ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಸ್ತಿ ಪಂದ್ಯಾವಳಿ: ಆದಿತ್ಯ, ಭುವನೇಶ್ವರಿಗೆ ಹಂಪಿ ಕಂಠೀರವ ಪ್ರಶಸ್ತಿ

ಹಂಪಿ ಉತ್ಸವ ಪ್ರಯುಕ್ತ
Published : 3 ಫೆಬ್ರುವರಿ 2024, 23:30 IST
Last Updated : 3 ಫೆಬ್ರುವರಿ 2024, 23:30 IST
ಫಾಲೋ ಮಾಡಿ
Comments

ಹಂಪಿ (ವಿಜಯನಗರ): ಹಂಪಿ ಉತ್ಸವ ಪ್ರಯುಕ್ತ ಇಲ್ಲಿಗೆ ಸಮೀಪದ ಮಲಪನಗುಡಿಯಲ್ಲಿ ಶನಿವಾರ ನಡೆದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯ ಪುರುಷರ ವಿಭಾಗದ 86 ಕೆಜಿ ಮೇಲ್ಪಟ್ಟ ಸ್ಪರ್ಧೆಯಲ್ಲಿ ಆದಿತ್ಯ ಧಾರವಾಡ ಮತ್ತು ಮಹಿಳೆಯರ ವಿಭಾಗದ 58 ಕೆಜಿ ಸ್ಪರ್ಧೆಯಲ್ಲಿ ಭುವನೇಶ್ವರಿ ಕೋಳಿವಾಡ ಹಂಪಿ ಕಂಠೀರವ ಪ್ರಶಸ್ತಿ ಮುಡಿಗೇರಿಸಿಕೊಂಡರು.

ದಾವಣಗೆರೆ ಪೈಲ್ವಾನ್ ಬಸವರಾಜ್ ಪಾಟೀಲ ಭುಜಕ್ಕೆ ಪೆಟ್ಟಾಗಿ ಸೋಲು ಒಪ್ಪಿಕೊಂಡಿದ್ದರಿಂದ ‘ಕಂಠೀರವ ಪ್ರಶಸ್ತಿ’ ಧಾರವಾಡದ ಆದಿತ್ಯ ಪಾಟೀಲ್ ಪಾಲಾಯಿತು.

‌85 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಬೆಳಗಾವಿಯ ಮುಸಲಿಕ್ ಆಲಂ ರಾಜಸಾಬ್ ಅವರು ಒಂದೂವರೆ ನಿಮಿಷದಲ್ಲಿ ಎದುರಾಳಿ ಮುದೋಳ್ ಸದಾಶಿವ ನಲವಡೆ ಅವರನ್ನು ಮಣಿಸಿ ‘ಹಂಪಿ ಕೇಸರಿ’ ಪ್ರಶಸ್ತಿ ಗೆದ್ದರು. 65 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಎದುರಾಗಿದ್ದ ಸಹೋದರರ ಕಾದಾಟ ಕುಸ್ತಿ ವೀಕ್ಷಕರ ಕುತೂಹಲ ಹೆಚ್ಚಿಸಿತ್ತು. ಮೊದಲ ಸುತ್ತಿನಲ್ಲಿ ಎರಡು ಪಾಯಿಂಟ್ ಪಡೆದಿದ್ದ ಅಣ್ಣ ಸಂಜೀವ ಕೊರವರ ವಾಕ್ ಓವರ್ ನೀಡಲು ನಿರ್ಧರಿಸಿದ್ದರಿಂದ ‘ಹಂಪಿ ಕಿಶೋರ’ ಪ್ರಶಸ್ತಿ ತಮ್ಮ ಮಂಜು ಕೊರವರಗೆ ಒಲಿಯಿತು.

74 ಕೆಜಿ ಸ್ಪರ್ಧೆಯಲ್ಲಿ ದಾವಣಗೆರೆಯ ಭೀಮಲಿಂಗೇಶ್ವರ ವಿರುದ್ಧ ಹರಪನಹಳ್ಳಿ ಶರತ್ ಸಾದರ ಗೆಲುವು ಪಡೆದು ‘ಹಂಪಿ ಕುಮಾರ’ ಪ್ರಶಸ್ತಿ ಗಿಟ್ಟಿಸಿಕೊಂಡರು.

ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ₹25 ಸಾವಿರ, ಜಿಲ್ಲಾ ಮಟ್ಟದ ಪ್ರಥಮ ಸ್ಥಾನ ಪಡೆದವರಿಗೆ ₹ 5 ಸಾವಿರ ನಗದನ್ನು ಶಾಸಕ ಎಚ್‌.ಆರ್‌.ಗವಿಯಪ್ಪ ಅವರು ವೈಯಕ್ತಿಕವಾಗಿ ಘೋಷಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ 100ಕ್ಕೂ ಅಧಿಕ ಕುಸ್ತಿಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಫಲಿತಾಂಶ: ಪುರುಷರ ವಿಭಾಗ– ಹಂಪಿ ಕಂಠೀರವ: ಆದಿತ್ಯ, ಧಾರವಾಡ. ಹಂಪಿ ಕೇಸರಿ: ಮುಸ್ಲಿಕ್ ಆಲಂ ರಾಜಾಸಾಬ್- ಬೆಳಗಾವಿ. ಹಂಪಿ ಕಿಶೋರ: ಮಂಜು ಗೊರವರ, ಹರಪನಹಳ್ಳಿ. ಹಂಪಿ ಕುಮಾರ: ಶರತ್ ಸಾದರ್, ಹರಪನಹಳ್ವಿಶ್ವನಾಥ ಡಿ.ಳಿ.

ಮಹಿಳೆಯರ ವಿಭಾಗ– ಹಂಪಿ ಕಂಠೀರವ- ಭುವನೇಶ್ವರಿ ಕೋಳಿವಾಡ, ಗದಗ. ಹಂಪಿ ಕೇಸರಿ- ತೇಜಸ್ವಿನಿ ಬಿಂಗಿ, ಗದಗ. ಹಂಪಿ ಕಿಶೋರಿ- ವೈಷ್ಣವಿ ಇಮ್ಮಡಿಯವರ, ಗದಗ. ಹಂಪಿ ಕುಮಾರಿ- ಭುವನೇಶ್ವರಿ ಕೆ.ಎಸ್., ಶಿವಮೊಗ್ಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT