ್ ಆರನೇ ಸ್ಥಾನ ಪಡೆದರೆ, ತ್ರಿಶೂಲ್ ಅವರು ಜಂಟಿ 13ನೇ ಸ್ಥಾನ ಗಳಿಸಿದರು.

ಕ್ವಾರ್ಟರ್ ಫೈನಲ್‌ಗೆ ಲವ್ಲಿನಾ (ಪಿಟಿಐ ವರದಿ): ಒಲಿಂಪಿಕ್ ಕಂಚಿನ ಪದಕ ವಿಜೇತ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟದ ಪದಕ ವಿಜೇತರಾದ ಮೊಹಮ್ಮದ್ ಹುಸಾಮುದ್ದೀನ್ ಹಾಗೂ ಜಾಸ್ಮಿನ್ ಲಂಬೋರಿಯ ಅವರು ರಾಷ್ಟ್ರೀಯ ಕೂಟದಲ್ಲಿ ಪದಕ ಖಚಿತಪಡಿಸಿಕೊಂಡರು. ಈ ಬಾಕ್ಸರ್‌ಗಳು ತಮ್ಮ ತಮ್ಮ ವಿಭಾಗಗಳಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.