ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳಾ ಹಾಕಿ ಶಿಬಿರಕ್ಕೆ 33 ಸಂಭವನೀಯರ ಆಯ್ಕೆ

Published : 14 ಸೆಪ್ಟೆಂಬರ್ 2024, 14:25 IST
Last Updated : 14 ಸೆಪ್ಟೆಂಬರ್ 2024, 14:25 IST
ಫಾಲೋ ಮಾಡಿ
Comments

ಬೆಂಗಳೂರು: ಇದೇ ತಿಂಗಳ 15 ರಿಂದ ಅಕ್ಟೋಬರ್‌ 9ರವರೆಗೆ ನಡೆಯಲಿರುವ ಭಾರತ ಮಹಿಳಾ ಹಾಕಿ ತಂಡದ ರಾಷ್ಟ್ರೀಯ ಶಿಬಿರಕ್ಕೆ ಹಾಕಿ ಇಂಡಿಯಾ ಶನಿವಾರ 33 ಮಂದಿ ಸಂಭವನೀಯರ ಪಟ್ಟಿ ಪ್ರಕಟಿಸಿದೆ.

ಭಾರತ ಕ್ರೀಡಾ ಪ್ರಾಧಿಕಾರ ಕೇಂದ್ರದಲ್ಲಿ ಈ ಶಿಬಿರ ನಡೆಯಲಿದ್ದು, ಇದು ಮಹಿಳಾ ಏಷ್ಯನ್ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಗೆ ಸಿದ್ಧತೆಯ ಆರಂಭವಾಗಿದೆ. ಏಷ್ಯನ್ ಚಾಂಪಿಯನ್ಸ್ ಟ್ರೋಫಿ ನವೆಂಬರ್‌ 11 ರಿಂದ 20ರವರೆಗೆ ಬಿಹಾರದ ರಾಜಗೀರ್‌ನಲ್ಲಿ ನಿರ್ಮಿಸಿರುವ ನೂತನ ಕ್ರೀಡಾಂಗಣದಲ್ಲಿ ನಡೆಯಲಿದೆ.

‘ಮುಂಬರುವ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ತಯಾರಿಗೆ ಈ ಶಿಬಿರ ನಿರ್ಣಾಯಕ ಹೆಜ್ಜೆಯಾಗಿದೆ’ ಎಂದು ಮಹಿಳಾ ತಂಡದ ಹೆಡ್‌ ಕೋಚ್‌ ಹರೇಂದ್ರ ಸಿಂಗ್ ಹಾಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಭಾರತ ಮಹಿಳಾ ಹಾಕಿ ತಂಡ ಕೊನೆಯದಾಗಿ 2023/24ರ ಪ್ರೊ ಲೀಗ್‌ನಲ್ಲಿ ಆಡಿತ್ತು.

ಸಂಭವನೀಯ ಆಟಗಾರ್ತಿಯರು:

ಗೋಲ್‌ಕೀಪರ್ಸ್‌: ಸವಿತಾ, ಬಿಚು ದೇವಿ ಖರಿಬಮ್, ಬನ್ಸಾರಿ ಸೋಲಂಕಿ, ಮಾಧುರಿ ಕಿಂಡೊ

ಡಿಫೆಂಡರ್ಸ್‌: ನಿಕಿ ಪ್ರಧಾನ್‌, ಉದಿತಾ, ಇಶಿಕಾ ಚೌಧರಿ, ಮೋನಿಕಾ, ರೋಪ್ನಿ ಕುಮಾರಿ, ಮಹಿಮಾ ಚೌಧರಿ, ಜ್ಯೋತಿ ಚೆಟ್ರಿ, ಪ್ರೀತಿ. ಮಿಡ್‌ಫೀಲ್ಡರ್ಸ್‌: ಸಲಿಮಾ ಟೆಟೆ, ಮರಿನಾ ಲಾಲರಾಮಂಗ್‌ಹಾಕಿ, ವೈಷ್ಣವಿ ವಿಠ್ಠಲ್ ಫಾಳ್ಕೆ, ನೇಹಾ, ಜ್ಯೋತಿ, ಎಡುಲಾ ಜ್ಯೋತಿ, ಬಲಜೀತ್ ಕೌರ್‌, ಮನಿಶಾ ಚೌಹನ್, ಅಕ್ಷತಾ ಆಬಾಸೊ ಧೇಕಳೆ, ಅಜ್ಮಿನಾ ಕುಜುರ್‌.

ಫಾರ್ವರ್ಡ್ಸ್‌: ಸುನೆಲಿತಾ ಟೊಪ್ಪೊ, ಮುಮ್ತಾಝ್‌ ಖಾನ್‌, ಲಾಲ್‌ರೆಮ್ಸಿಯಾನಿ, ಸಂಗೀತಾ ಕುಮಾರಿ, ದೀಪಿಕಾ, ಶರ್ಮಿಳಾ ದೇವಿ, ನವನೀತ್ ಕೌರ್, ದೀಪಿಕಾ ಸೊರೆಂಗ್‌, ಪ್ರೀತಿ ದುಬೆ, ವಂದನಾ ಕಟಾರಿಯಾ, ರುತುಜಾ ದಾದಸೊ ಪಿಸಾಳ,

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT