ನವದೆಹಲಿ (ಪಿಟಿಐ): ಸ್ಪೇನ್‌ನಲ್ಲಿ ಡಿ.15 ರಿಂದ 22 ರವರೆಗೆ ನಡೆಯಲಿರುವ ಪಂಚದೇಶಗಳ ಮಹಿಳಾ ಹಾಕಿ ಟೂರ್ನಿಯಲ್ಲಿ ಭಾರತ ತಂಡವನ್ನು ಅನುಭವಿ ಗೋಲ್‌ಕೀಪರ್ ಸವಿತಾ ಪೂನಿಯಾ ಮುನ್ನಡೆಸಲಿದ್ದಾರೆ.
ಟೂರ್ನಿಗೆ 22 ಆಟಗಾರ್ತಿಯರ ತಂಡವನ್ನು ಹಾಕಿ ಇಂಡಿಯಾ ಪ್ರಕಟಿಸಿದ್ದು, ಅನುಭವಿ ಫಾರ್ವರ್ಡ್ ಆಟಗಾರ್ತಿ ವಂದನಾ ಕಟಾರಿಯಾ ಉಪ ನಾಯಕಿಯಾಗಿದ್ದಾರೆ. ವೆಲೆನ್ಸಿಯಾದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಭಾರತವು ಐರ್ಲೆಂಡ್, ಜರ್ಮನಿ, ಸ್ಪೇನ್ ಮತ್ತು ಬೆಲ್ಜಿಯಂ ವಿರುದ್ಧ ಸೆಣಸಲಿದೆ.
ಮುಂದಿನ ವರ್ಷ ನಡೆಯಲಿರುವ ಪ್ಯಾರಿಸ್ ಒಲಂಪಿಕ್ ಕೂಟದ ಕ್ವಾಲಿಫೈಯರ್ ಟೂರ್ನಿಯು ಜ.13ರಿಂದ ರಾಂಚಿಯಲ್ಲಿ ನಡೆಯಲಿದೆ. ಈ ನಿಟ್ಟಿನಲ್ಲಿ ಪಂಚದೇಶಗಳ ಟೂರ್ನಿ ಭಾರತ ತಂಡಕ್ಕೆ ಪೂರ್ವಸಿದ್ಧತೆಗೆ ವೇದಿಕೆಯಾಗಿದೆ.
ತಂಡ ಹೀಗಿದೆ: ಗೋಲ್‌ಕೀಪರ್: ಸವಿತಾ ಪೂನಿಯಾ (ನಾಯಕಿ), ಬಿಚು ದೇವಿ ಖರಿಬಮ್